Monday, November 25, 2024
ಸುದ್ದಿ

ಮುಸ್ಲಿಂ ಯುವಕನ ಸಹಾಯದಿಂದ ಕೆಲಸಕ್ಕೆಂದು ವಿದೇಶಕ್ಕೆ ತೆರಳಿದ ಮಹಿಳೆಗೆ ಕಾದಿತ್ತು ಶಾಕ್..! : ನನ್ನನ್ನು ಭಾರತಕ್ಕೆ ಕರೆಸಿಕೊಳ್ಳಿ ಎಂದು ಕಣ್ಣೀರಿಟ್ಟ ಕೊಡಗಿನ ಪಾರ್ವತಿ –ಕಹಳೆ ನ್ಯೂಸ್

ಕೊಡಗು: ಮುಸ್ಲಿಂ ಯುವಕರ ಸಹಾಯದಿಂದ ಕೆಲಸಕ್ಕೆಂದು ವಿದೇಶಕ್ಕೆ ತೆರಳಿದ ಮಹಿಳೆ ಸಂಕಷ್ಟಕ್ಕೆ ಸಿಲುಕಿ, ರಕ್ಷಣೆಗೆ ಮೊರೆ ಇಟ್ಟಿರುವ ಘಟನೆ ನಡೆದಿದೆ. ಕೊಡಗು ಮೂಲದ ಪಾರ್ವತಿ (32) ಸಂಕಷ್ಟಕ್ಕೆ ಸಿಲುಕಿರುವ ಮಹಿಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೊಡಗಿನ ಕುಶಾಲನಗರ ತಾಲೂಕು ನೆಲ್ಲಿಹುದಿಕೇರಿ ಗ್ರಾಮದ ಕರಡಿಗೋಡು ನಿವಾಸಿ ಪಾರ್ವತಿ, ತಮಿಳುನಾಡು ಮೂಲದ ಏಜೆಂಟ್ ಹನೀಫ್ ಜೊತೆ ವಿದೇಶದಲ್ಲಿ ಕೆಲಸ ಕೊಡಿಸುವಂತೆ ತಿಳಿಸಿದ್ದಳು. ಅದರಂತೆ ತಮಿಳುನಾಡಿನ ಹನೀಫ್ ಶ್ರೀಲಂಕಾದ ಏಜೆಂಟ್ ಸಮೀರ್ ಎಂಬಾತನ ಸಹಾಯದಿಂದ ಆಕೆಯನ್ನು ಕುವೈತ್‌ಗೆ ಕಳುಹಿಸಿದ್ದು, ವಿದೇಶದಲ್ಲಿರುವ ಭಾರತೀಯರ ಮನೆಯಲ್ಲಿ ಕೆಲಸ ಕೊಡಿಸುವುದಾಗಿ ಪಾರ್ವತಿಗೆ ಹೇಳಿದ್ದನಂತೆ.

ಕಳೆದ ಸೆಪ್ಟೆಂಬರ್ 3ರಂದು ಪಾರ್ವತಿ ಕುವೈತ್‌ಗೆ ಹೋಗಿದ್ದು, ಕುವೈತ್‌ಗೆ ಹೋಗ್ತಿದ್ದಂತೆ ಅಲ್ಲಿ ದೊಡ್ಡ ಶಾಕ್ ಕಾದಿತ್ತು. ಪಾರ್ವತಿ ಕೆಲಸಕ್ಕೆ ಸೇರಿದ ಮನೆ ಮಾಲೀಕರು ಆಕೆಗೆ ಚಿತ್ರ ಹಿಂಸೆ ನೀಡುತ್ತಿದ್ದಾರಂತೆ. ಊಟ, ತಿಂಡಿ ನೀಡದೇ ಟಾರ್ಚರ್ ಕೊಡುತ್ತಿದ್ದಾರೆ. ಮಾತ್ರವಲ್ಲ ಆಕೆಯ ಪಾಸ್‌ಪೋರ್ಟ್, ಇತರೆ ದಾಖಲೆಗಳನ್ನೂ ವಶಕ್ಕೆ ಪಡೆದುಕೊಂಡಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ.

ಏಜೆಂಟ್ ಪಡೆದಿರುವ 3 ಲಕ್ಷ ಹಣವನ್ನು ನೀಡಿದರೆ ಮಾತ್ರ ನಿನ್ನ ಪಾಸ್ ಪೋರ್ಟ್ ಹಾಗೂ ವೀಸಾ ನೀಡ್ತೇನೆ ಎಂದು ಮನೆ ಮಾಲೀಕ ಹೇಳಿದ್ದಾನಂತೆ. ಇದಕ್ಕೆ ಕಂಗಾಲಾಗಿರುವ ಪಾರ್ವತಿ ಸಹಾಯ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ದಾಳೆ.

ವಾಟ್ಸ್ಆ್ಯಪ್ ಕಾಲ್ ಮೂಲಕ ಮನವಿ ಮಾಡಿಕೊಂಡಿರುವ ಪಾರ್ವತಿ, ನನ್ನನ್ನು ಭಾರತಕ್ಕೆ ಕರೆಸಿಕೊಳ್ಳಿ ಎಂದು ಕಣ್ಣೀರು ಇಟ್ಟಿದ್ದಾಳೆ. ಪಾರ್ವತಿಯ ಸಹಾಯಕ್ಕೆ ಕೊಡಗು ಜಿಲ್ಲಾಡಳಿತ ಮುಂದಾಗಿದೆ. ಭಾರತೀಯ ರಾಯಭಾರಿ ಕಚೇರಿಗೆ ಸಂಪರ್ಕಿಸಿ ಪಾರ್ವತಿಯ ಸ್ಥಿತಿಗತಿಯ ಬಗ್ಗೆ ಅಧಿಕಾರಿಗಳು ವಿಚಾರಿಸುತ್ತಿದ್ದಾರೆ.