ಅಡ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಕುಳದಲ್ಲಿ 1ಕೋ. 66 ಲಕ್ಷ ರೂಪಾಯಿ ವೆಚ್ಚದಲ್ಲಿ 26 ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಡಾ. ಭರತ್ ಶೆಟ್ಟಿ – ಕಹಳೆ ನ್ಯೂಸ್
ಮಂಗಳೂರು : 1 ಕೋಟಿ 66 ಲಕ್ಷ ರೂಪಾಯಿ ವೆಚ್ಚದಲ್ಲಿ ಅಡ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಕುಳದಲ್ಲಿ 26 ಕಾಮಗಾರಿಗಳಿಗೆ ಶಾಸಕರಾದ ಡಾ. ಭರತ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು ಅಡ್ಯಾರು ಹೋಬಳಿಯನ್ನು ಮಂಗಳೂರಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದು ಸಾರ್ವಜನಿಕರ ಬಹುದಿನದ ಬೇಡಿಕೆಯನ್ನು ಈಡೇರಿಸಿದ್ದಂತಾಗಿದೆ. ಈ ಹಿಂದೆ ಇಲ್ಲಿನ ಜನತೆ ಪ್ರತಿಯೊಂದು ಸರಕಾರಿ ಕೆಲಸಕ್ಕೂ ಕಂದಾಯ ಗುರುಪುರ ಹೋಬಳಿಗೆ ಹೋಗುವ ಅನಿವಾರ್ಯತೆ ಇತ್ತು.
ಇದೀಗ ಎಲ್ಲಾ ಕೆಲಸ ಕಾರ್ಯಗಳು ಹತ್ತಿರದ ಮಂಗಳೂರು ಹೋಬಳಿ ಸಿಗುವಂತಾಗಿದೆ ಎಂದರು.
ಇಲ್ಲಿನ ಜನತೆಯ ಇನ್ನೊಂದು ಬೇಡಿಕೆಯಾದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ಜಲಜೀವನ್ ಮಿಷನ್ ಅಡಿಯಲ್ಲಿ ದಿನದ 24 ಗಂಟೆ ಮನೆ ಮನೆಗೆ ಒದಗಿಸಲು ಅನುದಾನ ಬಿಡುಗಡೆ ಮಾಡಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಶಕ್ತಿ ಕೇಂದ್ರ ಪ್ರಮುಖರಾದ ಅಜಿತ್ ಶೆಟ್ಟಿ, ಯಾದವ ಸಾಲಿಯಾನ್, ಜಯರಾಮ್ ಶೆಟ್ಟಿಗಾರ್, ಸಹ ಪ್ರಮುಖರಾದ, ಗಣೇಶ್ ರೈ, ಸುಂದರ್ ಸುವರ್ಣ, ಜಗದೀಶ್, ಪ್ರಮುಖರಾದ ಮಹಾಬಲ ಕೇಮಂಜೂರ್, ಪ್ರಸನ್ನ ಅಡ್ಯಾರ್, ಕೃಷ್ಣ ಪೂಜಾರಿ, ನಳಿನಿ, ಸಂತೋμï ತುಪ್ಪೆಕಲ್ಲು, ಜನಾರ್ಧನ್ ಅರ್ಕುಳ ಅಶೋಕ್ ಕೊಟ್ಟಾರಿ, ಬೂತ್ ಅಧ್ಯಕ್ಷರುಗಳಾದ, ಶೇಖರ್ ಶೆಟ್ಟಿ, ವಿಜಯ ಕೊಟ್ಟಾರಿ, ಶ್ರವಣ್ ಆಳ್ವ, ಭೋಜ ಪೂಜಾರಿ, ಸತೀಶ್ ಪಂಡಿತ್, ಚಂದ್ರಹಾಸ್, ಹಿರಿಯರಾದ ಪ್ರದೀಪ್ ಕುಮಾರ್ ಶೆಟ್ಟಿ, ಪ್ರವೀಣ್ ಶೆಟ್ಟಿ, ದಯಾನಂದ್, ದಿವಾಕರ ನಾಯ್ಕ್, ಪಂಚಾಯತ್ ಸದಸ್ಯರಾದ ಸುಚಿತ್ರ, ಮಾಜಿ ಸದಸ್ಯರಾದ ಮಹಾಬಲ ಪೂಜಾರಿ, ಸುಕುಮಾರ್ ಕರ್ಕೇರ, ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.