Thursday, January 23, 2025
ಸುದ್ದಿ

ಪೊಲೀಸರ ಜೀಪ್‍ ಗೆ ದಂಡ ವಿಧಿಸಿದ ಆಯುಕ್ತರು.! –ಕಹಳೆ ನ್ಯೂಸ್

ಮೈಸೂರು : ಮೈಸೂರಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾಗಿದ್ದ ಎರಡು ಪೊಲೀಸ್ ಜೀಪ್ ಗಳಿಗೆ ನಗರ ಪೊಲೀಸ್ ಆಯುಕ್ತರು ದಂಡ ವಿಧಿಸಿದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಪೊಲೀಸರು ವಾಹನ ನಿಲುಗಡೆ ನಿಷೇಧ ಸ್ಥಳದಲ್ಲಿ ಪೊಲೀಸ್ ಜೀಪ್ ಗಳನ್ನು ನಿಲ್ಲಿಸಿದ್ದರು. ಇದನ್ನು ಕಂಡ ಸಾರ್ವಜನಿಕರು ಪೋಟೋ ತೆಗೆದು ನಗರ ಪೊಲೀಸ್ ಆಯುಕ್ತರಾದ ಬಿ.ರಮೇಶ್ ಅವರಿಗೆ ಕಳುಹಿಸಿದ್ದರು.

ನಗರ ಪೊಲೀಸ್ ಆಯುಕ್ತರು KA-55-G-0376 ಹಾಗೂ KA-55-5-0377 ನೋಂದಣಿ ಸಂಖ್ಯೆಯ ಜೀಪ್ ಗಳಿಗೆ ತಲಾ ಒಂದೊಂದು ಸಾವಿರದಂತೆ ದಂಡ ವಿಧಿಸಿದ್ದಾರೆ.

ಪೊಲೀಸರು ಸಾರ್ವಜನಿಕರಿಗೆ ವಾಹನ ನಿಲುಗಡೆ ನಿಷೇಧ ಪ್ರದೇಶದಲ್ಲಿ ವಾಹನ ನಿಲ್ಲಿಸಬಾರದು ಎಂದು ಹೇಳುವುದಷ್ಟೇ ಅಲ್ಲ, ಪಾಲನೆ ಕೂಡ ಮಾಡಬೇಕು. ಇದರಿಂದ ಸಾರ್ವಜನಿಕರೂ ಸಹ ಕಾನೂನನ್ನು ಪಾಲಿಸುತ್ತಾರೆ. ಆ ಉದ್ದೇಶದಿಂದಲೇ ದಂಡ ವಿಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.