Recent Posts

Sunday, January 19, 2025
ಸುದ್ದಿ

ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಸ್ಟಾರ್ ಕ್ರೀಕೆಟಿಗ –ಕಹಳೆ ನ್ಯೂಸ್

ಸಿನಿಮಾ ರಂಗದAತೆ ಟೀಂ ಇಂಡಿಯಾದಲ್ಲೂ ಇದೀಗ ಮದುವೆ ಸಂಭ್ರಮಗಳದ್ದೇ ಸುದ್ದಿ. ಹೌದು, ಸದ್ಯದಲ್ಲೇ ಸ್ಟಾರ್ ಕ್ರೀಕೆಟಿಗರು ಹಸೆಮಣೆ ಏರಲಿದ್ದಾರೆ. ಕಳೆದ ವರ್ಷದಿಂದಲೇ ಕನ್ನಡಿಗ ಕೆ.ಎಲ್ ರಾಹುಲ್ ಅವರ ಮದುವೆ ಬಗ್ಗೆ ಸುದ್ದಿ ಹರಿದಾಡುತ್ತಲೇ ಇತ್ತು. ಇದೀಗ ಕೆ.ಎಲ್. ರಾಹುಲ್ ಅವರ ಮದುವೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ, ಇನ್ನೊಬ್ಬ ಸ್ಟಾರ್ ಕ್ರಿಕೆಟಿಗನ ಮದುವೆ ಸುದ್ದಿ ಹೊರ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತ ತಂಡದ ಸ್ಟಾರ್ ಆಲ್ ರೌಂಡರ್ ಅಕ್ಷರ್ ಪಟೇಲ್ ಶೀಘ್ರವೇ ತಮ್ಮ ಬಹು ದಿನಗಳ ಗೆಳತಿ ಮೇಹಾ ಪಟೇಲ್ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ಇದೇ ತಿಂಗಳು ಅಕ್ಷರ್-ಮೇಹಾ ಮದುವೆ ನಿಶ್ಚಯವಾಗಿದೆ ಎಂದು ತಿಳಿದು ಬಂದಿದೆ. ಇದಕ್ಕಾಗಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಿಂದ ಅಕ್ಷರ್‌ಗೆ ಬಿಸಿಸಿಐ ವಿಶ್ರಾಂತಿ ನೀಡಿದೆ ಎಂದೂ ಹೇಳಲಾಗುತ್ತಿದೆ.

ಮೇಹಾ ತಮ್ಮ ಕೈ ಮೇಲೆ ‘ಅಕ್ಷ್’ಎಂದು ಹಚ್ಚೆ ಹಾಕಿಸಿಕೊಂಡಿದ್ದು, ಇದು ಅವರ ಪ್ರೀತಿಯ ಸೂಚಕವಾಗಿದೆ. ಮೇಹಾ ಅವರು ಡಯಟಿಷಿಯನ್ ಮತ್ತು ವೃತ್ತಿಯಲ್ಲಿ ಪೌಷ್ಟಿಕತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೆ.ಎಲ್. ರಾಹುಲ್-ಅಥಿಯಾ ಶೆಟ್ಟಿ ವಿವಾಹದ ಬೆನ್ನಲ್ಲೇ, ಅಕ್ಷರ್ ಪಟೇಲ್-ಮೇಹಾ ಪಟೇಲ್ ವಿವಾಹವೂ ನಡೆಯುತ್ತಿರುವುದು ಕ್ರಿಕೆಟ್ ಪ್ರೇಮಿಗಳಿಗೆ ಸಂತಸ ತಂದಿದೆ.