Monday, January 20, 2025
ಸುದ್ದಿ

‘ಮಂಕು ಭಾಯ್ ಫಾಕ್ಸಿ ರಾಣಿ’ ಕನ್ನಡ ಸಿನಿಮಾದಲ್ಲಿ ಪಂಚಮಿ ಎಂ ರಾವ್ ಕಮಾಲ್ : ‘ಬಿಗ್ ಬಾಸ್ ಸೀಸನ್ 9’ಶೋ ವಿನ್ನರ್ ರೂಪೇಶ್ ಶೆಟ್ಟಿಗೆ ನಟಿಯಾದ ಪಂಚಮಿ ಸಿನಿ ಜರ್ನಿ ಹೇಗಿದೆ..? –ಕಹಳೆ ನ್ಯೂಸ್

ನಗುವಲ್ಲೇ ಎಲ್ಲರನ್ನ ಸೆಳೆವ ಮುದ್ದುಮೊಗದ ಚೆಲುವೇ ಪಂಚಮಿ ಎಂ ರಾವ್.. ಚಾರ್ಮಡಿಯ ಬೆಡಗಿ ಇದೀಗ ಸಿನಿ ತೆರೆಯಲ್ಲಿ ಮಿಂಚುತ್ತಾ ಎಲ್ಲರನ್ನ ಮೋಡಿ ಮಾಡುತ್ತಿದ್ದಾರೆ. ಹೌದು ಮೂಲತಃ ಚಾರ್ಮಾಡಿಯ ನಿವಾಸಿಯಾಗಿರುವ ಪಂಚಮಿ ಎಂ ರಾವ್ ಕನ್ನಡ ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ. ‘ಬಿಗ್ ಬಾಸ್ ಸೀಸನ್ 9’ಶೋ ವಿನ್ನರ್ ರೂಪೇಶ್ ಶೆಟ್ಟಿ ಅವರು ಹೀರೋ ಆಗಿ ನಟಿಸಿರುವ ‘ಮಂಕು ಭಾಯ್ ಫಾಕ್ಸಿ ರಾಣಿ’ ಕನ್ನಡ ಸಿನಿಮಾದಲ್ಲಿ ರೂಪೇಶ್ ಶೆಟ್ಟಿಗೆ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದು, ಇದು ಪಂಚಮಿ ಅವರ ಮೊದಲ ಸಿನೆಮಾ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಸರಾಂತ ರಂಗಭೂಮಿ ಕಲಾವಿದರು ಹಾಗೂ ನಿರ್ದೇಶಕರಾಗಿರುವ ಮಧುಕರ್ ರಾವ್ ಹೆಜ್ ಹಾಗೂ ಸುಧಾ ಎಂ ರಾವ್ ಇವರ ಮುದ್ದಿನ ಮಗಳಾಗಿರುವ ಪಂಚಮಿ, ಇಂಜಿನಿಯರಿAಗ್ ವಿದ್ಯಾಬ್ಯಾಸವನ್ನ ಮುಗಿಸಿದ್ದಾರೆ. ಓದಿನಲ್ಲಿ ಸದಾ ಮುಂದಿದ್ದ ಪಂಚಮಿ, ಕಾಲಿಗೆ ಗೆಜ್ಜೆ ಕಟ್ಟಿ ಭರತನಾಟ್ಯ ಮಾಡೋದರಲ್ಲಿಯೋ ಸೈ ಎನಿಸಿಕೊಂಡಿದ್ದಾರೆ. ಇನ್ನೂ ಕೂಚಿಪುಡಿ ನೃತ್ಯವನ್ನೂ ಕಲಿತಿರುವ ಇವರು ನಟನ ಕ್ಷೇತ್ರದಲ್ಲೂ ಆಸಕ್ತಿಯನ್ನ ಬೆಳೆಸಿಕೊಂಡಿದ್ದರು.

ವೇದಿಕೆ ಹತ್ತೋದಿಕ್ಕೆ ತಾಯಿ ಸದಾ ಬೆಂಬಲಿಸ್ತಾ ಇದ್ರೂ ಹಾಗಾಗಿ ಸ್ಟೇಜ್ ಫಿಯರ್ ಅನ್ನೋದು ನಂಗೆ ಇಲ್ಲ. ತುಳುರಂಗಭೂಮಿ ಕಲಾವಿದ ಮಧುಕರ್ ಇವರ ಮಗಳಾಗಿರುವ ಪಂಚಮಿ ನಂಗೇ ನಟನೆಗೆ ತಂದೆಯೇ ಸ್ಫೋರ್ತಿ ಅಂತಾರೆ.

