Monday, November 25, 2024
ಸುದ್ದಿ

ಮಂಗಳೂರು: ಸಣ್ಣ ವಿಚಾರಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ – ಕಹಳೆ ನ್ಯೂಸ್

ಮಂಗಳೂರು: ಸಣ್ಣ ವಿಚಾರಕ್ಕೆ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

26 ವರ್ಷದ ದಿವ್ಯಾ ಶ್ರೀ ಎಂಬಾಕೆ ನೇಣಿಕೆ ಶರಣಾದ ದುರ್ದೈವಿ. ಹರೀಶ್ ಎಂಬುವವರನ್ನು ಪ್ರೀತಿಸುತ್ತಿದ್ದ ಈಕೆ ಅವರೊಂದಿಗೆ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ವೈವಾಹಿಕ ಜೀವನ ಉತ್ತಮವಾಗಿದ್ದರೂ ಸಹ ಕ್ಷುಲ್ಲಕ ವಿಚಾರಕ್ಕೆ ಮನನೊಂದು ಆತ್ಮಹತ್ಯೆಯ ಹಾದಿ ತುಳಿದಿದ್ದಾರೆ.

ನೆರೆಮನೆಯ ಕಾರ್ಯಕ್ರಮಕ್ಕೆ ದಂಪತಿ ತೆರಳಿದ್ದರು. ಈ ವೇಳೆ ಹಿಂದಿರುಗುವಾಗ ಜೊತೆಯಲ್ಲೇ ಹೋಗೋಣ ಎಂದು ಹೆಂಡತಿ ಒತ್ತಾಯಪಡಿಸಿದ್ರೂ ಗಂಡ ಕೇಳಲಿಲ್ಲ. ಹೀಗಾಗಿ ಒಬ್ಬಳೇ ಮನೆಗೆ ಬಂದಿದ್ದ ದಿವ್ಯಾಗೆ ಜೀವನದಲ್ಲಿ ಜಿಗುಪ್ಸೆಯುಂಟಾಗಿ ಭಾನುವಾರ ಸಂಜೆ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯ ಬೆಡ್ ರೂಂ ಕಿಟಕಿಗೆ ಚೂಡಿದಾರ್ ಶಾಲಿನ ತುದಿಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಮೃತ ದಿವ್ಯಾ ತಾಯಿ ಗಿರಿಜಾ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೃತಳ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ದಿವ್ಯಾ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಪತಿ ಹರೀಶ್ ಸುರತ್ಕಲ್ ನಲ್ಲಿ ಆಟೋರಿಕ್ಷಾ ಚಾಲಕರಾಗಿದ್ದಾರೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.