Sunday, November 24, 2024
ಸುದ್ದಿ

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿವೇಕಾನಂದ ಜಯಂತಿ ಆಚರಣೆ – ಕಹಳೆ ನ್ಯೂಸ್

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿವೇಕಾನಂದರ 160 ನೇ ಜನ್ಮ ದಿನವನ್ನು ಆಚರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

“ವಿವೇಕಾನಂದರು ಯಾಕೆ ನಮಗೆ ಆದರ್ಶ ಪ್ರಿಯರು ಎನ್ನುವುದಕ್ಕೆ, ಬಾಲ್ಯದಲ್ಲಿ ತುಂಟನಾಗಿದ್ದರು, ಗುರುವಿನ ಸ್ಪರ್ಶವಾದ ನಂತರ ಮುಂದೆ ವಿಶ್ವಮಾನವನಾದರು. ನರೇಂದ್ರರವರ ಜೀವನವೇ ಒಂದು ಸ್ಪೂರ್ತಿಯಾಗಿದೆ. ಹಾಗೆಯೇ ವ್ಯಕಿಯನ್ನು ಹೇಗೆ ಪೂಜಿಸಬೇಕು ಎನ್ನುವುದಕ್ಕೆ ಉದಾಹರಣೆ ವಿವೇಕಾನಂದರು, ತನ್ನ ಗುರುಗಳಾದ ಪರಮಹಂಸರ ಹೆಸರಿನಲ್ಲಿ, ರಾಮಕೃಷ್ಣ ಮಿಷನ್ ಸ್ಥಾಪಿಸಿ, ತಮ್ಮ ಸಂದೇಶಗಳನ್ನು ವಿಶ್ವದಾದ್ಯಂತ ಪಸರಿಸಿದರು.

ಅದೇ ರೀತಿ, ರಾಷ್ಟ್ರಭಕ್ತಿಯನ್ನು ಹೇಗೆ ತೊರಿಸಬೇಕು ಎನ್ನುದಕ್ಕೆ ಉತ್ತಮ ನಿದರ್ಶನ ವಿವೇಕಾನಂದರು, ಅವರು ಅಮೇರಿಕಾದ ಚಿಕಾಗೋ ಹೋದರು, ತನ್ನ ರಾಷ್ಟ್ರಭಕ್ತಿಯನ್ನು ಮರೆಯಲಿಲ್ಲ, ದೇಶವನ್ನು ಹೇಗೆ ಪ್ರೀತಿಸಬೇಕು ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟರು. ಅವರು ಹೇಳಿದ “ನನ್ನ ಪ್ರೀತಿಯ ಸಹೋದರ ಸಹೋದರಿಯರೆ” ಎಂಬ ವಾಕ್ಯ ಇಂದು ವಿವೇಕಾವಾಣಿಯಾಗಿದೆ. ನಿಜವಾದ ಭಾರತೀಯತೆಯ ಹುಡುಕಾಟದಲ್ಲಿರುವಾಗ ಇಲ್ಲಿನ ಶ್ರೇಷ್ಟತೆಯನ್ನು ಜಗತ್ತಿನಾದ್ಯಂತ ಎತ್ತಿ ಹಿಡಿದ ಧೀಮಂತ ವ್ಯಕ್ತಿತ್ವ ಸ್ವಾಮಿ ವಿವೇಕಾನಂದರು. 125 ವರ್ಷಗಳ ಹಿಂದೆಯೆ ಯುವಕರನ್ನು ದೇಶದ ಶಕ್ತಿ ಎಂದು ಯುವಜನಶಕ್ತಿಯನ್ನು ಒಗ್ಗೂಡಿಸಿ ದೇಶವನ್ನು ಕಟ್ಟುವ ಕೆಲಸ ಮಾಡಿದರು. ಅವರು ಯುವಕರಿಗೆ ಸ್ಪೂರ್ತಿಯಾಗುವುದರಲ್ಲಿ ಯಾವುದರಲ್ಲೂ ಕಡಿಮೆಯಿರಲಿಲ್ಲ. ಅನೇಕ ಸಂದರ್ಭದಲ್ಲಿ ಅವರು ತಮ್ಮ ಸ್ಪೂರ್ತಿದಾಯಕ ಮಾತುಗಳಿಂದ ಯುವಕರನ್ನು ಪ್ರೋತ್ಸಾಹಿಸುತ್ತಿದ್ದರು.

