Thursday, January 23, 2025
ಸುದ್ದಿ

ಕರಿ ಹೈದ ಕರಿಯಜ್ಜ ಶೂಟಿಂಗ್ ಪೂರ್ಣ..! ಕೊರಗಜ್ಜನಿಗೆ ಕೋಲ ಸೇವೆ ಸಲ್ಲಿಸಿದ ಟೀಮ್ –ಕಹಳೆ ನ್ಯೂಸ್

ಸ್ಯಾಂಡಲ್​​ವುಡ್ ನಟಿ ಶೃತಿ ಅವ್ರು ಕೊರಗಜ್ಜನ ಮೊರೆ ಹೋಗಿದ್ದಾರೆ. ಕೊರಗಜ್ಜನಿಗೆ ಕೋಲ ಸೇವೆ ಕೂಡ ಮಾಡಿದ್ದಾರೆ. ಈ ಸಮಯದಲ್ಲಿ ಅಮ್ಮನೊಟ್ಟಿಗೆ ಮಗಳು ಗೌರಿ ಕೂಡ ಕೋಲ ಸೇವೆ ಮಾಡಿದ್ದಾರೆ. ಕೋಲ ಸೇವೆ ಅನ್ನೋದು ಒಂದು ವಿಶೇಷ ಸೇವೆನೆ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂತಾರ ಸಿನಿಮಾ ಬಂದ್ಮೇಲೆ ಕೋಲ ಸೇವೆಯ ಬಗ್ಗೆ ಜನಕ್ಕೆ ಹೆಚ್ಚು ತಿಳಿದಿದೆ. ಕೊರಗಜ್ಜನ ವಿಷಯದಲ್ಲೂ ಅಷ್ಟೇ. ಕೋಲ ಸೇವೆ ಮಾಡುವ ಜನ ಹೆಚ್ಚಿದ್ದಾರೆ. ಇದಕ್ಕೂ ಹೆಚ್ಚಾಗಿ ನಟಿ ಶೃತಿ ಅವ್ರು ಕೊರಗಜ್ಜನ ಜೀವನ ಆಧರಿಸಿದ “ಕರಿ ಹೈದ ಕರಿ ಅಜ್ಜ” ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಈಗ ಚಿತ್ರೀಕರಣ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿಯೇ ಕೋಲ ಸೇವೆ ಮೂಲಕ ಟೀಮ್ ಧನ್ಯವಾದ ಹೇಳಿದೆ.

ಕೊರಗಜ್ಜನಿಗೆ ನಟಿ ಶೃತಿ-ಮಗಳು ಗೌರಿ ಕೋಲ ಸೇವೆ

ಮಗಳು ಗೌರಿ ಜತೆ ನಟಿ ಶ್ರುತಿ ಅವರು ಕೊರಗಜ್ಜನಿಗೆ ಕೋಲ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿವೆ.

ಕೊರಗಜ್ಜನ ಚಿತ್ರದಲ್ಲಿ ನಟಿ ಶೃತಿ ಅವರು ಕೊರಗಜ್ಜನ ತಾಯಿಯ ಪಾತ್ರವನ್ನೆ ಮಾಡಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಶೃತಿ ಅವರು ತಮ್ಮ ಪಾತ್ರವನ್ನ ಅಷ್ಟೇ ಭಕ್ತಿಯಿಂದಲೇ ನಿರ್ವಹಿಸಿದ್ದಾರೆ.

ಕರಿ ಹೈದ ಕರಿ ಅಜ್ಜ ಚಿತ್ರ ಬಹು ಬಜೆಟ್​​ನಲ್ಲಿಯೇ ರೆಡಿ ಆಗುತ್ತಿದೆ. ಬಾಲಿವುಡ್​​ನ ನಟ ಕಬೀರ್ ಬೇಡಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರಲ್ಲದೇ ನಟಿ ಭವ್ಯ ಕೂಡ ಇದರಲ್ಲಿ ನಟಿಸಿದ್ದಾರೆ.