Thursday, January 23, 2025
ಸುದ್ದಿ

ಸುರತ್ಕಲ್ ನಲ್ಲಿ ಕೃತಕ ಕಾಲುಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಿದ ಶಾಸಕ ಭರತ್ ಶೆಟ್ಟಿ –ಕಹಳೆ ನ್ಯೂಸ್

ಕಳೆದ ನಾಲ್ಕು ವರ್ಷಗಳಿಂದ ಎಂಸಿಎಫ್ ಸಂಸ್ಥೆ ಸಾಮಾಜಿಕ ಬದ್ಧತಾ ನಿಧಿಯಿಂದ ಉತ್ತಮ ಗುಣಮಟ್ಟದ ಕೃತಕ ಕಾಲುಗಳನ್ನು ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಅರ್ಹ ಫಲಾನುಭವಿಗಳಿಗೆ ನೀಡುತ್ತಿದ್ದಾರೆ. ಸುರತ್ಕಲ್ ನಲ್ಲಿ ಇಂತಹ ಮತ್ತೊಂದು ಕಾರ್ಯಕ್ರಮ ಶಾಸಕ ಭರತ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದಿದೆ. ನೊಂದವರ ಬಾಳಿಗೆ ಬೆಳಕಾಗುವ ಇಂತಹ ಕಾರ್ಯ ನಿಜಕ್ಕೂ ಶ್ರೇಷ್ಠ ಕಾರ್ಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಎಂಸಿಎಫ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದ ನಿತಿನ್ ಎಂ ಕಂಟಕ್, ಸಿಟಿ ಆಸ್ವತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಭಾಸ್ಕರ್ ಶೆಟ್ಟಿ, ಮುಖ್ಯ ಉತ್ಪಾದನಾ ಘಟಕದ ಮುಖ್ಯ ಅಧಿಕಾರಿ ಎಸ್ ಗಿರೀಶ್, ಮನಪಾ ಸದಸ್ಯ ವರುಣ್ ಚೌಟ, ಎಂಸಿಎಫ್ ಸಂಸ್ಥೆಯ ವೈದ್ಯಾಧಿಕಾರಿ ಯೊಗೀಶ್, ಪಿಅರ್ ಒ ಅವಿನಂದ್ ಹಾಗೂ ಎಂಡೊಲೈಟ್ ಅಟೋಬಾಕ್ ಸಂಸ್ಥೆ ಕೃತಕ ಅಂಗಗಳ ವಿತರಣಾ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.