Thursday, January 23, 2025
ದಕ್ಷಿಣ ಕನ್ನಡಬಂಟ್ವಾಳರಾಜಕೀಯಸುದ್ದಿ

ಪಾಂಡವರ ಕಲ್ಲಿನಲ್ಲಿ 8ನೇ ದಿನದ ಬಂಟ್ವಾಳ ಶಾಸಕರ ಪಾದಯಾತ್ರೆಯ ಸಮಾರೋಪ ಸಮಾರಂಭ : ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭಾಗಿ –ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ : ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದ ಬಂಟ್ವಾಳ ಬಿಜೆಪಿ ವತಿಯಿಂದ ನಡೆಯುವ ” ಗ್ರಾಮವಿಕಾಸ ಯಾತ್ರೆ ” “ಗ್ರಾಮದೆಡೆಗೆ ಶಾಸಕರ ನಡಿಗೆ” ಪಾದಯಾತ್ರೆಯ, 8 ನೇ ದಿನದ ಪಾದಯಾತ್ರೆಯ ಸಭಾ ಕಾರ್ಯಕ್ರಮ ನಿನ್ನೆ ಪಾಂಡವರ ಕಲ್ಲುವಿನಲ್ಲಿ ನಡೆದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಕಳೆದ 70 ವರ್ಷಗಳಲ್ಲಿ ಕಾಂಗ್ರೇಸ್ ಮಾಡಲಿಕ್ಕಾಗದ ಸಾಧನೆಯನ್ನು ಬಿಜೆಪಿ ಕೆಲವೇ ವರ್ಷಗಳಲ್ಲಿ ಮಾಡಿ ತೋರಿಸಿದೆ, ರಾಜ್ಯದಲ್ಲಿ ಕಷ್ಟದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಮುಂದಿನ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕಿದೆ ಎಂದು ಹೇಳಿದ್ದಾರೆ.
ಅಯೋಧ್ಯೆ ಪರವಾಗಿ ಯಾವುದೇ ವರದಿಯನ್ನು ಕಾಂಗ್ರೆಸ್ ನ್ಯಾಯಾಲಯಕ್ಕೆ ನೀಡಿಲ್ಲ. ಆದರೆ ನ್ಯಾಯಾಲಯಲ್ಲಿದ್ದ ಸಮಸ್ಯೆ ಇತ್ಯರ್ಥಗೊಂಡು ಒಂದು ರಕ್ತ ಬಿಂದು ರಕ್ತಪಾತವಾಗದೆ ರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದರು. ಕಾಶ್ಮೀರವನ್ನು ಭಾರತದ ಜೊತೆ ಜೋಡಿಸುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಭಾರತ ಬಾಂಗ್ಲಾ ಗಡಿಯನ್ನು ಗುರುತಿಸಿ ಅಕ್ರಮ ವಲಸಿಗರನ್ನು ವಾಪಸ್ಸು ಕಳುಹಿಸಿದೆ. ಮೋದಿ ಹೇಳಿದ್ದೆಲ್ಲವನ್ನು ಮಾಡಿದ್ದಾರೆ. ನಮ್ಮ ದೇಶದಲ್ಲಿ 10 ದಿನಕ್ಕೆ ಬೇಕಾದಷ್ಟು ಮಾತ್ರ ಶಸ್ತ್ರಾಸ್ತ್ರ ಹೊಂದಿತ್ತು. ಆತ್ಮ ನಿರ್ಭರತೆ ನಮ್ಮಲ್ಲಿರಲಿಲ್ಲ. ಆದರೆ ದೇಶದ ಯೋಧರಿಗೆ ಶಕ್ತಿ ತುಂಬುವ ಕೆಲಸವನ್ನು ಕೇಂದ್ರ ಸರಕಾರ ನಿರಂತರವಾಗಿಮಾಡಿದೆ ಎಂದ ಅವರು, ದೇಶದ ಭದ್ರತೆ ವಿವಾದದಲ್ಲಿ ಕಾಂಗ್ರೇಸ್ ನ ಚಿಂತನೆಗಳು ಭಯೋತ್ಪಾದಕರಿಗೆ ಪ್ರೇರಣೆ ನೀಡಿದೆ ಎಂದು ಟೀಕಿಸಿದರು.

