Sunday, January 19, 2025
ಅಂತಾರಾಷ್ಟ್ರೀಯಸುದ್ದಿ

ಸಿಬ್ಬಂದಿ ಸೇರಿ 72 ಜನರಿದ್ದ ವಿಮಾನ ನೇಪಾಳದಲ್ಲಿ ಪತನ ; ಹೊತ್ತಿ ಉರಿದ ಫ್ಲೈಟ್‌ – ಕಹಳೆ ನ್ಯೂಸ್

ಕಠ್ಮಂಡು: ನಾಲ್ವರು ಸಿಬ್ಬಂದಿ ಸೇರಿ 72 ಜನರಿದ್ದ ವಿಮಾನವು ನೇಪಾಳದ (Nepal) ಪೋಖ್ರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Pokhara International Airport) ರನ್‌ವೇನಲ್ಲೇ ಪತನಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

72 ಆಸನಗಳ ಸಾಮರ್ಥ್ಯ ಹೊಂದಿದ್ದ ಯೇತಿ ಏರ್‌ಲೈನ್ಸ್ (Yeti Airlines) ವಿಮಾನವು ಇಲ್ಲಿನ ಹಳೆಯ ವಿಮಾನ ನಿಲ್ದಾಣ ಹಾಗೂ ಪೋಖ್ರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಪತನಗೊಂಡಿದೆ. ಸುಮಾರು 68 ಪ್ರಯಾಣಿಕರು ಇದರಲ್ಲಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. 

ಈ ಕುರಿತು ಮಾತನಾಡಿರುವ ಯೇತಿ ಏರ್‌ಲೈನ್ಸ್ ವಕ್ತಾರ ಸುದರ್ಶನ್ ಬರ್ತೌಲಾ, ವಿಮಾನದಲ್ಲಿ 68 ಪ್ರಯಾಣಿಕರು ಮತ್ತು ನಾಲ್ಕು ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ಹೇಳಿದ್ದಾರೆ. 

ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.