Thursday, January 23, 2025
ಸುದ್ದಿ

ಯುವಕೇಸರಿ ಕಣಿಯೂರು ಇದರ ಉದ್ಘಾಟನಾ ಕಾರ್ಯಕ್ರಮ ಮತ್ತು ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ – ಕಹಳೆ ನ್ಯೂಸ್

ಯುವಕೇಸರಿ ಕಣಿಯೂರು ಇದರ ಉದ್ಘಾಟನಾ ಕಾರ್ಯಕ್ರಮ ಮತ್ತು ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಜ.12ರಂದು ಕಣಿಯೂರು ಕಸಬಾ ಶಾಲೆಯಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯುವಕೇಸರಿ ಕಣಿಯೂರು ಇದರ ಉದ್ಘಾಟನೆಯನ್ನು ರೈತಬಂಧು ಆಹಾರೋದ್ಯಮ ಪ್ರೈ ಲಿ ಇದರ ಮಾಲಕರಾದ ಶಿವಶಂಕರ ನಾಯಕ್ ರವರು ನೆರವೇರಿಸಿ ಶುಭ ಹಾರೈಸಿದರು.

ಯುವ ಕೇಸರಿಯ ಅಧ್ಯಕ್ಷ ಪ್ರವೀಣ್ ಗೌಡ ಅಲೆಕ್ಕಿ ಸ್ವಾಗತಿಸಿ, ಗೌರವಾಧ್ಯಕ್ಷ ರಕ್ಷಿತ್ ಪಣೆಕ್ಕರ ಪ್ರಾಸ್ತವಿಕ ಮಾತುಗಳನ್ನಾಡಿದರು, ಯುವಕೇಸರಿ ಕಣಿಯೂರು ಇದರ ಕಾರ್ಯದರ್ಶಿ ಯತೀಶ್ ಶೆಟ್ಟಿ ಪಣೆಕ್ಕರ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸೇಸಪ್ಪ ಮೂಲ್ಯ, ಯಶೋಧರ ಶೆಟ್ಟಿ ಕಣಿಯೂರು, ಕಣಿಯೂರು ಶಾಲೆಯಎಸ್ ಡಿಎಂಸಿ ಅಧ್ಯಕ್ಷ ದಿನೇಶ್ ಗೌಡ ಅಲೆಕ್ಕಿ, ಯುವ ಕೇಸರಿ ಸಂಘಟನೆಯ ಪದಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.