ಚುನಾವಣೆ ಎಂಬ ಯುದ್ಧಕ್ಕೆ ಮೂರು ತಿಂಗಳು ಬಾಕಿ ಇದಕ್ಕಾಗಿ ಕಾರ್ಯಕರ್ತರು ಸೈನಿಕರಂತೆ ಇಂದಿನಿಂದಲೇ ತೊಡಗಿಸಿಕೊಳ್ಳಬೇಕು ಎಂದವರು ಕರೆ ನೀಡಿದರು. ಬಿಜೆಪಿ ರಾಜಕೀಯ ಆಧಾರದಲ್ಲಿ ಯೋಜನೆ ಮಾಡಿಲ್ಲ, ಆಯುಷ್ಮಾನ್, ಕಿಸಾನ್ ಸಮ್ಮಾನ್, ಭಾಗ್ಯಲಕ್ಷ್ಮೀ ಮೊದಲಾದ ಯೋಜನೆಗಳನ್ನು ಜಾರಿಗೆ ತಂದ ಬಿಜೆಪಿ ಎಲ್ಲಾ ಜಾತಿಮತಕ್ಕೂ ಸಮಾನ ನ್ಯಾಯ ಒದಗಿಸಿದೆ, ಆದರೆ ಸಿದ್ಧರಾಮ ಶಾದಿ ಭಾಗ್ಯದಂತಾ ಕೋಮು ಪ್ರಚೋದಿತ ಯೋಜನೆಗಳನ್ನು ಮಾತ್ರ ಜಾರಿಗೆ ತಂದಿದ್ದಾರೆ, ಬಿಜೆಪಿ ಚಿಂತನೆಯಲ್ಲಿ ದೇಶದ ಅಭಿವೃದ್ಧಿಯ ಸಂಕಲ್ಪ ಇದೆ, ಕಾಂಗ್ರೇಸ್ಸಿಗೆ ಅಭಿವೃದ್ಧಿಯ ಕಲ್ಪನೆಯೇ ಇಲ್ಲ ಎಂದು ಆರೋಪಿಸಿದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಎರಡು ಸಾವಿರ ಕೋಟಿಗೂ ಮಿಕ್ಕಿದ ಅನುದಾನಗಳನ್ನು ಕ್ಷೇತ್ರಕ್ಕೆ ತರುವ ಮೂಲಕ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೊಸ ಇತಿಹಾಸ ನಿರ್ಮಿಸಿದ್ದಾರೆ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಕೃಷಿ ಹೀಗೆ ಎಲ್ಲಾ ಕ್ಷೇತ್ರಗಳ ಸುಧಾರಣೆಗೆ ಪೂರಕವಾಗಿ ಶಾಸಕ ರಾಜೇಶ್ ನಾಯ್ಕ್ ಶ್ರಮಿಸಿದ್ದಾರೆ ಮುಂದಿನ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿAದ ಇವರನ್ನು ಗೆಲ್ಲಿಸಬೇಕು ಎಂದರು.

ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಕ್ಷೇತ್ರದ ಜನತೆಯ ಪ್ರೀತಿ ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ, ಪಾದಯಾತ್ರೆಯಲ್ಲಿ ಸೇರಿಕೊಳ್ಳುವ ಹಿರೊಯರು, ಕಿರಿಯರು ನನ್ನ ಉತ್ಸಾಹ ಹೆಚ್ಚಿಸಿದ್ದಾರೆ ಎಂದರು.

ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಒಳಚರಂಡಿ ಹಾಗೂ ಕುಡಿಯುವ ನೀರು ನಿಗಮದ ನಿರ್ದೇಶಕಿ ಸುಲೋಚನಾ ಭಟ್, ಗ್ರಾಮವಿಕಾಸ ಯಾತ್ರೆಯ ಸಂಚಾಲಕ ದೇವದಾಸ್ ಶೆಟ್ಟಿ, ಸಹ ಸಂಚಾಲಕ ಸುದರ್ಶನ ಬಜ,ಜಿ.ಪಂ.ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರ, ನಾವೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಚಿದಾನಂದ ರೈ ಕಕ್ಯ, ಉಳಿ ಗ್ರಾ.ಪಂ.ಅಧ್ಯಕ್ಷ ಸುರೇಶ್ ಮೈರ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.