Wednesday, January 22, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳದಲ್ಲೊಂದು ಅನುಮಾನಸ್ಪದ ಕಾರು ಪತ್ತೆ ; ಸ್ಯಾಂಟ್ರೋ ರವಿ ಕಾರು ಶಂಕೆ – ಕಹಳೆ ನ್ಯೂಸ್

ಬಂಟ್ವಾಳ: ಕಳೆದ ಕೆಲವು ದಿನಗಳಿಂದ ಟೊಯೋಟಾ ಇನೋವಾ ಕಾರೊಂದು ವಾರಿಸುದಾರರಿಲ್ಲದೆ ಬಿಸಿರೋಡಿನಲ್ಲಿ ಅನಾಥವಾಗಿ ನಿಂತುಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಈ ಕಾರಿನ ಬಗ್ಗೆ ಸಾಕಷ್ಟು ಸಂಶಯಗಳು ಮೂಡಿದ್ದು, ಊಹಾಪೋಹಗಳು ಕೇಳಿ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಸಿರೋಡಿನ ಭಾರತ್ ಸ್ಟೋರ್ ಮುಂಭಾಗದಲ್ಲಿ ಫ್ಲೈ ಓವರ್ ನ ಅಡಿಭಾಗದಲ್ಲಿ ಕೆ.ಎಲ್. ದಾಖಲೆಯ ವಾಹನ ಅನಾಥ ರೀತಿಯಲ್ಲಿ ನಿಂತುಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಇದು ಇತ್ತೀಚಿಗೆ ಬಾರೀ ಸುದ್ಧಿಯಾಗಿದ್ದ ಸ್ಯಾಂಟ್ರೋ ರವಿ ಅವರಿಗೆ ಸೇರಿದ ಕಾರು ಎಂಬ ವದಂತಿ ಹರಡಿದೆ.

ಅಸಲಿಗೆ ಇದು ಕೇರಳ ಮೂಲದ ಸಬೀಬ್ ಅಶ್ರಫ್ ಎಂಬವರ ಹೆಸರಿನಲ್ಲಿ ಈ ಕಾರಿನ ದಾಖಲೆ ತೋರಿಸುತ್ತಿದೆ.

ಕೆ.ಎಲ್.14 ವೈ.8999 ನಂ.ಕಾರು ಕೇರಳ ಸರಕಾರದ ಆರ್.ಟಿ.ಒ.ಯಲ್ಲಿ ಬ್ಲ್ಯಾಕ್ ಲಿಸ್ಟ್ ಗೆ ಸೇರಿದೆ. ಇಲಾಖೆ ಕೆಲವೊಂದು ಕಾರಣಗಳನ್ನು ನೀಡಿ ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಿದ ದಾಖಲೆ ತೋರಿಸುತ್ತಿದೆ.

ವ್ಯಾಟ್ಸಪ್ ಕಾಲ್ ಓನ್ಲಿ…..

ನಿಲ್ಲಿಸಲಾಗಿದ್ದ ಕಾರಿನ ಒಳ ಭಾಗದಲ್ಲಿ ಚೀಟಿ ಒಂದನ್ನು ಇಟ್ಟಿದ್ದು, ಸಮೀರ್ ಎಂಬ ಹೆಸರಿನ ಮುಂದೆ 9995333448 ಎಂದು ಬರೆಯಲಾಗಿದೆ. ಒನ್ಲಿ ವ್ಯಾಟ್ಸಪ್ ಕಾಲ್ ಎಂದು ಬರೆದಿದ್ದಾರೆ.

ಸ್ಥಳೀಯ ಅಂಗಡಿ ಮಾಲಕರಿಗೆ ಈ ಕಾರಿನ ಬಗ್ಗೆ ಸಾಕಷ್ಟು ಸಂದೇಹಗಳು ಮೂಡಿದ್ದು, ಸ್ಯಾಂಟ್ರೋ ರವಿ ಇಲ್ಲಿ ಕಾರು ಇಟ್ಟು ಪರಾರಿಯಾಗಿದ್ದಾನೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.