ವಿಟ್ಲ ಜಾತ್ರೋತ್ಸವದಲ್ಲಿ ದಾಂಧಲೆ ನಡೆಸಿದ ಪ್ರಕರಣ; ರೌಡಿಶೀಟರ್ ಗಣೇಶ್ ಕಡಂಬು ಮತ್ತು ಮಂಜುನಾಥ್ ಸಹಿತ 6ಜನರ ಮೇಲೆ ಮತ್ತೊಂದು ಪ್ರಕರಣ ದಾಖಲು –ಕಹಳೆ ನ್ಯೂಸ್
ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಜಾತ್ರೋತ್ಸವ ನಡೆಯುತ್ತಿದ್ದು, ಅನೇಕ ಮಂದಿ ವ್ಯಾಪಾರ ಮಳಿಗೆಯನ್ನು ಹಾಕಿ ವ್ಯಾಪಾರ ನಡೆಸುತ್ತಿದ್ದಾರೆ. ಈ ಜಾತ್ರೋತ್ಸವ ಸಂದರ್ಭ ಸುರೇಶ್ ಎಂಬವರು ವ್ಯಾಪಾರ ಮುಗಿಸಿ ಮಳಿಗೆಯನ್ನು ಮುಚ್ಚುವ ವೇಳೆಯಲ್ಲಿ ಗಣೇಶ್ ಕಡಂಬು, ಮಂಜುನಾಥ್ ಸಹಿತ ಆರು ಮಂದಿ ಹುಡುಗರು ಏಕಾಏಕಿ ಬಂದು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದು, ಇವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೌಡಿಶೀಟರ್ ಗಣೇಶ್ ಕಡಂಬು ಮತ್ತು ಮಂಜುನಾಥ್ ಸಹಿತ ಆರು ಮಂದಿಯ ಮೇಲೆ ಇನ್ನೊಂದು ಪ್ರಕರಣ ದಾಖಲಾಗಿದೆ. ಸ್ಟಿಲ್ ಪಾತ್ರೆ ಅಂಗಡಿಗೆ ನುಗ್ಗಿ ಅಲ್ಲಿಂದ ವಸ್ತುಗಳನ್ನೆಲ್ಲಾ ರಸ್ತೆಗೆ ಎಸೆದು ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿಲ್ಲದೇ ಅಂಗಡಿ ಮಾಲೀಕರನ್ನು ಓಡಿಸಿದ್ದರೆ. ಈ ಆರು ಜನ ಸಂಜೆ ವೇಳೆ ಗಾಂಜಾ ಸೇವನೆ ಮಾಡಿ ಸುಮಾರು ಅಂಗಡಿಗಳಿಗೆ ತೊಂದರೆ ಮಾಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿ ಬರುತ್ತಿವೆ.
ಕಾರ್ಣಿಕ ಕ್ಷೇತ್ರ ವಿಟ್ಲ ಜಾತ್ರೆಯು ವರ್ಷಂಪ್ರತಿ ಅದ್ಧೂರಿಯಾಗಿ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ನಶೆಯಲ್ಲಿ ಈ ರೀತಿ ದೊಂಬಿ-ಗಲಾಭೆ ನಡೆಸಿ, ಬೇರೆ ಊರಿನಿಂದ ವ್ಯಾಪಾರ ನಡೆಸಲು ಬರುವ ವ್ಯಾಪಾರಿಗಳಿಗೆ ಭಯ ಹುಟ್ಟಿಸಿ ಇನ್ನು ಮುಂದೆ ಇಲ್ಲಿಗೆ ವ್ಯಾಪಾರ ನಡೆಸಲು ಬಾರದೇ ಹಾಗೇ ಸ್ಥಿತಿ ನಿರ್ಮಾಣ ಮಾಡುವ ಕೃತ್ಯ ಇದು. ಗಲಾಭೆ ವೇಳೆ ಇವರ ಜೊತೆ ಬೇರೆ ಊರಿನ ಕೆಲವು ಪುಡಿ ರೌಡಿಗಳು ಇದ್ದರು ಎಂಬ ಮಾಹಿತಿ ಇದೆ.
ವಿಟ್ಲ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.