Thursday, January 23, 2025
ಸುದ್ದಿ

 300ಕ್ಕೂ ಅಧಿಕ ಚಿತ್ರಗಳಲ್ಲಿ ವಿಲನ್ ಆಗಿ ಮೆರೆದಿದ್ದ ‘ಸಾಂಗ್ಲಿಯಾನ’ ಖ್ಯಾತಿಯ ಲಕ್ಷ್ಮಣ್ ಇನ್ನಿಲ್ಲ – ಕಹಳೆ ನ್ಯೂಸ್

ಬೆಂಗಳೂರು: 300ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದ ನಟ ಲಕ್ಷ್ಮಣ್ ಇನ್ನಿಲ್ಲ. ಹೃದಯಾಘಾತದಿಂದ ಅವರು ನಿಧನಹೊಂದಿದ್ದಾರೆ. ಎದೆ ನೋವು ಕಾಣಿಸಿಕೊಂಡ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಶೆ ಫಲಕಾರಿಯಾಗದೆ ಲಕ್ಷ್ಮಣ್ ನಿಧನ ಹೊಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಲ್ಲ, ಯಜಮಾನ, ಸೂರ್ಯ ವಂಶ, ಅಂತ ಸೇರಿದಂತೆ ಹೀಗೆ ಹಲವು ಜನಪ್ರಿಯ ಚಿತ್ರಗಳಲ್ಲಿ ಲಕ್ಷ್ಮಣ್ ಅಭಿನಯಿಸಿದ್ದಾರೆ. ರಂಗ ಕಲಾವಿದರಾಗಿ ಗುರುತಿಸಿಕೊಂಡಿರುವ ಲಕ್ಷ್ಣಣ್ ಅವರು ರಾಜ್ಯದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.

ಬೆಂಗಳೂರಿನ ಮೂಡಲ ಪಾಳ್ಯದಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.