Tuesday, December 3, 2024
ಸುದ್ದಿ

ಕುಕ್ಕಾಜೆ ಶ್ರೀ ಸಿದ್ದಿವಿನಾಯಕ ಮಂದಿರಕ್ಕೆ ತೆರಳಿದ ಬಂಟ್ವಾಳ ಶಾಸಕರ ಗ್ರಾಮವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಾಯಾತ್ರೆ –ಬೂತ್ ವಿಜಯ್ ಸಂಕಲ್ಪ ಕಾರ್ಯಕ್ರಮ – ಕಹಳೆ ನ್ಯೂಸ್

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತ್ರತ್ವದಲ್ಲಿ , ಬಂಟ್ವಾಳ ಬಿಜೆಪಿ ವತಿಯಿಂದ ಜ.14 ರಿಂದ ಜ.26 ರ ವರೆಗೆ ನಡಯುವ ಗ್ರಾಮವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಾಯಾತ್ರೆ ಮಧ್ಯಾಹ್ನದ ವೇಳೆ ಕುಕ್ಕಾಜೆ ಶ್ರೀ ಸಿದ್ದಿವಿನಾಯಕ ಮಂದಿರಕ್ಕೆ ತೆರಳಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಬಂಟ್ವಾಳ ‌ತಾಲೂಕಿನ ಕುಕ್ಕಾಜೆ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದಲ್ಲಿ ಮಧ್ಯಾಹ್ನ ಬೂತ್ ವಿಜಯ್ ಸಂಕಲ್ಪ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ ಅವರು ಮಾತನಾಡಿ, ” ವಿಜಯ ಸಂಕಲ್ಪ ಅಭಿಯಾನ ” ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಚುನಾವಣೆಯ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು ಯಾವ ರೀತಿಯಲ್ಲಿ ತೊಡಗಿಸಿಕೊಳ್ಳುವುದು ಎಂಬುದರ ಬಗ್ಗೆ ಮಾಹಿತಿ ‌ನೀಡಿದರು. ಬಂಟ್ವಾಳ ‌ಕ್ಷೇತ್ರದಲ್ಲಿ ನಡೆಸಲಾಗಿರುವ ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಆಗಬೇಕಾಗಿದೆ ಎಂದು ಅವರು ತಿಳಿಸಿದರು.
ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಕಾರ್ಯಕರ್ತರು‌ಮಾಡಬೇಕು ಎಂಬ ನಿಟ್ಟಿನಲ್ಲಿ ಸಭೆಯಲ್ಲಿ ತಿಳಿಸಿದರು.

ಕಾರ್ಯಕರ್ತರು ಜವಾಬ್ದಾರಿಯನ್ನು ಅರಿತುಕೊಂಡು ಚುನಾವಣೆ ಕಾರ್ಯಗಳನ್ನು ಮಾಡಲು ಸೂಚಿಸಿದರು.
ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಮಾತನಾಡಿ, ಜ.26 ರ ನಡೆಯುವ ಪಾದಯಾತ್ರೆಯಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಪಕ್ಷವನ್ನು ಇನ್ನಷ್ಟು ಗಟ್ಟಿ ಗೊಳಿಸುವ ನಿಟ್ಟಿನಲ್ಲಿ ತಾಲೂಕಿನ ಪ್ರತಿಯೊಬ್ಬರೂ ಬಿಜೆಪಿ ಸದಸ್ಯರಾಗುವಂತೆ ತಿಳಿಸಿದರು.

ಮಧ್ಯಾಹ್ನದ ಭೋಜನದ ಬಳಿಕ ಇಲ್ಲಿಂದ ಮತ್ತೆ ಪಾದಾಯಾತ್ರೆ ವಿಟ್ನಪಡ್ನೂರು ಗ್ರಾಮಕ್ಕೆ ಹೊರಟಿತು.

ಸಭೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಪ್ರಮುಖರಾದ ಮಾದವ ಮಾವೆ,ಸುದರ್ಶನ್ ಬಜ, ರವೀಂದ್ರ ಕಂಬಳಿ , ಮಂಚಿ ಗ್ರಾಮಪಂಚಾಯತ್ ಅಧ್ಯಕ್ಷೆ ಪುಷ್ಪಾ ಎಸ್.ಕಾಮತ್, ಉಪಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು