ಕೊಡಗು ಜಿಲ್ಲೆಯಲ್ಲಿ ಅವಾಂತರ ಸೃಷ್ಟಿ ಮಾಡಿದ ವರುಣ ; ಪ್ರವಾಹ ಪರಿಸ್ಥಿತಿ, ಜನಜೀವನ ಸಂಪೂರ್ಣ ತತ್ತರ – ಕಹಳೆ ನ್ಯೂಸ್
ಕೊಡುಗು : ಕಳೆದ ಒಂದುವಾರದಿಂದ ಸುರಿಯುತ್ತಿರುವ ಮಹಾ ಮಳೆಗೆ ಕೊಡುಗು ಜಿಲ್ಲೆ ಜನಜೀವನ ಸಂಪೂರ್ಣ ತತ್ತರಿಸಿ ಹೋಗಿದೆ. ಜಿಲ್ಲೆಯ ಹಲವೆಡೆ ರಸ್ತೆಗಳಲ್ಲಿ ಭೂಕುಸಿತ ಉಂಟಾಗುತ್ತಿದ್ದು, ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಹಲವು ರಸ್ತೆಗಳಲ್ಲಿ ಸಂಚಾರ ಸ್ತಬ್ಧವಾಗಿದೆ. ನಿರಂತರ ಮಳೆಯಿಂದಾಗಿ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ಭಾಗಮಂಡಲ ಸೇರಿದಂತೆ ವಿವಿಧ ಗ್ರಾಮಗಳು ಜಲಾವೃತವಾಗಿದೆ. ಇನ್ನು ಹಾರಂಗಿ ವ್ಯಾಪ್ತಿಯಲ್ಲಿ ಜಾಸ್ತಿ ಪ್ರಮಾಣದಲ್ಲಿ ಮಳೆ ಬೀಳುತ್ತಿರುವ ಪರಿಣಾಮ,ಹಾರಂಗಿ ಜಲಾಶಯದಲ್ಲಿನ ಒಳಹರಿವು ನೀರಿನ ಪ್ರಮಾಣ ಹೆಚ್ಚಾಗಿದ್ದು ಕಟ್ಟೆಯ ಭದ್ರತೆಯ ದೃಷ್ಟಿಯಿಂದ 80000 ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. ಇದರಿಂದ ಕುಶಾಲನಗರ, ಕೂಡಿಗೆ,ಮುಳ್ಳುಸೋಗೆ,ಕುವೆಂಪು ಬಡಾವಣೆ ಸೇರಿದಂತೆ ಹಲವೆಡೆ ಕಟ್ಟಡಗಳಿಗೆ ಮತ್ತು ವಾಸದ ಮನೆಗಳಿಗೆ ಕೂಡ ನೀರು ನುಗ್ಗಿದ್ದು ನೀರು ನುಗ್ಗಿದ್ದು ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸಲಾಗಿದೆ.ಇನ್ನು ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ, ಸೋಮವಾರಪೇಟೆ ಶಕಲೇಶಪುರ ಹೆದ್ದಾರಿ, ಮಡಿಕೇರಿ ವಿರಾಜಪೇಟೆ ರಸ್ತೆ ,ಕೂಡಿಗೆ- ಕುಶಾಲನಗರ ರಸ್ತೆ ಸೇರಿದಂತೆ ಹಲವು ರಸ್ತೆಗಳ ಸೇತುವೆಗಳ ಮೇಲಿನ ವರೆಗೂ ನೀರು ಬಂದಿದ್ದು ನೀರಿನ ರಭಸಕ್ಕೆ ಸೇತುವೆಯ ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಕೆಲವು ಕಡೆ ರಸ್ತೆ ಭೂಕುಸಿತ, ಗುಡ್ಡಕುಸಿತಗಳು ಸಂಭವಿಸಿ ಸಂಪರ್ಕ ಕಡಿತಗೊಂಡಿದೆ.
ಇನ್ನು ಕೆಲವು ಗ್ರಾಮಗಳು ಮಳೆರಾಯನ ಅರ್ಭಟದಿಂದ ಜಲಾವೃತವಾಗಿ ಜನರು ಸಿಲುಕಿ ಕೊಂಡು ನರಕ ಯಾತನೆ ಅನುಭವಿಸುವ ಪರಿಸ್ಥಿತಿ ಮಳೆರಾಯ ನಿರ್ಮಾಣ ಮಾಡಿದ್ದಾನೆ,ಪ್ರವಾಹದಲ್ಲಿ ಸಿಲುಕಿ ಕೊಂಡು ಅಪಾಯದಲ್ಲಿರುವ ಜನರ ರಕ್ಷಣೆಗಾಗಿ ಈಗಾಗ್ಲೇ ಎಲ್ಲ ಕಡೆಗಳಲ್ಲಿ ಎಂಡಿಆರ್ಎಫ್ ತಂಡ,ಅಗ್ನಿಶಾಮಕ ದಳ ಸಿಬ್ಬಂದಿಗಳು,ಮಡಿಕೇರಿ ನಗರ ರಾಷ್ಟ್ರೀಯ ಸ್ವಯಂ ತುರ್ತು ಸೇವಾ ತಂಡ ಕೆಲಸ ಮುಂದುವರಿಸಿದ್ದಾರೆ.ಇನ್ನು ಜಿಲ್ಲೆಯಾದ್ಯಂತ ಮಳೆ ಮುಂದುವರಿಯುತ್ತಿದ್ದು ಎಮ್ಮೆತ್ತಾಳು, ಮೇಘತ್ತಾಳು,ತಂತಿಪಾಲ, ಹಟ್ಟಿಹೊಳೆ,ಗಾಳಿಬೀಡು, ಅಬ್ಬಿ ಪಾಲ್ಸ್ ಗ್ರಾಮಗಳಲ್ಲಿ ಪ್ರವಾಹಕ್ಕೆ ಹಾಗೂ ಮಣ್ಣಿನ ಗುಡ್ಡ ಬಿದ್ದು ಜನ ಸಿಲುಕಿಕೊಂಡಿದ್ದು ಜನರ ರಕ್ಷಣೆಗೆ ಜಿಲ್ಲಾಡಳಿತ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದು ಕೊಡಗಿನ ಜನರ ರಕ್ಷಣೆಗೆ ಸೇನ ಹೆಲಿಕಾಪ್ಟರ್ ಸಹಾಯ ಮಾಡುವಂತೆ ಜಿಲ್ಲಾಡಳಿತ ಮನವಿ ಮಾಡಿದ್ದು ಜಿಲ್ಲಾಡಳಿತ ಮನವಿ ಸ್ಪಂದಿಸಿ ಮಂಗಳೂರಿನಿಂದ ಎರಡು NDRF ಸೇನಾ ಹೆಲಿಕಾಪ್ಟರ್ ಕೊಡಗು ಜಿಲ್ಲೆಗೆ ಆಗಮಿಸಲಿದೆ.
ಇನ್ನು ಮಡಿಕೇರಿಯ ಮುತ್ತಪ್ಪ ದೇವಾಲಯದ ಬಳಿ ಮಳೆಗೆ ಮಣ್ಣು ಜರಿದು ಎರಡು ಅಂತಸ್ತಿನ ಮನೆ ಕುಸಿದು ಬಿದ್ದಿದೆ ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದ್ದರಿಂದ ಬಾರಿ ಅನಾಹುತ ತಪ್ಪಿದೆ, ಮತ್ತೊಂದೆಡೆ ಮಡಿಕೇರಿ ಸಮೀಪದ ಕಾಟಿಗೇರಿ ಗ್ರಾಮದ ಬಳಿ ಹೋಂ ಸ್ಟೇ ಮೇಲೆ ಬರೆ ಕುಸಿದು ಮೂರು ಜನ ಮಣ್ಣಿನ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿ ಮತ್ತೊಬ್ಬನ ಪರಿಸ್ಥಿತಿ ಚಿಂತಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆ ದಾಖಲು ಮಾಡಲಾಗಿದೆ.ಒಟ್ಟಾರೆಯಾಗಿ ಮಳೆ ಇದೆ ರೀತಿಯಲ್ಲಿ ಮುಂದುವರಿದರೆ ಕೊಡಗಿ ಜನತೆ ಜನಜೀವನ ಪರಿಸ್ಥಿತಿ ದೇವರೆ ಬಲ್ಲ.
ವರದಿ :ಲೋಕೇಶ್ ಗುಡ್ದೆಮನೆ