Wednesday, January 22, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ದಿ. ಕಿಶೋರ್ ಕುಮಾರ್ ಅರ್ಕ ರವರ ಸ್ಮರಣಾರ್ಥವಾಗಿ ಫೆ. 04 ರಂದು ಅರ್ಕದಲ್ಲಿ ನಡೆಯಲಿದೆ ಹೊನಲು ಬೆಳಕಿನ ಪ್ರೊ. ಮಾದರಿಯ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ –ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ದುರ್ಗಾ ಯುವಕ ವೃಂದ (ರಿ) ಅರ್ಕ ಇದರ ಆಶ್ರಯದಲ್ಲಿ, ದಿ/ ಕಿಶೋರ್ ಕುಮಾರ್ ಅರ್ಕ ರವರ ಸ್ಮರಣಾರ್ಥವಾಗಿ, ಹೊನಲು ಬೆಳಕಿನ ಪ್ರೊ/ ಮಾದರಿಯ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಪೆ. 04ರಂದು ನಡೆಯಲಿದೆ.

ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ 65 ಕೆ.ಜಿ ವಿಭಾಗದ ಪುರುಷರ 48 ತಂಡಗಳ ಹೊನಲು ಬೆಳಕಿನ ಪ್ರೊ/ ಮಾದರಿಯ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಕಿಶೋರ್ ಟ್ರೋಫಿ -2023 ಫ್ರೆಬ್ರವರಿ 04 ರಂದು ಅರ್ಕ ಮೈದಾನದಲ್ಲಿ ಸಂಜೆ 3 ರಿಂದ ಆರಂಭವಾಗಲಿದೆ.

ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು ಪ್ರವೇಶ ಶುಲ್ಕ 700 ರೂ. ಪಾವತಿಸಿ ಪ್ರವೇಶಾತಿ ಪಡೆಯಬಹುದು. ಈ ಪಂದ್ಯಾಟದಲ್ಲಿ ಒಟ್ಟು 8 ತಂಡಗಳಿಗೆ ಬಹುಮಾನ ನೀಡಲಾಗುತ್ತದೆ. ಪ್ರಥಮ ಸ್ಥಾನಕ್ಕೆ, ಕಿಶೋರ್ ಟ್ರೊಫಿ ಹಾಗೂ 15,000 ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದವರಿಗೆ ಕಿಶೋರ್ ಟ್ರೋಫಿ ಹಾಗೂ 10,000 ನಗದು ಬಹುಮಾನ, ತೃತೀಯ ಸ್ಥಾನಕ್ಕೆ ಕಿಶೊರ್ ಟ್ರೋಫಿ ಹಾಗೂ 5,000 ನಗದು ಬಹುಮಾನ, ನಾಲ್ಕನೇ ಸಾನಕ್ಕೆ 5,000 ನಗದು ಬಹುಮಾನ ಹಾಗೂ ಕಿಶೋರ್ ಟ್ರೋಫಿ, ಐದನೇಯ ಸ್ಥಾನಕ್ಕೆ ಕಿಶೋರ್ ಟ್ರೋಫಿ ಹಾಗೂ 1,000 ನಗದು ಬಹುಮಾನ, ಆರನೇ ಸ್ಥಾನಕ್ಕೆ ಕಿಶೋರ್ ಟ್ರೋಫಿ ಹಾಗೂ 1,000 ನಗದು ಬಹುಮಾನ, ಏಳನೇ ಸ್ಥಾನಕ್ಕೆ ಕಿಶೋರ್ ಟ್ರೋಫಿ ಹಾಗೂ 1.000 ನಗದು ಬಹುಮಾನ, ಏಂಟನೇ ಸ್ಥಾನಕ್ಕೆ ಕಿಶೊರ್ ಟ್ರೋಫಿ ಹಾಗೂ 1000 ನಗದು ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲಾ ತಂಡಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ಘೋಷಿಸಿದ್ದಾರೆ.