Thursday, January 23, 2025
ಸುದ್ದಿ

ರೊಮ್ಯಾಂಟಿಕ್ ಹಾಡಿಗೆ ರೂಪೇಶ್ ಜೊತೆ ರೀಲ್ಸ್ ಮಾಡಿದ ಕಾವ್ಯಶ್ರೀ..! : ಹಾಡು ಬದಲಾಯಿಸಿ ಎಂದು ಕಮೆಂಟ್ ಮಾಡಿದ ಫ್ಯಾನ್ಸ್..!–ಕಹಳೆ ನ್ಯೂಸ್

ಬಿಗ್​ಬಾಸ್ ಸೀಸನ್ 9 ಸಖತ್ತಾಗಿ ನಡೆದಿದೆ. ಇದರಲ್ಲಿ ಪ್ರವೀಣರೂ ನವೀನರೂ ಸೇರಿ ಅವರ ನಡುವಿನ ಸ್ಪರ್ಧೆ, ಆಟ ಎಲ್ಲವೂ ತುಂಬಾ ಚೆನ್ನಾಗಿ ಮೂಡಿಬಂದಿತ್ತು. ಇದಕ್ಕೆ ಕನ್ನಡ ಪ್ರೇಕ್ಷಕರು ಕೂಡಾ ಫಿದಾ ಆಗಿದ್ದರು. ರೂಪೇಶ್ ಶೆಟ್ಟಿ ಬಿಗ್​ಬಾಸ್ ಮನೆಯೊಳಗೆ ಎಲ್ಲರೊಂದಿಗೆ ಕ್ಲೋಸ್ ಆಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೆಯೇ ಮಂಗಳ ಗೌರಿ ಮದುವೆ ಧಾರವಾಹಿ ಖ್ಯಾತಿಯ ಕಾವ್ಯಶ್ರೀ ಗೌಡ ಅವರೂ ಬಿಗ್​ಬಾಸ್ ಮನೆಗೆ ಹೋಗಿ ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಗಳಿಸಿದರು. ಇದೀಗ ಬಿಗ್​ಬಾಸ್ ಸೀಸನ್ ಮುಗಿದು ರೂಪೇಶ್ ಶೆಟ್ಟಿ ಕಪ್ ಗೆದ್ದುಕೊಂಡು ಹೊರಬಂದಿದ್ದಾರೆ. ಗೇಮ್ ಮುಗಿದ ನಂತರ ಈಗ ಸೀಸನ್​ನ ಸ್ಪರ್ಧಿಗಳು ಹಲವೆಡೆ ಭೇಟಿಯಾಗುತ್ತಿದ್ದಾರೆ.

ಬಿಗ್​ಬಾಸ್ ಖ್ಯಾತಿಯ ಕಾವ್ಯಶ್ರೀ ಗೌಡ ಹಾಗೂ ರೂಪೇಶ್ ಶೆಟ್ಟಿ ಜೊತೆಯಾಗಿ ರೀಲ್ಸ್ ಮಾಡಿದ್ದು ಅವರ ರೀಲ್ಸ್ ಇನ್​ಸ್ಟಾಗ್ರಾಮ್​ನಲ್ಲಿ ವೈರಲ್ ಆಗಿದೆ. ಅವರ ಅಭಿಮಾನಿಗಳು ವಿಡಿಯೋ ನೋಡಿ ಮೆಚ್ಚಿಕೊಂಡಿದ್ದಾರೆ.

ಕಾವ್ಯಶ್ರೀ ಗೌಡ ಹಾಗೂ ರೂಪೇಶ್ ಶೆಟ್ಟಿ ಅವರೂ ಕೂಡಾ ಒಂದು ಕಡೆಯಲ್ಲಿ ಭೇಟಿಯಾಗಿದ್ದು ಅವರು ಜೊತೆಯಾಗಿ ಕನ್ನಡ ಸಾಂಗ್ ಒಂದಕ್ಕೆ ರೀಲ್ಸ್ ಕೂಡಾ ಮಾಡಿದ್ದಾರೆ.

ಆದರೆ ರೊಮ್ಯಾಂಟಿಕ್ ಹಾಡಿಗೆ ಕಾವ್ಯಶ್ರೀ ಅವರು ರೂಪೇಶ್ ಶೆಟ್ಟಿ ಜೊತೆ ರೀಲ್ಸ್ ಮಾಡಿದ್ದು ನೆಟ್ಟಿಗರಿಗೆ ಮಾತ್ರ ಇಷ್ಟ ಆಗಿಲ್ಲ. ರೂಪೇಶ್ ಶೆಟ್ಟಿ ಜೊತೆ ಸಾನ್ಯಾ ಐಯ್ಯರ್ ಮಾತ್ರ ರೊಮ್ಯಾಂಟಿಕ್ ಆಗಿರಬೇಕು ಎಂದು ಹಾಡು ಬದಲಾಯಿಸಿ ಎಂದು ಕಮೆಂಟ್ ಮಾಡುತ್ತಿದ್ದಾರೆ.