Thursday, January 23, 2025
ಸುದ್ದಿ

ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಅನಂತೋಡಿ, ಬೆಳಾಲಿನಲ್ಲಿ ಜ.14ರಂದು ಸಂಕ್ರಮಣ ಪೂಜೆ – ಕಹಳೆ ನ್ಯೂಸ್

ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಅನಂತೋಡಿ, ಬೆಳಾಲಿನಲ್ಲಿ ಇದೇ ಬರುವ ಜ.14ರಂದು ಸಂಜೆ 7ಗಂಟೆಗೆ ಸಂಕ್ರಮಣ ಪೂಜೆ ನಡೆಯಲಿದೆ. ಹಾಗೂ ರಾತ್ರಿ 7.30ಕ್ಕೆ ಶ್ರೀಮತಿ ವಿದ್ಯಾ ಮತ್ತು ಶ್ರೀ ಶ್ರೀನಿವಾಸ ಗೌಡ ಮತ್ತು ಮನೆಯವರು ಶ್ರೀಸೌಧ ಬೆಳಾಲು ಇವರ ಸೇವಾರ್ಥವಾಗಿ ಶ್ರೀ ದೇವರಿಗೆ ರಂಗ ಪೂಜೆ ಹಾಗೂ ಶ್ರೀ ಶಾಸ್ತಾರ ( ಅಯ್ಯಪ್ಪ) ದೇವರಿಗೆ ಅಪ್ಪ ಸೇವೆಯು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೆಯೇ ಆ ದಿನ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಲಿದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಶ್ರೀದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ ಪುಣ್ಯ ಕಾರ್ಯದಲ್ಲಿ ಭಾಗಿಯಾಗಲು ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ. ಇನ್ನು ರಾತ್ರಿ 10.30ರಿಂದ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಿAದ ಶುಭಾಶಯ ಜೈನ್ ವಿರಚಿತ ಪರಕೆದ ಕೊಂಡೆಪೇರ್ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.