Thursday, January 23, 2025
ಸುದ್ದಿ

10 ಸಾವಿರ ಉದ್ಯೋಗಿಗಳನ್ನು ತೆಗೆಯಲು ಮುಂದಾದ ಮೈಕ್ರೋಸಾಫ್ಟ್‌ ಕಂಪನಿ – ಕಹಳೆ ನ್ಯೂಸ್

ವಾಷಿಂಗ್ಟನ್‌: ಫೇಸ್‌ಬುಕ್‌, ಅಮೆಜಾನ್‌ ಬಳಿಕ ಸಾಫ್ಟ್‌ವೇರ್‌ ದಿಗ್ಗಜ ಕಂಪನಿ ಮೈಕ್ರೋಸಾಫ್ಟ್‌ ಉದ್ಯೋಗಿಗಳನ್ನು ತೆಗೆಯುವ ಪ್ರಕ್ರಿಯೆಗೆ ಮುಂದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೈಕ್ರೋಸಾಫ್ಟ್‌ ಶೀಘ್ರವೇ ಸಾವಿರರು ಉದ್ಯೋಗಿಗಳನ್ನು ತೆಗೆಯಲು ಮುಂದಾಗಿದೆ ಎಂದು ವರದಿಯಾಗಿದೆ. ಮಾನವ ಸಂಪನ್ಮೂಲ ಮತ್ತು ಎಂಜಿನಿಯರಿಂಗ್ ವಿಭಾಗ ಸೇರಿ ಸಾವಿರಾರು ಉದ್ಯೋಗಗಳನ್ನು ಕಡಿತಗೊಳಿಸಲು ಮೈಕ್ರೋಸಾಫ್ಟ್ ಯೋಜಿಸಿದೆ.

ಆರ್ಥಿಕ ಹಿಂಜರಿತದ ಕಾರಣ ನೀಡಿ ತನ್ನ ಉದ್ಯೋಗಿಗಳ ಶೇ.5 ರಷ್ಟು ಅಥವಾ ಸುಮಾರು 11 ಸಾವಿರ ಉದ್ಯೋಗಿಗಳನ್ನು ತೆಗೆಯಲು ಮೈಕ್ರೋಸಾಫ್ಟ್‌ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

2022ರ ಜೂನ್‌ ನಲ್ಲಿ ಸಲ್ಲಿಸಿದ ಫೈಲಿಂಗ್‌ ನಲ್ಲಿ ಮೈಕ್ರೋಸಾಫ್ಟ್‌ ನಲ್ಲಿ ಒಟ್ಟು 2.21 ಲಕ್ಷ ಉದ್ಯೋಗಿಗಳಿದ್ದರು. ಅಮೆರಿಕದಲ್ಲೇ 1.22 ಲಕ್ಷ ಉದ್ಯೋಗಿಗಳಿದ್ದರೆ ವಿವಿಧ ದೇಶಗಳಲ್ಲಿ ಒಟ್ಟು 99 ಸಾವಿರ ಉದ್ಯೋಗಿಗಳಿದ್ದರು.