Wednesday, January 22, 2025
ಕ್ರೈಮ್ಬೆಂಗಳೂರುರಾಜ್ಯಸುದ್ದಿ

ಸ್ಕೂಟರ್ ಹಿಂದೆ ಧರಧರನೇ ವೃದ್ದನನ್ನ ಎಳೆದೊಯ್ದ ಆರೋಪಿ ಸಾಹಿಲ್ ಯಾಸಿನ್ ಗೆ ನ್ಯಾಯಾಂಗ ಬಂಧನ – ಕಹಳೆ ನ್ಯೂಸ್

ಬೆಂಗಳೂರು: ಸ್ಕೂಟರ್ ಹಿಂದೆ ವೃದ್ಧನನ್ನು ಧರಧರನೇ ಎಳೆದುಕೊಂಡು ಹೋಗಿದ್ದ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳವಾರ ಸಿಲಿಕಾನ್ ಸಿಟಿಯ ವಿಜಯನಗರ (Vijayanagar) ದ ಹೊಸಹಳ್ಳಿ (Hosahalli) ಯಲ್ಲಿ ನಡೆದ ಘಟನೆ ಮಾನವ ಕುಲಕ್ಕೆ ಅವಮಾನ ಎಸಗುವಂತೆ ಮಾಡಿತ್ತು. ಈ ಕಾಲದಲ್ಲಿ ಯಾವುದೇ ಪ್ರಾಣಿಗಳನ್ನ ಕೂಡ ಅಷ್ಟೊಂದು ಅಮಾನವೀಯವಾಗಿ ನಡೆಸಿಕೊಳ್ಳುವುದಿಲ್ಲ. ಆದರೆ ದ್ವಿಚಕ್ರ ವಾಹನ ಸವಾರ ಶಾಹಿಲ್, ಬೊಲೆರೋ (Bolero) ಟಚ್ ಮಾಡಿದ್ದಲ್ಲದೆ ಮುತ್ತಪ್ಪಗೆ ಕಾಲಲ್ಲಿ ಒದ್ದು ಎಸ್ಕೇಪ್ ಆಗ್ತಿದ್ದ. 

ಈ ವೇಳೆ ಬಿಡಬಾರದು ಅಂತಾ ಗಾಡಿ ಹಿಡಿದಿದ್ದ ಮುತ್ತಪ್ಪರನ್ನ ಶಾಹಿಲ್ ಅರ್ಧ ಕೀ.ಮಿಗೂ ಹೆಚ್ಚು ಧರಧರನೇ ಎಳೆದೊಯ್ದಿದ್ದ. ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದ ಮುತ್ತಪ್ಪಗೆ ಇಂದೂ ಟ್ರೀಟ್‍ಮೆಂಟ್ ಮುಂದುವರಿದಿದೆ. ಎಕ್ಸ್ ರೇ ಮಾಡಿಸಿದ್ದು, ಬೋನ್ ಗಳಿಗೆ ತೊಂದರೆಯಾಗಿಲ್ಲ. ದೇಹದ ಗಾಯಗಳ ನೋವು ಇನ್ನೂ ಆರಿಲ್ಲ ಎಂದು ಮತ್ತಪ್ಪ ಹೇಳಿದ್ದಾರೆ.

ಘಟನೆ ಸಂಬಂಧ ವಿಜಯನಗರ ಸಂಚಾರಿ ಪೊಲೀಸ್ ಠಾಣೆ (Vijayanagar Traffic Police) ಹಾಗೂ ಗೋವಿಂದರಾಜನಗರ ಪೊಲೀಸ್ ಠಾಣೆ (Govindarajanagar Police Station) ಯಲ್ಲಿ ಎಫ್‍ಐ ಆರ್ ದಾಖಲಾಗಿದೆ. ಭಯದಲ್ಲಿ ಹೀಗೆ ಮಾಡ್ಬಿಟ್ಟೆ ಅಂತಾ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದ ಶಾಹಿಲ್ ನನ್ನ ಇಂದು ಗೋವಿಂದರಾಜನಗರ ಪೊಲೀಸರು 34 ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಇದೀಗ ಆರೋಪಿಯನ್ನು 14 ದಿನಗಳ ಕಾಲ ಅಂದ್ರೆ ಜನವರಿ 31 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.