Friday, January 24, 2025
ಸುದ್ದಿ

ಪ್ರೀತಿಗೆ ಕೊಳ್ಳಿ ಇಟ್ಟ ಪಾಗಲ್ ಪ್ರೇಮಿ ಉಮೇಶ್ ಅರೆಸ್ಟ್ –ಕಹಳೆ ನ್ಯೂಸ್

ಪುತ್ತೂರಿನ ಮುಂಡೂರಿನಲ್ಲಿ ಯುವತಿಯನ್ನು ಮನೆಯ ಅಂಗಳದಲ್ಲೇ ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬ0ಧಿಸಿದ0ತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬ0ಧಿತ ಆರೋಪಿಯನ್ನು ಕನಕಮಜಲಿನ ಅಂಗಾರ ಎಂಬವರ ಪುತ್ರ ಉಮೇಶ್ ಎಂದು ಗುರುತಿಸಲಾಗಿದೆ

ಉಮೇಶ್ ಜಯಶ್ರೀಯನ್ನು ಪ್ರೀತಿಸುತ್ತಿದ್ದು, ಬಿ.ಎಸ್.ಸಿ ಪದವೀಧರೆಯಾದ ಜಯಶ್ರೀ ಇತ್ತೀಚೆಗೆ ಅವನ ಗುಣ ನಡತೆ ಇಷ್ಟವಾಗದ ಕಾರಣ ಉಮೇಶನನ್ನು ದೂರ ಮಾಡಿದ್ದಳು. ಈ ಹಿನ್ನೆಲೆ ಕೋಪಗೊಂಡ ಉಮೇಶ್ ಆಕೆಯನ್ನು ಹತ್ಯೆ ಮಾಡಿದ್ದಾಗಿ ತನಿಖೆ ವೇಳೆ ತಿಳಿದು ಬಂದಿದೆ. ಜಯಶ್ರೀ ತಾಯಿ ಕೂಡ ಆತನೇ ಹತ್ಯೆ ಮಾಡಿರಬಹುದು ಎಂದು ಆರೋಪಿಸಿ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದೀಗ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿ ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.