Friday, September 20, 2024
ಸುದ್ದಿ

Big Breaking : ಕುಮಾರಧಾರೆ ಅಬ್ಬರಕ್ಕೆ ಕುಕ್ಕೆ ಸುಬ್ರಹ್ಮಣ್ಯ ತತ್ತರ ; ನೆರವಿಗೆ ಬಾರದ ಬಂಡ ಸರಕಾರ ( ವಿಡಿಯೋ ) – ಕಹಳೆ ನ್ಯೂಸ್

ಸುಬ್ರಹ್ಮಣ್ಯ, ಆ 16 : ಕುಕ್ಕೆ ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಸುರಿದ ಧಾರಕಾರ ಮಳೆಯಿಂದಾಗಿ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದೆ. ನದಿಯಲ್ಲಿನ ಹರಿವು ಏರಿಕೆಯಾಗಿ ಕುಮಾರಧಾರ ಸ್ನಾನಘಟ್ಟ ಜಲಾವೃತಗೊಂಡಿದೆ. ಅಲ್ಲದೆ ಶೌಚಾಲಯ, ಡ್ರೆಸ್ಸಿಂಗ್ ರೂಂ ಸಂಪೂರ್ಣ ಮುಳುಗಡೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂಗಡಿ ಮುಂಗಟ್ಟುಗಳು ಭಾಗಶಃ ಜಲಾವೃತಗೊಂಡಿದೆ. ಕುಮಾರಧಾರ ನದಿಯ ಉಪನದಿ ದರ್ಪಣ ತೀರ್ಥ ನದಿಯು ಉಕ್ಕಿ ಹರಿದು ಪಂಜ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ, ಗುಂಡ್ಯ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ, ಉಪ್ಪಿನಂಗಡಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ನಿನ್ನೆ ಸಂಜೆ ನಾಲ್ಕು ಗಂಟೆಯ ವೇಳೆಗೆ ಪಂಜ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದ್ದು. ಇಂದು ಮುಂಜಾನೆ ವೇಳಿಗೆ ಮಿಕ್ಕುಳಿದ ರಸ್ತೆಗಳೂ ಜಲಾವೃತಗೊಂಡಿದೆ. ಅಲ್ಲದೆ ನಿರಂತರ ಸುರಿದ ಮಳೆಯಿಂದಾಗಿ ಕುಮಾರಧಾರ ನದಿ ಪಾತ್ರದಲ್ಲಿರುವ ಕೃಷಿ ತೋಟಗಳಿಗೆ ನೀರು ನುಗ್ಗಿದ್ದು, ಅಪಾರ ಹಾನಿ ಸಂಭವಿಸಿದೆ.

ಜಾಹೀರಾತು

ಆದರೆ, ಇದು ವರೆಗೂ ಒಬ್ಬನೇ ಒಬ್ಬ ಪೋಲಿಸ್ ಆಗಲಿ ಸರಕಾರಿ ಅಧಿಕಾರಿಗಳಾಗಲಿ ಯಾವರೂ ಜನರ ನೆರವಿಗೆ ಧಾವಿಸಿಲ್ಲ.

( ವಿಡಿಯೋ ) :

https://youtu.be/3aiZsErQ94Q