ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ನಿಜವಾದ ದೇಶ ಪ್ರೇಮದ ದೃಶ್ಯವೊಂದು ಪ್ರತಿಯೊಬ್ಬ ಭಾರತೀಯ ತನ್ನನ್ನು ತಾನು ಪ್ರಶ್ನಿಸುವಂತೆ ಮಾಡಿದೆ.
ಒಂದು ಚಿತ್ರ ಸಾವಿರ ಪದಗಳಿಗೆ ಸಮವಾದುದ್ದು ಎಂಬ ಮಾತನ್ನು ಈ ಚಿತ್ರ ಅಕ್ಷರಶಃ ನಿಜವಾಗಿಸಿದೆ.
ದೇಶಾಭಿಮಾನಿಯ ದೇಶಾಭಿಮಾನದ ಚಿತ್ರವೊಂದು ವಿದ್ಯಾವಂತ ಸಮಾಜವನ್ನು, ಶ್ರೀಮಂತ ವಗ೯ ವನ್ನು, ವ್ಯಂಗ್ಯವಾಗಿ ಪ್ರಶ್ನಿಸುತ್ತಿದೆ. ಈ ತಿರುಕನ ಹೃದಯ ಶ್ರೀಮಂತಿಕೆಗೆ ನಿಜವಾಗ್ಲೂ ಹ್ಯಾಟ್ಸಾಪ್ ಹೇಳಲೇಬೇಕು. ಹೌದು ಕೊಳಕಾಗಿರೋದು ಇವನ ಬಾಹ್ಯ ಸೌಂದರ್ಯ ಮಾತ್ರ. ಆಂತರಿಕ ಸೌಂದರ್ಯದಲ್ಲಿ ಈತನಿಗಾರು ಸರಿಸಾಟಿ.!