Recent Posts

Sunday, January 19, 2025
ಸುದ್ದಿ

ಪಳ್ಳ್ಳತ್ತಡ್ಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನದ ಸಂಭ್ರಮ ; ವರ್ಣರಂಜಿತ ಮೆರವಣಿಗೆ – ಕಹಳೆ ನ್ಯೂಸ್

ಎ,ಯು, ಪಿ , ಶಾಲೆ ಪಳ್ಳತ್ತಡ್ಕ ದಲ್ಲಿ 72 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯು ವಿವಿಧ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನೆರವೇರಿತು.

ಮುಖ್ಯೋಪಾಧ್ಯಾಯರಾದ ಶ್ರೀ ಮಣಿ ಅವರು ಧ್ವಜಾರೋಹಣಗೆಯ್ದು ಮಾತನಾಡಿದರು. ಧ್ವಜ ಹಾರಾಡುವಾಗ ಮಕ್ಕಳು ಜತೆಯಲ್ಲಿ ವಂದನೆ ಸಲ್ಲಿಸಿದರು. ಧ್ವಜ ಗೀತೆ ಯನ್ನು ಒಕ್ಕೊರಲಿನಿಂದ ಹಾಡಲಾಯಿತು. ಮೆಂಬರ್ ಶ್ರೀಮತಿ ಪುಷ್ಪ ಭಾಸ್ಕರ್, ಪಿ.ಟಿ,ಎ ಉಪಾಧ್ಯಕ್ಷ ಶ್ರೀಧರ , ಶಾಲಾ ವ್ಯವಸ್ಥಾಪಕರ ವತಿಯಿಂದ ಶ್ಯಾಮಲ ಭಟ್ , ಅಧ್ಯಾಪಕರಾದ ವಿಘ್ನೇಶ್ , ಬಾಬು, ರೋಜ, ಶಾಲಿನಿ, ಮಕ್ಕಳಿಗೆ ಶುಭವನ್ನು ಹಾರೈಸಿದರು . ಬಳಿಕ ಹೆತ್ತವರು, ಊರವರು , ಮಕ್ಕಳು ಹಾಗು ಅಧ್ಯಾಪಕರು ಸೇರಿಕೊಂಡು ವರ್ಣರಂಜಿತ ಮೆರವಣಿಗೆಯನ್ನು ನಡೆಸಿದರು .

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗಾಂಧೀಜಿ , ಸುಭಾಷ್ , ನೆಹರು , ಓಬವ್ವ , ಭಗತ್ ಸಿಂಗ್ ,ಭಾರತಮಾತಾ ಮೊದಲಾದ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣವನು ಧರಿಸಿದ ಮಕ್ಕಳು ಮೆರವಣಿಗೆಯ ಶೋಭೆಯನ್ನು ಹೆಚ್ಚಿಸಿದರು. ಇದರಿಂದ ಪುಟ್ಟ ಮಕ್ಕಳಿಗೆ ವಿವಿಧ ಹೋರಾಟಗಾರರ ಪರಿಚಯವೂ ಆಯಿತು. ಅದೇ ರೀತಿ ದೇಶಭಕ್ತಿ ಯನ್ನು ಸಾರುವಂತಹ ಘೋಷಣಾವಾಕ್ಯಗಳು ಎಲ್ಲರನ್ನು ಹುರಿದುಂಬಿಸುವಲ್ಲಿ ಯಶಸ್ವಿಯಾಯಿತು. ಅಧ್ಯಾಪಕರೂ ಮಕ್ಕಳೂ ಒಂದೇ ಸ್ವರದಲ್ಲಿ ಘೋಷಣೆ ಯನ್ನು ಕೂಗಿದರು. ವಿವಿಧ ವಿಭಾಗದಿಂದ ಸಿಹಿತಿಂಡಿಯನ್ನು ವಿತರಿಸಲಾಯಿತು . ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳಾದ ನೃತ್ಯ, ಹಾಡು, ನಾಟಕ, ಪ್ರಹಸನ, ಮೊದಲಾದವುಗಳು ನಡೆದವು .

ಅತ್ಯುತ್ತಮ ರೀತಿಯಲ್ಲಿ ಮಕ್ಕಳು ಕಾರ್ಯಕ್ರಮ ವನ್ನು ನಡೆಸಿಕೊಟ್ಟರು. ಎಲ್ಲರ ಸಹಕಾರದೊಂದಿಗೆ ಉತ್ತಮವಾದ ಕಾರ್ಯಕ್ರಮವು ನಡೆಯಿತು. ಹೀಗೆ ಬಹಳ ಉತ್ಸಾಹದಿಂದ ನಡೆದ ಸ್ವಾತಂತ್ರೋತ್ಸವವು ಮಕ್ಕಳ ನೆನಪಿನಲ್ಲಿ ಉಳಿಯುವುದೆಂಬುವುದರಲ್ಲಿ ಸಂಶಯವಿಲ್ಲ.