Friday, January 24, 2025
ಸುದ್ದಿ

‘ನನ್ನನ್ನು ಅವೈಡ್ ಮಾಡ್ತಾ ಇದ್ಲು ಹಾಗಾಗಿ ಚೂರಿಯಿಂದು ಚುಚ್ಚಿ ಕೊಂದು ಬಿಟ್ಟೆ’ : ಸೈಕೋ ಪ್ರೇಮಿಯ ಆಟಕ್ಕೆ ಯುವತಿ ಬಲಿ – ಕಹಳೆ ನ್ಯೂಸ್

ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಭೀಕರವಾಗಿ ಕೊಲೆ ಮಾಡಿರೋ ಘಟನೆ ರಾಜಾನುಕುಂಟೆ ಪ್ರೆಸಿಡೆನ್ಸಿ ಯೂನಿವರ್ಸಿಟಿ ಕಾಲೇಜಿನಲ್ಲಿ ಜನವರಿ 2ರಂದು ನಡೆದಿತ್ತು. ಲಯಸ್ಮಿತಾ (19) ಕೊಲೆಯಾಗಿದ್ದ ಯುವತಿ. ಈ ಪ್ರಕರಣದ ತನಿಖೆಯನ್ನು ಬೆನ್ನು ಹತ್ತಿದ್ದ ಪೊಲೀಸರಿಗೆ ಕೊಲೆ ಆರೋಪಿ ಶಾಂಕಿAಗ್ ಹೇಳಿಕೆಯನ್ನು ಕೊಟ್ಟಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹತ್ಯೆಯಾದ ವಿದ್ಯಾರ್ಥಿನಿ ಲಯಸ್ಮಿತಾ ಕೋಲಾರ ಮುಳುಬಾಗಿಲು ಕಾಚಿಪುರ ನಿವಾಸಿ. ಆರೋಪಿ ಪವನ್ ಕಲ್ಯಾಣ್ (19) ಕೋಲಾರದ ಕಾಶಿಪುರದ ನಿವಾಸಿ. ಈತ ನೃಪತುಂಗ ಯುನಿವರ್ಸಿಟಿ ವ್ಯಾಸಂಗ ಮಾಡುತ್ತಿದ್ದ. ಕಳೆದ ಹಲವು ವರ್ಷದಿಂದ ಇಬ್ಬರು ಪ್ರೀತಿಸುತ್ತಿದ್ದರು. ಆದರೆ ಲಯಸ್ಮಿತಾ ಹೊಸ ಕಾಲೇಜಿಗೆ ಸೇರುತ್ತಿದ್ದಂತೆಯೇ ಪವನ್ ಕುಮಾರ್ ಜೊತೆ ಸರಿಯಾಗಿ ಮಾತನಾಡುತ್ತಿರಲಿಲ್ಲವಂತೆ. ಬೇರೆ ಹುಡುಗನ ಜೊತೆ ಓಡಾಡ್ತಿದ್ದಾಳೆ ಎಂದು ಕೋಪಿಸಿಕೊಂಡಿದ್ದ. ಇದೇ ಕಾರಣಕ್ಕೆ ಆಕೆಗೆ ಚಾಕು ಇರಿದು ಹತ್ಯೆ ಮಾಡಿದ್ದಾನೆ. ಲಯಸ್ಮಿತಾಳನ್ನ 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪಿ ಪವನ್ ಕಲ್ಯಾಣ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೊನೆಗೂ ಹದಿನೆಂಟು ದಿನಗಳ ಬಳಿಕ ಚೇತರಿಸಿಕೊಂಡಿದ್ದಾನೆ. ಸತತ ಚಿಕಿತ್ಸೆ ಬಳಿಕ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ. ಆರೋಪಿ ಡಿಸ್ಚಾರ್ಜ್ ಬೆನ್ನಲ್ಲೇ ರಾಜಾನುಕುಂಟೆ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಪವನ್ ಕಲ್ಯಾಣ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.

ನಾನು ಮೂರು ವರ್ಷಗಳಿಂದ ಲಯಸ್ಮಿತಾಳನ್ನ ಲವ್ ಮಾಡುತ್ತಿದ್ದೆ. ಅವಳೂ ನನ್ನನ್ನು ಒಪ್ಪಿದ್ದಳು. ಇತ್ತೀಚೆಗೆ ಬೇರೆ ಯುವಕನ ಜೊತೆ ಓಡಾಟ, ಮಾತುಕತೆ ಹೆಚ್ಚಾಗಿತ್ತು. ಹೀಗಾಗಿ ನನ್ನನ್ನು ಅವೈಡ್ ಮಾಡಿದ್ದಳು. ಒಂದಿನ ನೀನು ಇಷ್ಟ ಇಲ್ಲ ಎಂದು ಹೇಳಿಬಿಟ್ಟಳು. ನನಗೆ ಸಿಗದ ಪ್ರೀತಿ, ಯಾರಿಗೂ ಸಿಗಬಾರದು. ಅವಳು ಇಲ್ಲದ ಮೇಲೆ ನಾನು ಸಾಯಬೇಕು ಎಂದು ಡಿಸೈಡ್ ಮಾಡಿದ್ದೆ. ಪ್ರೀತಿಸಿದ ಹುಡುಗಿ ಲಯಸ್ಮಿತಾಳನ್ನು ಹತ್ಯೆ ಮಾಡಬೇಕೆಂದು ಮೆಜೆಸ್ಟಿಕ್ ಡಿ ಮಾರ್ಟ್ನಿಂದ ಹರಿತವಾದ ಚಾಕು ಖರೀದಿಸಿದ್ದೆ. ಅವಳನ್ನು ಕೊಲ್ಲಬೇಕು ಹಾಗೂ ನಾನೂ ಸಾಯಬೇಕು ಎಂದು ಡಿಸೈಡ್ ಮಾಡಿ ಕಾಲೇಜಿನ ಕ್ಯಾಂಪಸ್ ಬಳಿ ಹೋಗಿದ್ದೆ. ಈ ವೇಳೆ ಮಾತನಾಡಿಸಿದ್ರೂ ನನ್ನನ್ನು ಕೆಟ್ಟದಾಗಿ ಬೈದಳು. ಅದಕ್ಕಾಗಿಯೇ ತಂದಿದ್ದ ಚಾಕುವಿನಿಂದ ಮನಬಂದAತೆ ಚುಚ್ಚಿದೆ. ಅವಳಿಗಾಗಿ ಎದೆ ಮೇಲೆ ಹಾರ್ಟ್ ಸಿಂಬಲ್ ಹಾಕಿಸಿಕೊಂಡು ಹೆಸರು ಹಚ್ಚೆ ಹಾಕಿಸಿದ್ದೆ. ಅದೇ ಜಾಗದಲ್ಲಿ ಚುಚ್ಚಿಕೊಂಡು ಸಾಯಲು ಮುಂದಾಗಿದ್ದೆ. ನನ್ನ ಕೈಯಲ್ಲಿ ಚುಚ್ಚಿಕೊಳ್ಳೋಕೆ ಸರಿಯಾಗಿ ಸಾಧ್ಯವಾಗಿರಲಿಲ್ಲ. ಇದೇ ಕಾರಣಕ್ಕೆ ಕೈಕೊಯ್ದುಕೊಂಡೆ ಎಂದು ಆರೋಪಿ ಪವನ್ ಕಲ್ಯಾಣ ಪಲೀಸರಿಗೆ ಮಾಹಿತಿ ನೀಡಿದ್ದಾನೆ.