Thursday, January 23, 2025
ಸುದ್ದಿ

ಬೊಲೆರೋ ವಾಹನದಲ್ಲಿ ಅಕ್ರಮ ಗೋ ಸಾಗಾಟ, ವಾಹನ ನಿಲ್ಲಿಸಿ ಪರಾರಿಯಾದ ಗೋಕಳ್ಳರು – ಕಹಳೆ ನ್ಯೂಸ್

ಮಹೇಂದ್ರ ಬೊಲೆರೋ ವಾಹನದಲ್ಲಿ ಹಿಂಸಾತ್ಮಕವಾಗಿ ಗೋವುಗಳನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದ ಘಟನೆ ಹೆಬ್ರಿಯ ಬಚ್ಚಪ್ಪು ಜಂಕ್ಷನ್ ಬಳಿ ಜ.12ರಂದು ಮುಂಜಾನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಬ್ರಿ ಠಾಣಾ ಪೊಲೀಸರು ಸೀತಾನದಿ ಕೈಕಂಬದ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ನಾಡ್ತಾಲು ಕಡೆಯಿಂದ ಅತಿ ವೇಗವಾಗಿ ಬರುತ್ತಿದ್ದ ಮಹೇಂದ್ರ ಬೊಲೇರೋ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ಅದರ ಚಾಲಕ ವಾಹನವನ್ನು ನಿಲ್ಲಿಸದೆ ಮುದ್ರಾಡಿ ಕಡೆಯ ರಸ್ತೆಗೆ ತಿರುಗಿಸಿ ಅತಿವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ.

ವಾಹನವನ್ನು ಪೊಲೀಸರು ಬೆನ್ನಟ್ಟಿ ಹೋಗಿದ್ದು, ಕಳ್ಳರು ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬಚ್ಚಪ್ಪು ಜಂಕ್ಷನ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿಗೆ ಹೋಗಿ‌ ನಿಂತಿದೆ. ಆದರೆ ವಾಹನದಲ್ಲಿದ್ದ 3 ಮಂದಿ ದುಷ್ಕರ್ಮಿಗಳು ವಾಹನದಿಂದ ಇಳಿದು ಕಾಡಿನ ಕಡೆಗೆ ಓಡಿ ಹೋಗಿ ಪೊಲೀಸರಿಂದ ತಪ್ಪಿಸಿಕೊಂಡಿದ್ದಾರೆ.

ಪೊಲೀಸರರು ವಾಹನವನ್ನು ಪರಿಶೀಲಿಸಿದಾಗ ಒಳಬದಿಯ ಸೀಟ್ ತೆಗೆದು ನೋಡಿದಾಗ ಒಂದು ನೀಲಿಬಣ್ಣದ ಟರ್ಪಾಲ್‌ನ್ನು ಹಾಕಿ ಅದರ ಮೇಲೆ 5 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಕಂಡುಬಂದಿದೆ.