Thursday, January 23, 2025
ಸುದ್ದಿ

ಅನಿಕೇತನ ಎಜುಕೇಶನಲ್ ಟ್ರಸ್ಟ್ (ರಿ.) ಪುತ್ತೂರು ಹಾಗೂ ಜೇಸಿಐ ಉಪ್ಪಿನಂಗಡಿ ಘಟಕದ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ – ಕಹಳೆ ನ್ಯೂಸ್

ಅನಿಕೇತನ ಎಜುಕೇಶನಲ್ ಟ್ರಸ್ಟ್ (ರಿ.) ಪುತ್ತೂರು ಹಾಗೂ ಜೇಸಿಐ ಉಪ್ಪಿನಂಗಡಿ ಘಟಕದ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯನ್ನು ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅನಿಕೇತನ ಎಜುಕೇಶನಲ್ ಟ್ರಸ್ಟ್ ನ ಆಡಳಿತ ನಿರ್ದೇಶಕ, ಕೃಷ್ಣ ಪ್ರಸಾದ್ ನಡ್ಸಾರ್, ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಹಾಗೂ ಸಂದೇಶಗಳು ಯುವ ಜನರ ಜೀವನ ಗುರಿ ನಿರ್ಧಾರಕ್ಕೆ ಮತ್ತು ಉನ್ನತಿಗೆ ಅತ್ಯಂತ ಸೂಕ್ತವಾಗಿರುವುದಲ್ಲದೇ, ಪ್ರತಿಯೊಬ್ಬ ವಿದ್ಯಾರ್ಥಿಯೂ ವಿವೇಕಾನಂದರ ಕುರಿತಾದ ಸಾಹಿತ್ಯವನ್ನು ಅಧ್ಯಯನ ಮಾಡುವುದು ಅವಶ್ಯಕ ಎಂದರು. ವಿಶ್ವವ್ಯಾಪಿಯಾಗಿದ್ದ ರಾಜಕೀಯ ಪ್ರಕ್ಷುಬ್ಧತೆ, ದಾಸ್ಯದ ಸಂಕೋಲೆಯಲ್ಲಿ ದೇಶ ಬಂಧಿಯಾಗಿದ್ದ ಕಾಲಘಟ್ಟದಲ್ಲಿ, ಭಾರತದ ಹಿರಿಮೆಯನ್ನು ವಿಶ್ವದ ಅತಿ ದೊಡ್ಡ ವೇದಿಕೆಯಲ್ಲಿ ಪ್ರತಿಪಾದಿಸಿದುದಲ್ಲದೇ ಇಡೀ ವಿಶ್ವವೇ ಭಾರತವನ್ನು ಗೌರವಪೂರ್ವಕವಾಗಿ ನೋಡುವಂತೆ ಮಾಡಿದರು.

ಸ್ವಾಮೀಜಿಯ ಸಾರ್ವತ್ರಿಕ ಸಹೋದರತ್ವ ಮತ್ತು ಸ್ವಯಂ ಜಾಗೃತಿಯ ಸಂದೇಶಗಳು ಸಾರ್ವಕಾಲಿಕವಾಗಿದ್ದು, ಇಂದಿಗೂ ಪ್ರಸ್ತುತವಾಗಿವೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜೇಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಜೇಸಿ ಶೇಖರ್ ಶುಭ ಹಾರೈಸಿ, ಪಠ್ಯಪುಸ್ತಕದ ಅಬ್ಯಾಸದ ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ವಾಮಿ ವಿವೇಕಾನಂದ ಜೀವನ ಚರಿತ್ರೆಯನ್ನು ಅಭ್ಯಸಿಸುವುದರಿಂದ ಉನ್ನತ ಆದರ್ಶಗಳನ್ನು ಹೊಂದಬಹುದು ಮತ್ತು ಸ್ವಾಮೀಜಿಯ ವಿಚಾರಧಾರೆ ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಅತೀ ಅವಶ್ಯಕವಾಗಿವೆ ಎಂದರು.

ರಾಷ್ಟ್ರೀಯ ಯುವ ದಿನೋತ್ಸವದ ಅಂಗವಾಗಿ ಜೆಸಿಐ ವತಿಯಿಂದ ಕೊಡಮಾಡುವ ಆದರ್ಶ ಯುವ ನಾಯಕ ಪ್ರಶಸ್ತಿಯನ್ನು ಜೇಸಿ ಪ್ರಸನ್ನರವರಿಗೆ ಅವರ ವಿವಿಧ ಕ್ಷೇತ್ರಗಳ ಸಮಾಜ ಸೇವೆಯನ್ನು ಗುರುತಿಸಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ಬಹುಮಾನ ವಿತರಣೆ ಮಾಡಲಾಯಿತು.

ಅನಿಕೇತನ ಎಜುಕೇಶನಲ್ ಟ್ರಸ್ಟ್ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಗ್ರಂಥಾಲಯಗಳಿಗೆ ಸ್ವಾಮಿ ವಿವೇಕಾನಂದರ ಕುರಿತಾದ ವಿವಿಧ ಸಾಹಿತ್ಯಿಕ ಗ್ರಂಥಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಮುಖ್ಯಗುರುಗಳಾದ ಶ್ರೀ ಸೂರ್ಯಪ್ರಕಾಶ್ ಉಡುಪ ವಹಿಸಿದ್ದು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ವೇಣುಗೋಪಾಲ ನಾಯಕ್ ಕುಳ್ಳಾಜೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಶ್ರೀ ಲಕ್ಷ್ಮಣ ಗೌಡ, ವಿಕ್ರಂ ಯುವಕ ಮಂಡಲ(ರಿ) ಕಾಂಚನ ಇದರ ಅಧ್ಯಕ್ಷ ಶ್ರೀ ಸುನಿಲ್ ಪಿಂಟೋ ಮತ್ತಿತರರು ಭಾಗವಹಿಸಿದ್ದರು.