Wednesday, January 22, 2025
ಉಡುಪಿಯಕ್ಷಗಾನ / ಕಲೆಸುದ್ದಿ

ಉಡುಪಿಯಲ್ಲಿ ಇಂದು “ಕಾಶ್ಮೀರ ವಿಜಯ’ ತಾಳಮದ್ದಳೆ ; ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿ  ಭಾಗವತಿಕೆ – ಕಹಳೆ ನ್ಯೂಸ್

ಉಡುಪಿ: ಸುಶಾಸನ ಸಮಿತಿ ರಾಷ್ಟ್ರಕಲಾ ತಂಡದ ಪ್ರಾಯೋಜ ಕತ್ವದಲ್ಲಿ, ಉಡುಪಿಯ ಸುಧಾಕರ ಆಚಾರ್ಯರ ಸಂಕಲ್ಪ- ಸಂಯೋಜನೆಯಲ್ಲಿ ಪ್ರೊ| ಪವನ್‌ ಕಿರಣಕೆರೆ ವಿರಚಿತ ಶಾರದಾ ದೇಶದ ಪುಣ್ಯ ಚರಿತಾಮೃತ “ಕಾಶ್ಮೀರ ವಿಜಯ’ ತಾಳಮದ್ದಳೆ ಜ. 14ರ ಮಧ್ಯಾಹ್ನ 2.30ರಿಂದ ಅಂಬಾಗಿಲಿನ ಅಮೃತ್‌ ಗಾರ್ಡನ್‌ನಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉದ್ಘಾಟನೆ ಕಾರ್ಯಕ್ರಮದಲ್ಲಿ ಸುಶಾಸನ ಸಮಿತಿ ಗೌರವಾಧ್ಯಕ್ಷರು, ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಕಟೀಲಿನ ಲಕ್ಷ್ಮೀನಾರಾಯಣ ಅಸ್ರಣ್ಣ ಮಾತನಾಡಲಿದ್ದಾರೆ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಕಾಶ್ಮೀರ ವಿಜಯ ಪ್ರಸಂಗ ಅನಾವರಣಗೊಳಿಸಲಿದ್ದಾರೆ. ಸಚಿವ ವಿ. ಸುನೀಲ್‌ ಕುಮಾರ್‌, ಶಾಸಕ ಕೆ. ರಘುಪತಿ ಭಟ್‌ ಶುಭಾಶಂಸನೆ ಗೈಯುವರು.

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌, ಮಾಜಿ ಸಚಿವ ಪ್ರಮೋದ್‌ ಮಧ್ವ ರಾಜ್‌, ಉಜ್ವಲ್‌ ಡೆವಲಪರ್ ನ ಪುರುಷೋತ್ತಮ ಪಿ. ಶೆಟ್ಟಿ, ಟಿ. ಶಂಭು ಶೆಟ್ಟಿ, ಪ್ರೊ| ಎಂ.ಎಲ್‌. ಸಾಮಗ, ಗುರ್ಮೆ ಸುರೇಶ್‌ ಶೆಟ್ಟಿ, ಕಿದಿಯೂರು ಉದಯ ಕುಮಾರ್‌ ಶೆಟ್ಟಿ ಉಪಸ್ಥಿತರಿರಲಿದ್ದಾರೆ. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್‌, ಪುರುಷೋತ್ತಮ ಭಂಡಾರಿ ಅಡ್ಯಾರ್‌ ಕಾರ್ಯಕ್ರಮ ನಿರೂಪಿಸುವರು.

ಕೈಗಾರಿಕೋದ್ಯಮಿ, ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ, ಮುಂಬಯಿ ಸಂಜೀವಿನಿ ಆಸ್ಪತ್ರೆಯ ಸೀನಿಯರ್‌ ಜನರಲ್‌ ಸರ್ಜನ್‌, ವೈದ್ಯಕೀಯ ನಿರ್ದೇಶಕ ಡಾ| ಸುರೇಶ್‌ ಎಸ್‌. ರಾವ್‌, ಕೈಗಾರಿಕೋದ್ಯಮಿ, ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇಗುಲದ ಧರ್ಮದರ್ಶಿ ದೇವರಾಯ ಎಂ. ಶೇರಿಗಾರ್‌ ಅವರಿಗೆ ತುಳುನಾಡ “ಸುಶಾಸನ ಅಮೃತ ಭಾರತಿ’ ಪ್ರಶಸ್ತಿ, ಬುಡಕಟ್ಟು ಜನಾಂಗದ ಸಿದ್ದಿ ಸಮುದಾಯದ ಮೊದಲ ಡಾಕ್ಟರೆಟ್‌ ಪದವೀಧರೆ ಡಾ| ಗೀತಾ ಸಿದ್ದಿ ಅವರಿಗೆ ವಿಶೇಷ “ಮಹಿಳಾ ರಾಷ್ಟ್ರಕಲಾ ಪುರಸ್ಕಾರ’ ನೀಡಿ ಗೌರವಿಸಲಾಗುವುದು.

ತಾಳಮದ್ದಳೆಯ ಹಿಮ್ಮೇಳದಲ್ಲಿ ಪಟ್ಲ ಸತೀಶ್‌ ಶೆಟ್ಟಿ, ಡಾ| ಪ್ರಖ್ಯಾತ್‌ ಶೆಟ್ಟಿ, ಪದ್ಮನಾಭ ಉಪಾಧ್ಯಾಯ, ರೋಹಿತ್‌ ಉಚ್ಚಿಲ, ಅರ್ಥಧಾರಿ ಗಳಾಗಿ ಎಂ.ಎಲ್‌. ಸಾಮಗ, ತಲಪಾಡಿ ಸದಾಶಿವ ಆಳ್ವ, ಪ್ರೊ| ಪವನ್‌ ಕಿರಣಕೆರೆ, ಶ್ರೀರಮಣಾಚಾರ್ಯ ಕಾರ್ಕಳ, ಹರೀಶ್‌ ಬೊಳಂತಿಮೊಗರು, ಮಹೇಂದ್ರ ಆಚಾರ್ಯ ಭಾಗವಹಿಸ ಲಿದ್ದಾರೆ ಎಂದು ಸಮಿತಿ ಪ್ರಕಟನೆ ತಿಳಿಸಿದೆ.