ಚಲಿಸುತ್ತಿದ್ದ ಕಾರಿನಲ್ಲಿ ಸೀಟ್ಬೆಲ್ಟ್ ಹಾಕದ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ಗೆ ದಂಡ ವಿಧಿಸಿದ ಪೊಲೀಸರು – ಕಹಳೆ ನ್ಯೂಸ್
ಲಂಡನ್: ಸಾಮಾಜಿಕ ಮಾಧ್ಯಮದ ವೀಡಿಯೋವನ್ನು ಚಿತ್ರೀಕರಿಸುತ್ತಿದ್ದ ಸಂದರ್ಭ ಚಲಿಸುತ್ತಿದ್ದ ಕಾರಿನಲ್ಲಿ ಸೀಟ್ಬೆಲ್ಟ್ ಧರಿಸದಿದ್ದಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ಗೆ ದಂಡ ವಿಧಿಸಲಾಗಿದೆ.
ಚಲಿಸುತ್ತಿದ್ದ ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದಿದ್ದಕ್ಕೆ ರಿಷಿ ಸುನಾಕ್ ಅವರಿಗೆ 100 ಪೌಂಡ್ (ಸುಮಾರು 10 ಸಾವಿರ ರೂ.) ದಂಡವನ್ನು ವಿಧಿಸಲಾಗಿದೆ ಎಂದು ಲಂಕಾಶೈರ್ ಪೊಲೀಸರು ತಿಳಿಸಿದ್ದಾರೆ.
ಸುನಾಕ್ ಇಂಗ್ಲೆಂಡ್ನ ವಾಯುವ್ಯ ಭಾಗದಲ್ಲಿ ಪ್ರಯಾಣ ಮಾಡುತ್ತಿದ್ದಾಗ ವೀಡಿಯೋವೊಂದನ್ನು ಚಿತ್ರೀಕರಿಸಲು ಸೀಟ್ಬೆಲ್ಟ್ ಅನ್ನು ತೆಗೆದಿದ್ದಾರೆ. ತಮ್ಮ ತಪ್ಪಿಗೆ ಅವರು ಬಳಿಕ ಕ್ಷಮೆಯನ್ನೂ ಯಾಚಿಸಿದ್ದಾರೆ. ಅವರು ಎಲ್ಲರಿಗೂ ಸೀಟ್ಬೆಲ್ಟ್ ಹಾಕಬೇಕು ಎಂಬುದನ್ನೇ ಹೇಳುತ್ತಾರೆ ಎಂದು ಸುನಾಕ್ ಅವರ ವಕ್ತಾರರು ತಿಳಿಸಿದ್ದಾರೆ.