Sunday, January 26, 2025
ಸುದ್ದಿ

ಕಲ್ಮಂಜದಲ್ಲಿ ಅಚ್ಚರಿಯ ಘಟನೆ..! : ಮಾಗಣೆ ದೇವಸ್ಥಾನ ಸಂಗಮ ಕ್ಷೇತ್ರ ಪಜಿರಡ್ಕ ಕಲ್ಮಂಜ ಬ್ರಹ್ಮಕಲಶೋತ್ಸವ ದಿನ ನಿಗದಿಯಾಗುತ್ತಿದ್ದಂತೆ ಪ್ರತ್ಯೆಕ್ಷವಾದ ‘ಹೋರಿ’ – ಹೋರಿಯ ವಿಶೇಷವೇನು..? ಕಹಳೆ ನ್ಯೂಸ್

ಇತಿಹಾಸ ಪ್ರಸಿದ್ಧ ಮಾಗಣೆ ದೇವಸ್ಥಾನ ಸಂಗಮ ಕ್ಷೇತ್ರ ಪಜಿರಡ್ಕ ಕಲ್ಮಂಜ ಬ್ರಹ್ಮಕಲಶೋತ್ಸವ ದಿನ ನಿಗದಿಯಾಗುತಿದ್ದಂತೆ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ.. ಪಜಿರಡ್ಕ ದೇವಸ್ಥಾನಕ್ಕೆ ಹತ್ತಿರದ ಪ್ರದೇಶಗಳಲ್ಲಿ ಈ ವರೆಗೆ ಕಂಡಿರಾದ ವಾರಸುದಾರರಿಲ್ಲದ, ಬೃಹಧಾಕರದ ‘ಹೋರಿ’ ಒಂದು ರಾತ್ರಿ ಹೊತ್ತು ಓಡಾಡುವುದು ಕೆಲವರಿಗೆ ಗೋಚರಿಸಿತು.. ಈ ಬಗ್ಗೆ ಊರಲ್ಲಿ ಸುದ್ದಿಯಾಗುತ್ತಿದ್ದಂತೆ ಜನರಿಗೆ ಒಂದು ಕಡೆ ಭಯವಾದರೆ,ಇನ್ನೊಂದೆಡೆ ಭಕ್ತಿಯ ಭಾವವು ನೆಲೆಮಾಡಿಸಿತು..

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಾರು 2-3 ತಿಂಗಳಿಂದ ಈ ಹೋರಿಯು ಓಡಾಟ ನಡೆಸುತ್ತಿದ್ದರು ಯಾವುದೇ ತೊಂದರೆ ನೀಡಿಲ್ಲ ಮತ್ತು ಯಾವುದೇ ಜನರೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿಲ್ಲ.ಇತ್ತೀಚಿನ ದಿನಗಳಲ್ಲಿ ಹಗಲು ಕೂಡ ದಿನಕ್ಕೊಂದು ಪ್ರದೇಶದಲ್ಲಿ ಪ್ರತ್ಯಕ್ಷವಾಗಿ ಕಾಣುವ ಈ ಹೋರಿಗೆ “ನಂದಿ”(ಶಿವನ ವಾಹನ) ಎಂದು ಜನ ಹೆಸರು ಸೂಚಿಸಿ ಭಕ್ತಿ ಭಾವ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಇದು ಸುಮಾರು 800ವರ್ಷಗಳ ಇತಿಹಾಸವಿರುವ ನಂಬಿಕೆಯ ಶಕ್ತಿ ಪೀಠ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವರ ಕಾರ್ಣಿಕದ ಪ್ರತ್ಯಕ್ಷವಾಗಿ ಕೈಲಾಸದೀಷ ಶಿವನೇ ತನ್ನ ನಂದಿಯನ್ನು ಬ್ರಹ್ಮಕಲಶೋತ್ಸವದ ಶುಭ ಸಂಧರ್ಭದಲ್ಲಿ (31-01-2023ರಿಂದ 06-02-2023) ಕಳುಹಿಸಿ ಕೊಟ್ಟಿದ್ದಾರೆ ಎಂದು ನಂಬಿಕೆಯ ಮಾತುಗಳು ಹರಿದಾಡುತ್ತಿದೆ..

ಏನೇ ಇರಲಿ ಈ ಕಲಿಯುಗದಲ್ಲಿ ಇಂತಹ ಕಾರ್ಣಿಕ ಜನರ ಕಣ್ಣ ಮುಂದೆ ಪ್ರತ್ಯಕ್ಷವಾಗುವುದು ಜನರಲ್ಲಿ ಭಕ್ತಿಯ ಸಂಚಲನ ಮೂಡಿಸಿದೆ.