ಮೊದಲ ಬಾರಿ ಸಿನೆಮಾದಲ್ಲಿ ಕ್ಯಾಮರ ನೋಡಿದಾಗ ತುಂಬಾ ಭಯ ಪಟ್ಟಿರುವ ಇವರು ಮುಂದೆ ಅನೇಕರಿಂದ ನಟನೆಯ ಬಗ್ಗೆ ಕೇಳಿ ತಿಳಿದುಕೊಂಡು ಲೀಲಾಜಾಲವಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ‘ಸಿನಿಮಾ ರಂಗದಲ್ಲಿ ಮೊದಲಿನಿಂದಲೂ ಆಸಕ್ತಿ ಇತ್ತು, ಹಾಗಾಗಿ ಒಳ್ಳೆಯ ಕಂಟೆAಟ್ ಇರುವ ಸಿನಿಮಾ ಮಾಡಬೇಕು ಎಂಬ ಆಸೆಯಿಂದ ಅಂತಹ ಸಿನೆಮಾದ ನಿರೀಕ್ಷೆಯಲ್ಲಿದ್ದೆ. ನಿರೀಕ್ಷೆಗೆ ತಕ್ಕುದಾಗಿ ‘ಮಂಕು ಭಾಯ್ ಫಾಕ್ಸಿ ರಾಣಿ’ ಚಿತ್ರ ಸಿಕ್ಕಿದ್ದು, ಚಿತ್ರದ ಕಥೆ ತುಂಬಾ ವಿಶೇಷ ಎನಿಸಿ ಈ ಸಿನೆಮವನ್ನ ಒಪ್ಪಿಕೊಂಡೆ ಅಂತಾರೆ ಪಂಚಮಿ.

ಈ ಹಿಂದೆ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡ ಪಂಚಮಿಗೆ ಸಿನೇಮಾ ಕ್ಷೇತ್ರಕ್ಕೆ ಕಾಲಿಡೋದಿಕ್ಕೆ ಸಹಾಯ ಮಾಡಿದ್ದು ಮಂಕು ಬಾಯ್ ಫಾಕ್ಸಿ ಗರ್ಲ್ ಸಿನೆಮಾ. ಅಲ್ಲದೆ ನಾಗತ್ತಿಹಳ್ಳಿ ಪ್ರೋಡಕ್ಷನ್‌ನಲ್ಲಿ ಮೂಡಿ ಬಂರಲಿರುವ ಸಿನೆಮಾದಲ್ಲಿ ಪಂಚಮಿ ನಟಿಸಿದ್ದು ಈ ಸಿನೆಮಾ ಶೀಘ್ರದಲ್ಲೆ ರಿಲೀಸ್ ಆಗಲಿದೆ. ‘ಸಿನೆಮಾ ಕ್ಷೇತ್ರದಲ್ಲಿ ಅಂಬೆಕಾಲು ಇಡ್ತಾ ಇದ್ದೇನೆ, ಇದೀಗ ಅನೇಕ ಸಿನೆಮಾ ಸ್ಟೋರಿ ರ‍್ತಾ ಇದೆ, ನಂಗೆ ಇಷ್ಟ ಆಗೋ ಕಥೆಯನ್ನ ಆಯ್ಕೆ ಮಾಡಿಕೊಳ್ತೇನೆ ಅನ್ನೋದು ಪಂಚಮಿ ಅವರ ಮಾತು.

