Thursday, January 23, 2025
ಸುದ್ದಿ

ಕಂಕಣಭಾಗ್ಯ ಕೂಡಿ ಬರಲು ಕೊರಗಜ್ಜ ದೈವದ ಮೊರೆ ಹೋದ ನಟಿ ಪ್ರೇಮಾ – ಕಹಳೆ ನ್ಯೂಸ್

ಒಂದು ಕಾಲದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಪ್ರೇಮಾ ಅವರು ಇಂದು ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಮೊದಲನೇ ಮದುವೆಯಾಗಿ ಡೈವೋರ್ಸ್ ಪಡೆದಿರುವ ನಟಿ ಇದೀಗ 2ನೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಇದೀಗ ಕೊರಗಜ್ಜ ದೈವದ ಮೊರೆ ಹೋಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ಕಾಂತಾರ ಸಿನಿಮಾ ಬಳಿಕ ತುಳುನಾಡಿನ ದೈವಗಳ ಶಕ್ತಿ ಬಗ್ಗೆ ಎಲ್ಲರಿಗೂ ತಿಳಿಯುವಂತಾಯ್ತು. ಬೇರೆ ಜಿಲ್ಲೆಗಳ, ರಾಜ್ಯಗಳ ಭಕ್ತರು ದೈವದ ಮೊರೆ ಹೋಗುತ್ತಿದ್ದಾರೆ. ಇದರಲ್ಲಿ ಸ್ಯಾಂಡಲ್ ವುಡ್ ಕಲಾವಿದರ ಪಟ್ಟಿಯೂ ದೊಡ್ಡದಿದೆ. ಇತ್ತೀಚೆಗೆ ಶಿವರಾಜ್ ಕುಮಾರ್ ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡಿದ್ದರು, ನಟಿ ಶೃತಿ ಕೂಡ ದೈವದ ಮೊರೆ ಹೋಗಿದ್ದರು. ಇದೀಗ ನಟಿ ಪ್ರೇಮ ಕಂಕಣ ಭಾಗ್ಯ ಕರುಣಿಸುವಂತೆ ದೈವದ ಮೊರೆ ಹೋಗಿದ್ದಾರೆ.

ಉಡುಪಿ ಜಿಲ್ಲೆಯ ಕಾಪು ಕೊರಗಜ್ಜನ ಸನ್ನಿಧಿಯಲ್ಲಿ ಕಂಕಣಭಾಗ್ಯ ಕರಣಿಸುವಂತೆ ನಟಿ ಪ್ರೇಮಾ ಪ್ರಾರ್ಥನೆ ಮಾಡಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಬಂದಿದ್ದ ಅವರು, ಕೊರಗಜ್ಜ ದೈವದ ಸನ್ನಿಧಿಗೆ ಭೇಟಿ ನೀಡಿದ್ರು. ಪ್ರೇಮಾ ಜೊತೆಗೆ ಸಹೋದರ ಅಯ್ಯಪ್ಪ ಪತ್ನಿ ಅನು ಕೂಡ ದೈವಸ್ಥಾನಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ರು.

ಜೀವನ್ ಅಪ್ಪಚ್ಚು ಎಂಬುವವರನ್ನು ವಿವಾಹವಾಗಿದ್ದ ಪ್ರೇಮಾ, 2016ರಲ್ಲಿ ವಿಚ್ಛೇದನ ಪಡೆದ್ರು. ಪರಸ್ಪರರ ಒಪ್ಪಿಗೆ ಮೇರೆಗೆ ಬೆಂಗಳೂರಿನ ಕೌಟುಂಬಿಕ ಕೋರ್ಟ್ ನಲ್ಲಿ ಡೈವೋರ್ಸ್ ಪಡೆದಿದ್ದರು. ಈ ಮೂಲಕ 10 ವರ್ಷದ ದಾಂಪತ್ಯಕ್ಕೆ ಫುಲ್ ಸ್ಟಾಪ್ ಇಟ್ಟಿದ್ದರು. ಬಳಿಕ ಒಬ್ಬಂಟಿಯಾಗಿದ್ದ ಪ್ರೇಮಾ, ಇದೀಗ 2ನೇ ಮದುವೆಗೆ ಸಜ್ಜಾಗಿದ್ದಾರೆ.

ಅಂದಹಾಗೆ, 90ರ ದಶಕದಲ್ಲಿ ಬಹು ಬೇಡಿಕೆಯ ಕನ್ನಡದ ನಟಿಯಾಗಿದ್ದರು ಪ್ರೇಮಾ. ಅನ್ಯ ಭಾಷೆಗಳ ನಟಿಯರ ಮಧ್ಯೆ ಕನ್ನಡದ ನಟಿ ಸಾಲು-ಸಾಲು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಮನೆ ಮಾತಾಗಿದ್ರು. 1995ರಲ್ಲಿ ಶಿವರಾಜ್ ಕುಮಾರ್ ನಾಯಕ ನಟನಾಗಿದ್ದ ‘ಸವ್ಯಸಾಚಿ’ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರ ‘ಆಟ ಹುಡುಗಾಟ’ ಸಿನಿಮಾದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ರು. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.