Saturday, January 25, 2025
ಸುದ್ದಿ

‘ನನ್ನ ಹೆಂಡತಿ ನಾಪತ್ತೆ’..! ‘ನನ್ನ ಗಂಡ ನಾಪತ್ತೆ’..! : ಒಂದೇ ಕಟ್ಟಡದ ಎರಡು ಕುಟುಂಬಗಳ ನಾಪತ್ತೆ ಕೇಸ್ : ರಿಯಲ್ ಸ್ಟೋರಿ ಏನು..? – ಕಹಳೆ ನ್ಯೂಸ್

ಅಪರೂಪದ ನಾಪತ್ತೆ ಪ್ರಕರಣವು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಒಂದೇ ಕಟ್ಟಡದಲ್ಲಿ ವಾಸವಿರುವ ಎರಡು ಕುಟುಂಬದ ಇಬ್ಬರು ವ್ಯಕ್ತಿಗಳು ನಾಪತ್ತೆ ಆಗಿದ್ದಾರೆ. ಕೆಳಮನೆಯಲ್ಲಿ ವಾಸವಿದ್ದ ಗಂಡ ‘ನನ್ನ ಹೆಂಡತಿ ಕಾಣ್ತಿಲ್ಲ’ ಎಂದು ಹಾಗೂ ಎರಡನೇ ಮಹಡಿಯಲ್ಲಿ ವಾಸವಿರುವ ಹೆಂಡತಿ, ‘ನನ್ನ ಗಂಡ ಕಾಣ್ತಿಲ್ಲ’ ಎಂದು ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ್ದಾರೆ..

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನವೀದ್ ಮತ್ತು ಝೀನತ್ ಜೋಡಿ ಕಳೆದ 12 ವರ್ಷಗಳ ಹಿಂದೆಯೇ ಮದುವೆಯಾಗಿ ಸಂಸಾರ ಹೂಡಿದ್ದರು. ಈ ಜೋಡಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಎರಡನೇ ಮಹಡಿಯಲ್ಲಿ ಈ ಜೋಡಿ ವಾಸವಿದ್ದು, ಇದೀಗ ನವೀದ್ ಕಾಣುತ್ತಿಲ್ಲ ಎಂದು ಝೀನತ್ ಆರೋಪಿಸಿದ್ದಾಳೆ..

ಇನ್ನು ಮುಬಾರಕ್ ಮತ್ತು ಶಾಜಿಯಾ ದಂಪತಿ ದಂಪತಿ ಕೆಳಮನೆಯಲ್ಲಿ ವಾಸವಿದ್ದರು. ಕಳೆದ 8 ವರ್ಷಗಳ ಹಿಂದೆ ಮದುವೆ ಆಗಿದ್ದ ಈ ಜೋಡಿಗೂ ಇಬ್ಬರು ಮಕ್ಕಳಿದ್ದಾರೆ.. ಮನೆಯಲ್ಲಿದ್ದ ಹೆಂಡತಿ ಶಾಜಿಯಾ ಕಾಣೆಯಾಗಿದ್ದಾಳೆ ಎಂದು ಮುಬಾರಕ್ ಆರೋಪಿಸಿದ್ದಾನೆ.

ನವೀದ್ ಹಾಗೂ ಶಾಜಿಯಾ ಇಬ್ಬರು ಒಟ್ಟಿಗೆ ಓಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಮುಬಾರಕ್ ಪತ್ನಿ ಶಾಜಿಯಾ ಜೊತೆಗೆ ನವೀದ್‌ಗೆ ಅಕ್ರಮ ಸಂಬAಧ ಇರುವ ಆರೋಪ ಕೇಳಿಬಂದಿದೆ. ಇವರಿಬ್ಬರು ಡಿಸೆಂಬರ್ 9, 2022ರಿಂದ ಕಾಣೆಯಾಗಿದ್ದಾರೆ ಎನ್ನಲಾಗಿದೆ. ಮನೆಯಿಂದ ಹೊರಹೋದವರು ವಾಪಸ್ ಬರಲೇ ಇಲ್ಲ. ಇಬ್ಬರು ಒಟ್ಟಿಗೆ ಹೋಗಿದ್ದಾರೆಂದು ಝೀನತ್ ಮತ್ತು ಮುಬಾರಕ್ ಆರೋಪಿಸಿದ್ದಾರೆ.

ಆರೋಪ ಮಾಡಿರುವ ಮುಬಾರಕ್ ಹಾಗೂ ಝೀನತ್, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ. ದೂರು ನೀಡಿ ಒಂದು ತಿಂಗಳು ಕಳೆದರೂ ಪೊಲೀಸರ ಕ್ರಮತೆಗೆದುಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.