‘ಮಂಕು ಭಾಯ್ ಫಾಕ್ಸಿ ರಾಣಿ’ ಕನ್ನಡ ಸಿನೆಮಾದಲ್ಲಿ ಪಂಚಮಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರ ಪಾತ್ರದ ಸುತ್ತವೇ ಕಥೆಯನ್ನ ಎಣೆಯಲಾಗಿದೆ. ಸಿನೆಮಾದಲ್ಲಿ ಪಂಚಮಿ ಅವರ ಪಾತ್ರದ ಹೆಸರನ್ನೂ ಬಿಟ್ಟುಕೊಡದ ಸಿನೆಮಾ ತಂಡ ಪ್ರೇಕ್ಷಕರಲ್ಲಿ ಕೂತೂಹಲವನ್ನು ಇನ್ನೂ ಹೆಚ್ಚಿಸಿದೆ. ಇನ್ನು ಸಿನೆಮಾದ ಟ್ರೇಲರ್ ನೋಡಿದ ಜನ ಫಿದಾ ಆಗಿದ್ದು ಸಿನೆಮಾಗೆ ಉತ್ತಮ ರೆಸ್ಪಾನ್ಸ್ ಕೊಟ್ಟಿದ್ದಾರೆ. ಸಿನೆಮಾದಲ್ಲಿ ಬರೋ ಪ್ರತಿಯೊಂದು ಪಾತ್ರಗಳನ್ನೂ ಅರ್ಥ ಮಾಡಿಕೊಂಡು ಪ್ರತಿಕ್ರೀಯಿಸ್ತಾ ಇರೋದು ಇನ್ನೂ ವಿಶೇಷವಾಗಿದೆ.

‘ಬಿಗ್ ಬಾಸ್ ಸೀಸನ್ 9’ಶೋ ವಿನ್ನರ್ ರೂಪೇಶ್ ಶೆಟ್ಟಿ ನಟನಾಗಿ ಕಾಣಿಸಿಕೊಂಡಿರುವ ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನೆಮಾವನ್ನ ಗಗನ್ ಎಂ. ನಿರ್ದೇಶನ ಮಾಡಿದ್ದು ಪಂಚಮಿ ಎಂ ರಾವ್ ಜೊತೆಗೆ ‘ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್ ಕೂಡ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಪ್ರಕಾಶ್ ತುಮ್ಮಿನಾಡು, ಅರ್ಜುನ ಕಜೆ, ಪ್ರಶಾಂತ್ ಅಂಚನ್, ವಿವೇಕ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ‘ಜೋಶ್ವ ಮೀಡಿಯಾ ಪ್ರೈವೇಟ್ ಲಿಮಿಟೆಡ್’ ಬ್ಯಾನರ್ ಮೂಲಕ ಜೋಶ್ವ ಜೈಶಾನ್ ಕ್ರಾಸ್ತಾ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿನ್ಯಾಸ್ ಮಧ್ಯ, ಶಮೀರ್ ಮುಡಿಪು ಸಂಗೀತ ನಿರ್ದೇಶನ, ಶಿನೋಯ್ ವಿ ಜೋಸೆಫ್ ಹಿನ್ನೆಲೆ ಸಂಗೀತ, ಎಂ.ಕೆ. ಷಹಜಹಾನ್ ಛಾಯಾಗ್ರಹಣ, ಸುಶಾಂತ್ ಶೆಟ್ಟಿ, ಪ್ರಜ್ವಲ್ ಸುವರ್ಣ ಸಂಕಲನ ಈ ಚಿತ್ರಕ್ಕಿದೆ.
ಮಂಗಳೂರಿನ ಪ್ರತಿಭಾನ್ವಿತ ಯುವ ಸಿನಿ ಉತ್ಸಾಹಿ ತಂಡವೇ ಇದರಲ್ಲಿ ಕೆಲಸ ಮಾಡಿದೆ. ಈಗಾಗಲೇ ಈ ಚಿತ್ರ ಸೆನ್ಸಾರ್ ಮಂಡಳಿಯಿAದ ಅನುಮತಿ ಪಡೆದುಕೊಂಡಿದ್ದು, ನಾಳೆ (13-1-2022) ಸಿನೆಮಾ ಬಿಡುಗಡೆಯಾಗಲಿದೆ.
ಸಿನೆಮಾ ಕ್ಷೇತ್ರದಲ್ಲಿ ಕನಸುಗಳ ಮೂಟೆ ಹೊತ್ತು ಅಂಬೆಗಾಲಿಡುತ್ತಿರುವ ಪಂಚಮಿ ಕನಸೆಲ್ಲ ನನಸಾಗಿ ಮುಂದೆ ಉತ್ತಮ ಸಿನೆಮಾ ಪಂಚಮಿ ಪಾಲಾಗಲಿ ಅನ್ನೋದೆ ನಮ್ಮ ಆಶಯ..