Sunday, January 19, 2025
ಸಿನಿಮಾ

ಆ್ಯಕ್ಷನ್‌ ಪ್ರಿನ್ಸ್ ದ್ರುವ ಸರ್ಜಾ ಬರ್ತ್’ಡೇ !

ಬೆಂಗಳೂರು : ಕನ್ನಡದ ನಟ ಆ್ಯಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಅವರು ತಮ್ಮ 29ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಬೆಂಗಳೂರಿನ ಕೆ.ಆರ್. ರಸ್ತೆಯ ತಮ್ಮ ನಿವಾಸದಲ್ಲಿ ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಇದೇ ವೇಳೆ ನೂರಾರು ಅಭಿಮಾನಿಗಳು ಧ್ರುವ ಸರ್ಜಾ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಲು ಅವರ ನಿವಾಸದ ಎದುರು ಸೇರಿದ್ದರು. ಈ ವೇಳೆ ಮಾತನಾಡಿದ ಧ್ರುವ, ಅಭಿಮಾನಿಗಳ ನಡುವೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳೋಕೆ ಒಂದು ರೀತಿ ಸಂತೋಷವಾಗುತ್ತೆ ಎಂದ್ರು‌. ಅಲ್ಲದೆ, ತನ್ನ ಮುಂದಿನ ಸಿನಿಮಾ ಪೊಗರು ಅಂತ ತಿಳಿಸಿದರು.
ಇದೇ ವೇಳೆ ಧ್ರುವ ಅವರಿಗೆ ವಿಶ್ ಮಾಡಲು ಅಣ್ಣ ಚಿರಂಜೀವಿ ಸರ್ಜಾ ಕೂಡ ಜೊತೆಗಿದ್ದರು ಇತ್ತೀಚೆಗೆ ತೆರೆಕಂಡು ಭಾರೀ ಸದ್ದು ಮಾಡ್ತಿರೋ ಧ್ರುವ ಸರ್ಜಾರ ಭರ್ಜರಿ ಸಿನಿಮಾದ ನಿರ್ದೇಶಕ ಚೇತನ್ ಕೂಡಾ ಸಂಭ್ರಮದಲ್ಲಿ ಭಾಗಿಯಾದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response