ಯುವಶಕ್ತಿ ಸೇವಾಪಥದ ಪ್ರಥಮ ವಾರ್ಷಿಕ ಸಂಭ್ರಮ : 20 ಅಶಕ್ತ ಕುಟುಂಬಗಳಿಗೆ ತಲಾ 25 ಸಾವಿರದಂತೆ 5 ಲಕ್ಷ ರೂ ಹಸ್ತಾಂತರ – ಕಹಳೆ ನ್ಯೂಸ್
ಪರೋಪಕಾರಾರ್ಥಂ ಇದಂ ಶರೀರಂ ಎಂಬ ತತ್ವವನ್ನಿರಿಸಿ ಸರ್ವವೂ ಸಮಾಜಕ್ಕರ್ಪಿತ ಎಂಬ0ತೆ ಯುವಶಕ್ತಿ ಸೇವಾಪಥದ ಪ್ರಥಮ ವಾರ್ಷಿಕ ಸಂಭ್ರಮ ಕಲ್ಲಡ್ಕ ಉಮಾಶಿವ ಕ್ಷೇತ್ರದಲ್ಲಿ ನೆರವೇರಿತು.
20 ಅಶಕ್ತ ಕುಟುಂಬಗಳಿಗೆ ತಲಾ 25 ಸಾವಿರದಂತೆ 5 ಲಕ್ಷ ರೂಗಳನ್ನು ಫಲಾನುಭವಿಗಳಿಗೆ ಗಣ್ಯರ ಸಮ್ಮುಖ ಹಸ್ತಾಂತರಿಸಲಾಯಿತು.
ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಶ್ರೀ ಅರ್ಜುನ್ ಭಂಡಾರ್ಕರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಸಭಾದ್ಯಕ್ಷತೆಯನ್ನು ಕಲ್ಲಡ್ಕ ಉಮಾಶಿವ ದೇವಳದ ಅಧ್ಯಕ್ಷರಾದ ಶ್ರೀ ಈಶ್ವರ ಭಟ್ ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಪ್ರಾಣಿಪ್ರಿಯೆ ಶ್ರೀಮತಿ ರಜನಿ ಶೆಟ್ಟಿ.ಹಿಂಜಾವೇ ಪ್ರಮುಖರಾದ ರಾಧಾಕೃಷ್ಣ ಅಡ್ಯಂತಾಯ,ಉದ್ಯಮಿ ವಿಜೇಶ್ ನಾಯ್ಕ್ ನಡಿಗುತ್ತು,ಮಾತೃಸಂಸ್ಥೆ ಯುವಶಕ್ತಿ ಕಡೇಶಿವಾಲಯದ ಅಧ್ಯಕ್ಷರಾದ ದೇವಿಪ್ರಸಾದ್ ಬೇಂಗದಡಿ,ಕಡೇಶಿವಾಲಯ ಗ್ರಾ.ಪಂ.ಅಧ್ಯಕ್ಷರಾದ ಸುರೇಶ್ ಬನಾರಿ,ಸೇವಾಪಥದ ಯೋಜನಾ ಸಮಿತಿಯ ಪ್ರಮುಖರಾದ ಬಾಲಕೃಷ್ಣ ಮುಡಿಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಭಾಷಣಕಾರರಾಗಿ ಪುತ್ತೂರಿನ ಯುವವಾಗ್ಮಿ ಶ್ರೀದೇವಿ ಕೆ.ಯುವಶಕ್ತಿಯ ಸೇವಾಕೈಂಕರ್ಯದ ಬಗ್ಗೆ ಮೆಚ್ಚುಗೆಯ ಜೊತೆಗೆ ಸಭೆಯನ್ನುದ್ದೇಶಿಸಿ ಸಮಯೋಚಿತ ವಿಚಾರಗಳನ್ನು ಮಂಡಿಸಿದರು. ಸೇವಾಜೀವಿಗಳಾದ ಅರ್ಜುನ್ ಭಂಡಾರ್ಕರ್ ಹಾಗೂ ರಜನಿ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಯುವಶಕ್ತಿ ಸೇವಾಪಥದ ಎಲ್ಲಾ ಮಿತ್ರಸಂಸ್ಥೆಗಳಿಗೆ ಗೌರವಾರ್ಪಣೆ ನೆರವೇರಿತು.
ಸದಸ್ಯರುಗಳಾದ ದಿನೇಶ್ ಪೂಜಾರಿ ಬಡೆಕೊಟ್ಟು ಪ್ರಾಸ್ತಾವಿಕ ಹಾಗೂ ಸ್ವಾಗತಗೈದು,ವಿಜಿತ್ ಶೆಟ್ಟಿ ಸಂಪೋಳಿ ವಾರ್ಷಿಕ ವರದಿವಾಚನಗೈದರು. ದುರ್ಗಾಪ್ರಸಾದ್ ಅಮೈ ವಂದಿಸಿದರು.ಆಕಾಶವಾಣಿ ನಿರೂಪಕಿ ಮಲ್ಲಿಕಾ ಅಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ತದನಂತರದಲ್ಲಿ ಯುವಶಕ್ತಿ ರಕ್ತನಿಧಿ ಹಾಗೂ ಸೇವಾಪಥ ಕಾರ್ಯಕರ್ತರ ಸಮಾಗಮ ಬೈಠಾಕ್ ಬಳಿಕ ಕಾರ್ಯಕ್ರಮ ಮುಕ್ತಾಯಗೊಂಡಿತು.