Monday, November 25, 2024
ಕ್ರೈಮ್ರಾಷ್ಟ್ರೀಯಸುದ್ದಿ

ಲವ್ ಜಿಹಾದ್ ಕರಾಳ ಮುಖ..! ತಾನು ಹಿಂದೂ ಅಂತ ಹೇಳಿಕೊಂಡು ಪ್ರೀತಿ-ಪ್ರೇಮ-ಮದುವೆ – ಇಸ್ಲಾಂ ಧರ್ಮಕ್ಕೆ ಮತಾಂತರಕ್ಕೆ ಒಪ್ಪದ ಪತ್ನಿಗೆ ಸಿಗರೇಟ್‍ನಿಂದ ಸುಟ್ಟು, ಸಂಬಂಧಿಕರಿಂದಲೇ ಅತ್ಯಾಚಾರ ಬೆದರಿಕೆ ; ಮುಸ್ಲಿಂ ಜಿಹಾದಿ ಚಂದ್ ಮೊಹಮ್ಮದ್ ವಿರುದ್ಧ ಆಕ್ರೋಶ – ಕಹಳೆ ನ್ಯೂಸ್

ಲಕ್ನೋ: ಮತಾಂತರ ಕ್ಕೆ ಒಪ್ಪದ ಪತ್ನಿಯನ್ನು ಪ್ರತಿನಿತ್ಯ ಥಳಿಸಿ, ಸಿಗರೇಟ್‍ (Cigrette) ನಿಂದ ಸುಟ್ಟು ಬಲವಂತವಾಗಿ ಮಾಂಸ ತಿನ್ನಿಸಿದ ಘಟನೆಯೊಂದು ಉತ್ತರಪ್ರದೆಶ (Uttarapradesh) ಲಕ್ನೋದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ಪತಿಯನ್ನು ಚಂದ್ ಮೊಹಮ್ಮದ್ (Chand Mohammad) ಎಂದು ಗುರುತಿಸಲಾಗಿದೆ. ಈತ ತಾನು ಹಿಂದೂ ಅಂತ ಹೇಳಿಕೊಂಡು ಸಂತ್ರಸ್ತೆಯನ್ನು ಮದುವೆಯಾಗಿದ್ದಾನೆ. ಆ ಬಳಿಕ ಇಬ್ಬರೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. 

ಪತಿ ನನಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ದೇಹದ ಮೇಲೆಲ್ಲ ಸಿಗರೇಟ್‍ನಿಂದ ಸುಟ್ಟಿದ್ದಾನೆ. ಅಲ್ಲದೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಲು ಒಪ್ಪದಿದ್ದಕ್ಕೆ ನನ್ನ ಮೇಲೆ ಬಿಸಿ ಎಣ್ಣೆ ಎರಚಿದ್ದಾನೆ. ಇಷ್ಟು ಸಾಲದೆಂಬಂತೆ ಒಂದು ವೇಳೆ ನೀನು ಮತಾಂತರಕ್ಕೆ ಒಪ್ಪದಿದ್ದರೆ ನನ್ನ ಸಂಬಂಧಿಕರಿಂದಲೇ ನಿನ್ನ ಮೇಲೆ ಅತ್ಯಾಚಾರ ಮಾಡಿಸುತ್ತೇನೆ. ಅಲ್ಲದೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಪೊಲೀಸರ ಬಳಿ ದೂರಿದ್ದಾಳೆ.

ಪ್ರತಿ ದಿನ ಪತಿಯ ಹಿಂಸೆ ತಡೆದುಕೊಳ್ಳಲು ಸಾಧ್ಯವಾಗದಿದ್ದಾಗ ದೂರು ನೀಡಲೆಂದು ಹೋದರೆ ಪತಿ ನನ್ನನ್ನು ಕೂಡಿ ಹಾಕಿ ಥಳಿಸುತ್ತಾನೆ. 5 ತಿಂಗಳ ಗರ್ಭಿಣಿ ಇದ್ದಾಗಲೂ ಆತ ನನ್ನ ಹೊಟ್ಟೆಗೆ ಹೊಡೆದಿದ್ದರಿಂದ ಗರ್ಭಪಾತವಾಗಿತ್ತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ಸದ್ಯ ಮಹಿಳೆಯ ದೂರನ್ನು ಪೊಲೀಸರು ಸ್ವೀಕರಿಸಿದ್ದು, ಪತಿಯಿಂದ ಆಕೆಯನ್ನು ರಕ್ಷಣೆ ಮಾಡಿದ್ದಾರೆ.