ನೇಪಾಳದಲ್ಲಿ ವಿಮಾನ ದುರಂತ : ಭಾರತೀಯ ಮಹಾರಾಷ್ಟ್ರದ ಥಾಣೆ ಮೂಲದ ಕುಟುಂಬ ಸೇರಿದಂತೆ 72 ಪ್ರಯಾಣಿಕರು ಸಜೀವ ದಹನ – ಕಹಳೆ ನ್ಯೂಸ್
ಕಠ್ಮಾಂಡ್ : ನೇಪಾಳದ ಭೀಕರ ವಿಮಾನ ಅಪಘಾತವಾಗಿದ್ದು, ನಾಲ್ವರು ಭಾರತೀಯರು ಸೇರಿದಂತೆ 72 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ ಥಾಣೆ ಮೂಲದ ಕುಟುಂಬ ಸಜೀವ ದಹನಗೊಂಡಿದ್ದಾರೆ. ಆಶೋಕ್ ಕಲುಮಾರ್,ತ್ರಿಪಾಠಿ, ಪತ್ನಿ ವೈಭವಿ ಬಾಂಡೇಕರ್‌ಮಕ್ಕಳಾದ ಧನುಷ್, ರಿತಿಕಾ ಸೇರಿದಂತೆ ಐವರು ಸಜೀವ ದಹನಗೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಕಠ್ಮಂಡುದಿಂದ ಪೋಖಾರಾಗೆ ಹೊರಟಿದ್ದ ಯೇತಿ ಏರ್ಲೈನ್ಸ್ನ ಎಟಿಆರ್ 72 ವಿಮಾನವು ಇಂದು ಬೆಳಿಗ್ಗೆ ಕಾಸ್ಕಿ ಜಿಲ್ಲೆಯ ಪೋಖಾರಾದಲ್ಲಿ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ. ಅಪಘಾತಕ್ಕೀಡಾದ ವಿಮಾನದಲ್ಲಿ ಒಟ್ಟು 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು, ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ನೇಪಾಳದ ಪೋಖಾರಾ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಘಾತದಲ್ಲಿ 53 ನೇಪಾಳಿ, 5 ಭಾರತೀಯರು, 4 ರಷ್ಯನ್, 1 ಐರಿಶ್, 2 ಕೊರಿಯನ್ನರು, 1 ಅರ್ಜೆಂಟೀನಾ ಮೂಲದವರು ತಿಳಿದು ಬಂದಿದೆ.