Thursday, January 23, 2025
ಸುದ್ದಿ

ತಲಪಾಡಿ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’ – ಕಹಳೆ ನ್ಯೂಸ್

ಮಂಗಳೂರು : ತಲಪಾಡಿ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ, ಹಿಂದೂ ರಾಷ್ಟ್ರ ಜಾಗೃತಿ ಸಭೆಯು ನಡೆದಿದೆ. ದೇವಸ್ಥಾನದ ಸಭಾ ಗೃಹದಲ್ಲಿ ನಡೆದ ಕಾರ್ಯಕ್ರಮಕ್ಕೆ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ಕಿಶೋರ್ ಕುಮಾರ್ ಚಾಲನೆ ನೀಡಿದರು. ಬಳಿಕ ದೇವಿಪುರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ. ಗಣೇಶ್ ಭಟ್ ಇವರು ವೇದ ಮಂತ್ರ ಪಠಿಸಿದರು.
ಈ ಸಂದರ್ಭದಲ್ಲಿ ನಾರಾಯಣ ಕಜೆ ಯವರು ಮಾತನಾಡಿ, ಇತ್ತೀಚೆಗೆ ನಮ್ಮ ಭಾರತ ದೇಶವು ಅತ್ಯಂತ ಸವಾಲುಗಳನ್ನು ಎದುರಿಸುತ್ತಿದೆ, ಈ ಎಲ್ಲ ಸವಾಲುಗಳ ಸಾಲು ಯಾಕೆ ನಿರ್ಮಾಣ ಆಗುತ್ತಿದೆ ಎಂದರೆ ನಮ್ಮಲ್ಲಿ ಸಂಘಟಿತ ಪ್ರಯತ್ನ ಕಡಿಮೆ ಇದೆ. ಇದಕ್ಕಾಗಿ ನಾವೆಲ್ಲರೂ ಹಿಂದೂಗಳು ಸಮಯ ಕೊಡಬೇಕು, ಹಾಗೂ ಎಲ್ಲರೂ ಹಿಂದೂ ಧರ್ಮದ ಅರಿವು ಮೂಡಿಸಲು ಪ್ರಯತ್ನಿಸಬೇಕು ಎಂದು ಹೇಳಿದರು. ಇನ್ನೂ ಕಾರ್ಯಕ್ರಮದಲ್ಲಿ ದಿನೇಶ್ ಜೈನ್ ಇವರು ಮಾತನಾಡಿ ಹಿಂದುಗಳಿಗೆ ಧರ್ಮದ ಬಗ್ಗೆ ಜ್ಞಾನವಿಲ್ಲದಿರುವುದರಿಂದ ದೇವತೆಗಳ ವಿಡಂಬನೆಯಾದರೂ, ಮತಾಂತರವಾದರೂ, ಭ್ರμÁ್ಟಚಾರ ಕಣ್ಣಿನ ಎದುರುನಲ್ಲಿ ನಡೆಯುತ್ತಿದ್ದರೂ , ಹಿಂದುಗಳ ಹತ್ಯೆಯಾದರೂ ಏನು ಅನಿಸುವುದಿಲ್ಲ, ಇದಕ್ಕೆ ಮೂಲ ಕಾರಣ ಹಿಂದೂಗಳಿಗೆ ಹಿಂದೂ ಧರ್ಮದ ಜ್ಞಾನವಿಲ್ಲದಿರುವುದು ಆಗಿದೆ. ಹಿಂದುಗಳಿಗೆ ಹಿಂದೂ ಧರ್ಮದ ಶಿಕ್ಷಣ, ನೈತಿಕ ಮೌಲ್ಯ ಆಧರಿತ ಶಿಕ್ಷಣ ಇಲ್ಲದಿರುವುದರಿಂದ ಧರ್ಮದ ಬಗ್ಗೆ ಅಭಿಮಾನ ಇಲ್ಲ. ಇದಕ್ಕಾಗಿ ಪ್ರತಿಯೊಬ್ಬ ಹಿಂದುಗಳು ಹಿಂದೂ ಧರ್ಮದ ಬಗ್ಗೆ ಶಿಕ್ಷಣ ಪಡೆಯುವುದು, ಧರ್ಮಾಚರಣೆ ಗಳನ್ನು ಮಾಡುವುದೇ ಧರ್ಮರಕ್ಷಣೆಯ ಕಾರ್ಯವಾಗಿದೆ. ಇಂದು ಹಿಂದೂ ಹೆಣ್ಣು ಮಕ್ಕಳು ಲವ್ ಜಿಹಾದಿಗಾಗಿ ಬಲಿಯಾಗುತ್ತಿದ್ದಾರೆ.ಅಲ್ಲದೆ ಆ ಹೆಣ್ಣು ಮಕ್ಕಳು ಭಯೋತ್ಪಾದನೆ ಚಟುವಟಿಕೆಗಳಲ್ಲಿ ಯಾವ ರೀತಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಈಗಾಗಲೇ ದೀಪ್ತಿ ಮಾರ್ಲ ಮರಿಯ ಲಾಗಿ, ಆಶಾ ಮೊದಲಾದ ಹಿಂದೂ ಹುಡುಗಿಯರು ಕಂಬಿ ಎಣಿಸುತ್ತಿರುವುದು ಕೇಳಿದ್ದೀರಿ. ಗೋವುಗಳ ಹತ್ಯೆ ಯಾಗುತ್ತಿದ್ದರು ಅದನ್ನು ತಡೆಯುವವರ ಮೇಲೆ ಕೇಸ್ ಹಾಕುತ್ತಾರೆ .ಇಂತಹ ಸಂಕಷ್ಟದಿಂದ ನಾವು ಹೊರಗೆ ಬರಬೇಕಾದರೆ ಇವತ್ತು ಹಿಂದೂ ರಾಷ್ಟ್ರದ ಅವಶ್ಯಕತೆ ಇದೆ .ಅದಕ್ಕಾಗಿ ಪ್ರತಿಯೊಬ್ಬರು ಹಿಂದೂ ಧರ್ಮದ ಶಿಕ್ಷಣ ಪಡೆದು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಟ್ಟಿಬದ್ಧರಾಗೋಣ ಎಂದು ಸಮಾಜಕ್ಕೆ ಕರೆಕೊಟ್ಟರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ, ಸನಾತನ ಸಂಸ್ಥೆಯ ಆನಂದ ಗೌಡ ಇವರು ಮಾತನಾಡಿ, ಹಿಂದೂಗಳಿಗೆ ಹಿಂದೂ ಧರ್ಮದ ಆಚರಣೆ ಮಾಡಲು ಹಿಂದೂ ಧರ್ಮದ ಅಜ್ಞಾನವೇ ಆಗಿದೆ. ಇದರಿಂದಾಗಿ ನಮ್ಮ ಹಿಂದುಗಳನ್ನು ಸುಲಭವಾಗಿ ಮತಾಂತರ ಮಾಡಿ ಭಯೋತ್ಪಾದನೆ ಚಟುವಟಿಕೆಗಳಿಗೆ ಉಪಯೋಗಿಸಲು ಸುಲಭವಾಗುತ್ತಿದೆ. ಇದಕ್ಕಾಗಿ ನಮ್ಮ ಹಿಂದುಗಳಿಗೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರಿಗೆ ಸಹ ಧರ್ಮ ಶಿಕ್ಷಣ ದ ಅವಶ್ಯಕತೆ ಎಷ್ಟು ಇದೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ.
