Recent Posts

Monday, January 20, 2025
ಬೆಂಗಳೂರುಸಿನಿಮಾಸುದ್ದಿ

ಬಾಲಿವುಡ್​ಗೆ ಹಾಟ್ ನಟಿ ರಾಗಿಣಿ ; ಲಂಡನ್​ನಲ್ಲಿ ಶೂಟಿಂಗ್​ ಮುಗಿಸಿ ಬಂದ ತುಪ್ಪದ ಬೆಡಗಿ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರು: ರಾಗಿಣಿ ಕಳೆದೆರಡು ವರ್ಷಗಳಲ್ಲಿ ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ಸುದ್ದಿ ಬರುತ್ತಲೇ ಇದೆ. ಆದರೆ, ರಾಗಿಣಿ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಹಲವು ಸಮಯವಾಗಿದೆ. ಇದೆಲ್ಲದರ ನಡುವೆ ರಾಗಿಣಿ ಈಗ ಸದ್ದಿಲ್ಲದೆ ಹಿಂದಿ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಲಂಡನ್​ನಲ್ಲಿ ಒಂದು ಹಂತದ ಚಿತ್ರೀಕರಣ ಮುಗಿಸಿ ವಾಪಸ್ಸಾಗಿದ್ದಾರೆ.

ಅಂದಹಾಗೆ, ರಾಗಿಣಿ ಅಭಿನಯಿಸಿರುವ ಹಿಂದಿ ಚಿತ್ರದ ಹೆಸರು ‘ವಾಕರ್​ ಹೌಸ್’. ಪರಂಬ್ರತಾ ಚಟರ್ಜಿ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದು, ಈಗಾಗಲೇ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಲಂಡನ್​ನಲ್ಲಿ ಮುಗಿದಿದೆಯಂತೆ. ಇದೊಂದು ಹಾರರ್-ಥ್ರಿಲ್ಲರ್ ಚಿತ್ರವಾಗಿದ್ದು, ಆಯುರ್ ಶರ್ಮಾ ನಿರ್ದೇಶಿಸುತ್ತಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ರಾಗಿಣಿ, ‘ನಾನು ಇದರಲ್ಲಿ ಲಂಡನ್ ಮೂಲದ ಬರಹಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಚಿತ್ರದಲ್ಲಿ ಪರಂವ್ಹಾ ಸೇರಿದಂತೆ ಸಾಕಷ್ಟು ಒಳ್ಳೆಯ ಕಲಾವಿದರಿದ್ದಾರೆ. ಇದೊಂದು ಹಾರರ್​ ಚಿತ್ರವಾಗಿದ್ದು, ಒಳ್ಳೆಯ ಕಥೆ ಮತ್ತು ಪಾತ್ರ ಇದ್ದುದರಿಂದ ಒಪ್ಪಿಕೊಂಡಿದ್ದೇನೆ. ನಾನು ಈ ಚಿತ್ರ ಮಾಡುತ್ತಿರುವುದು ನನ್ನ ತಂದೆ-ತಾಯಿಗೆ ಖುಷಿ ಇದೆ. ಅವರ ಸಹಕಾರದಿಂದಲೇ ನಾನು ಇಷ್ಟು ಬೆಳೆಯಲು ಆಗಿದ್ದು’ ಎನ್ನುತ್ತಾರೆ.

ಇನ್ನು, ಬೇರೆ ಚಿತ್ರಗಳ ಬಗ್ಗೆ ಮಾತನಾಡುವ ಅವರು, ‘ಕಳೆದ ವರ್ಷ ಹೆಚ್ಚಾಗಿ ಶೂಟಿಂಗ್​ನಲ್ಲೇ ಬ್ಯುಸಿ ಇದ್ದೆ. ಈ ಹಿಂದಿ ಸಿನಿಮಾ ಜೊತೆಗೆ ಒಂದು ಮಲಯಾಳಂ, ಮೂರು ತಮಿಳು ಹಾಗೂ ಒಂದು ತೆಲುಗು ಚಿತ್ರಗಳಲ್ಲೂ ನಟಿಸಿದ್ದೇನೆ. ಸದ್ಯ ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಎಲ್ಲಾ ಚಿತ್ರರಂಗದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಮಾರ್ಚ್‌ನಿಂದ ನನ್ನ ಸಿನಿಮಾಗಳು ಬಿಡುಗಡೆಯಾಗಲಿವೆ. ತಮಿಳು ಚಿತ್ರದಲ್ಲಿ ಕಮಾಂಡೋ ಪಾತ್ರ ಮಾಡುತ್ತಿದ್ದು, ಇದು ನನಗೆ ವಿಷೇಶವಾದ ಸಿನಿಮಾ’ ಎನ್ನುತ್ತಾರೆ ರಾಗಿಣಿ.

ಒಟಿಟಿ ಬಂದು ನಮ್ಮಂತ ಕಲಾವಿದರಿಗೆ ದೊಡ್ಡ ವೇದಿಕೆ ಆಗಿದೆ ಎನ್ನುವ ಅವರು, ‘ಕಾಂತರ’ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು ಕನ್ನಡ ಚಿತ್ರರಂಗಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ. ಇದು ನಮ್ಮ ಹೆಮ್ಮೆ ಎನ್ನಬಹುದು. ಎಲ್ಲ ಕಡೆ ಕನ್ನಡ ಚಿತ್ರರಂಗದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಿದ್ದಾರೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ರಾಗಿಣಿ.