ಅದಕ್ಕಾಗಿಯೇ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಇಂದಿನ ಯುವ ಸಮೂಹ ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ತಮ್ಮ ನಿಜವಾದ ಶಕ್ತಿ ಹಾಗೂ ಗುರಿಯನ್ನು ತಲುಪಲು ವಿಫಲವಾಗುತ್ತಿದೆ. ಸ್ವಾಮಿ ವಿವೇಕಾನಂದರ ವಿವೇಚನೆ, ಭಾರತೀಯತೆ, ಮಾನವೀಯತೆ ನಿಜವಾದ ಅರ್ಥವನ್ನು ನಾವಿಂದು ಅಳವಡಿಸಿಕೊಳ್ಳಬೇಕಾಗಿದೆ. ಅವರ ಸಂದೇಶಗಳು ನಮ್ಮೊಳಗೆ ಸೇರಿಸಿಕೊಂಡು ನಾವು ಬದಲಾಗಿ, ನಾವು ಅವರ ಸಂದೇಶಗಳ ಕಾರ್ಯಕರ್ತರಾಗಿ ಕೆಲಸ ಮಾಡಿದಾಗ ಈ ಜಯಂತಿಯು ಸಾರ್ಥಕತೆಯನ್ನು ಪಡೆಯುತ್ತದೆ” ಎಂದು ಶ್ರೀರಾಮ ಪದವಿ ಮಹಾವಿದ್ಯಾಲಯದ ಇತಿಹಾಸ ಉಪನ್ಯಾಸಕರಾದ ಯತಿರಾಜ್ ಇವರು ತಿಳಿಸಿದರು.

ಕಾರ್ಯಕ್ರಮದ ಮೊದಲಿಗೆ ಅತಿಥಿ ಅಭ್ಯಾಗತರು ದೀಪಬೆಳಗಿಸಿ, ಭಾರತಮಾತೆ ಹಾಗೂ ವಿವೇಕಾನಂದರಿಗೆ ಪುಷ್ಪಾರ್ಚನೆ ಮಾಡಿದರು. ನಂತರ 6ನೇ ತರಗತಿಯ ವೈಷ್ಣವಿ ಕಡ್ಯ, ವಿವೇಕಾನಂದರ ಬಾಲ್ಯ, ನರೇಂದ್ರ ವಿವೇಕಾನಂದನಾಗಿ ಬದಲಾದ ಕತೆ, ಅವರ ಜೀವನ ಚರಿತ್ರೆ ಹಾಗೂ ಸಾಧನೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ 1 ರಿಂದ 7ನೇ ತರಗತಿಯ 343 ವಿದ್ಯಾರ್ಥಿಗಳು ವಿವೇಕಾನಂದರ ವೇಷಧರಿಸಿ ವೇದಿಕೆಯನ್ನು ಅಲಂಕರಿಸಿದ್ದರು. ಹಾಗೂ ಒಂದೊಂದು ಅಮೃತವಚನವನ್ನು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ವಿವೇಕಾನಂದರ ಕುರಿತಾದ ಹಾಡನ್ನು ಹಾಡಿದರು. ತಬಲದಲ್ಲಿ 7ನೇ ತರಗತಿಯ ಶ್ರೀವತ್ಸ ಸಹಕರಿಸಿದರು. ವೇದಿಕೆಯಲ್ಲಿ ಶ್ರೀರಾಮ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಸುಮಂತ್ ಆಳ್ವ ಮರುವಾಳ, ಅನ್ನಪೂಣ್ ಎನ್ ಭಟ್ ಹಾಗೂ ರೂಪಕಲಾ ಎಂ ಉಪಸ್ಥಿರಿದ್ದರು.