ಭಾರತ ದೇಶ ಜಾತ್ಯತೀತ ಹೆಸರಿನಲ್ಲಿ ಸಮಾನತೆ ತರಲು ಪ್ರಯತ್ನ ಮಾಡುತ್ತಿದೆ. ಆದರೆ ಎಲ್ಲಿದೆ ಸಮಾನತೆ ?ಅಲ್ಪ ಸಂಖ್ಯಾತರಿಗಾಗಿ ವಿಶೇಷ ಆಯೋಗಗಳನ್ನು ನಿರ್ಮಿಸಲಾಗುತ್ತಿದೆ ಆದರೆ ಹಿಂದುಗಳಿಗೆ ಏನಾದರೂ ಆಯೋಗ ಇದೆಯಾ? ಸಂವಿಧಾನದಲ್ಲಿ 28 ನೇ ಕಲಂ ನಲ್ಲಿ ಧರ್ಮ ಶಿಕ್ಷಣ ಕೊಡಲಿಕ್ಕೆ ಇಲ್ಲ. ಎಂದು ಹೇಳಲಾಗಿದೆ ಆದರೆ 30ನೇ ಕಲಂ ನಲ್ಲಿ ಮದರಸದಲ್ಲಿ , ಕಾನ್ವೆಂಟ್ ನಲ್ಲಿ ನೀಡಬಹುದು. ಅವರಿಗೆ ಅನುದಾನ ನೀಡಲು ಅಭ್ಯಂತರ ಇಲ್ಲ .ಆದರೆ ಹಿಂದುಗಳಿಗೆ ವೇದ ಪಾಠಶಾಲೆಯಲ್ಲಿ ಧರ್ಮ ಶಿಕ್ಷಣ ನೀಡಿದರೆ ಸರಕಾರದಿಂದ ಅನುದಾನ ಕೊಡಲಿಕ್ಕೆ ಅವಕಾಶವಿರುವುದಿಲ್ಲ. ಇದಕ್ಕಾಗಿ ಧರ್ಮಾದಿಷ್ಟಿತ ಸಮಾಜ ಸ್ಥಾಪನೆ ಯಾಗಲು ಭಾರತ ಹಿಂದೂ ರಾಷ್ಟ್ರವಾಗಬೇಕು .ಜಾತ್ಯತೀತ ರಾಷ್ಟ್ರದ ಹೆಸರಿನಲ್ಲಿ ಸಮಾಜದಲ್ಲಿ ನೈತಿಕತೆ ಅಧ: ಪತನ ವಾಗಿರುವುದು ಕಂಡು ಬರುತ್ತಿದೆ . ಇದಕ್ಕಾಗಿ ಪ್ರತಿಯೊಬ್ಬ ಹಿಂದುಗಳು ಧರ್ಮ ಶಿಕ್ಷಣ ಪಡೆದು, ಭಗವಂತನ ಉಪಾಸನೆ ಹೇಗೆ ಮಾಡಬೇಕು, ಭಗವಂತನ ಉಪಾಸನೆಯಿಂದ ಹೇಗೆ ನಾವು ಚೈತನ್ಯ ,ಜ್ಞಾನ, ನೈತಿಕ ಸಂವರ್ಧನೆ ಯನ್ನು ಪಡೆಯಬಹುದು ಎಂದು ಮಾಹಿತಿಯನ್ನು ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಸಮಾಜದಲ್ಲಿ ಅಧರ್ಮಗಳಾದಾಗ ಯಾವ ರೀತಿ ಕಂಟಕಗಳು ಬರುತ್ತವೆ ಎಂಬುದನ್ನು ಕೆಲವು ಉದಾಹರಣೆ ಗಳ ಮೂಲಕ ತಿಳಿಸಿದರು. ಈ ಸಭೆಯಲ್ಲಿ ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲೆಯ ವಾಣಿಜ್ಯ ಹಾಗೂ ಪ್ರಕೋಸ್ಟದ ಸಹ ಸಂಚಾಲಕರಾದ ದಿನೇಶ್ ಜೈನ್, ದೇವಿಪುರ ದೇವಸ್ಥಾನದ ಆಡಳಿತ ವ್ಯವಸ್ಥಾಪಕರಾದ ನಾರಾಯಣ ಕಜೆ, ದೇವಿಪುರ ದೇವಸ್ಥಾನದ ಪ್ರಧಾನ ಅರ್ಚಕರಾದ ಗಣೇಶ್ ಭಟ್, ಸನಾತನ ಸಂಸ್ಥೆಯ ಆನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರಾದ ಪವಿತ್ರಾ ಕುಡ್ವಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.