Thursday, January 23, 2025
ಸುದ್ದಿ

ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿ : ದೇವಿಯ ದರ್ಶನ ಪಡೆದ ರಾಬರ್ಟ್ ಕ್ವೀನ್ ಆಶಾ ಭಟ್ –ಕಹಳೆ ನ್ಯೂಸ್

ತಮ್ಮ ಇಂಪಾದ ಗಾಯನ ಹಾಗೂ ಡ್ಯಾನ್ಸ್ ಮೂಲಕ ಆಗಾಗ ಮೋಡಿ ಮಾಡುತ್ತಾ ಜೊತೆಗೆ ರಾಬರ್ಟ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪರಿಚಿತರಾದ ಆಶಾ ಭಟ್ ಬಂಟ್ವಾಳ ತಾಲೂಕಿನ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ದೇವಿಯ ದರ್ಶನ ಪಡೆದಿದ್ದಾರೆ. ಈ ವೇಳೆ ಕ್ಷೇತ್ರದ ಅರ್ಚಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇನ್ನು ಮಿಸ್ ಸೂಪರ್‌ನ್ಯಾಷನಲ್ ಆಗಿ ಆಯ್ಕೆಯಾಗಿದ್ದ ಆಶಾ ಭಟ್ ಮೂಲತಃ ಶಿವಮೊಗ್ಗದ ಭದ್ರತಿಯವವರು. ಕೆರಿಯರ್ ಶುರುವಿನಲ್ಲೇ ಬಾಲಿವುಡ್ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡವರು. ಕನ್ನಡದ ಮೊದಲ ಚಿತ್ರ ರಾಬರ್ಟ್ನಲ್ಲಿ ತನ್ನ ಅಮೋಘ ನಟನೆಯಿಂದ ಕನ್ನಡಿಗರ ಮನಗೆದ್ದವರು. ಸಕಲಕಲಾ ವಲ್ಲಭೆ ಆಗಿರುವ ಆಶಾ ಬ್ಯೂಟಿ ಜೊತೆಗೆ ಹಾಡು, ಡ್ಯಾನ್ಸ್, ಕರಾಟೆ, ಮಾರ್ಷಲ್ ಆರ್ಟ್ಸ್ ನಂತಹ ನಾನಾ ತರಹದ ವಿದ್ಯೆಯಲ್ಲಿ ಪ್ರವೀಣೆಯಾಗಿದ್ದಾರೆ.