ಕುಂಜತ್ತಬೈಲ್ ಉತ್ತರ ವಾರ್ಡ್ ನಂಬ್ರ 13 ರಲ್ಲಿ 16.62 ಲಕ್ಷ ರೂ ಅನುದಾನದಲ್ಲಿ ನಿರ್ಮಾಣವಾಗಿರುವ ನೂತನ ಅಂಗನವಾಡಿ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದ ಶಾಸಕ ಡಾ. ಭರತ್ ಶೆಟ್ಟಿ – ಕಹಳೆ ನ್ಯೂಸ್
ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕುಂಜತ್ತಬೈಲ್ ಉತ್ತರ ವಾರ್ಡ್ ನಂಬ್ರ 13 ರಲ್ಲಿ 16.62 ಲಕ್ಷ ರೂ ಅನುದಾನದಲ್ಲಿ ನಿರ್ಮಾಣವಾಗಿರುವ ಸ್ನೇಹ ಬಳಗ ನೂತನ ಅಂಗನವಾಡಿ ಕೇಂದ್ರವನ್ನು ಶಾಸಕರಾದ ಡಾ. ಭರತ್ ಶೆಟ್ಟಿಯವರು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮೇಯರ್ ಜಯಾನಂದ ಅಂಚನ್, ಸ್ಥಳೀಯ ಕಾರ್ಪೊರೇಟರ್ ಶರತ್ ಕುಮಾರ್, ಕಾವೂರು ಲಯನ್ಸ್ ಕ್ಲಬ್ ಅಧ್ಯಕ್ಷ ಮೋರಸ್, ಮೇಲ್ವಿಚಾರಕಿ ಶ್ರೀಮತಿ ಸಾಕು, ಸ್ಥಳೀಯರಾದ ದಿವಾಕರ್ ಪಕ್ಕಳ, ಶಕ್ತಿ ಕೇಂದ್ರ ಪ್ರಮುಖ್ ಗಣೇಶ್ ಕುಲಾಲ್, ಬೂತ್ ಪ್ರಮುಖ್ ಸನತ್ ಶೆಟ್ಟಿ, ಚಂದ್ರಶೇಖರ್ ಸೇನವ, ಬಾಲ ವಿಕಾಸ ಸಮಿತಿ ಅಧ್ಯಕ್ಷರು, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕೀರ್ತಿ , ವಿದ್ಯಾರ್ಥಿ ಪೋಷಕರು ಸ್ಥಳೀಯರು ಉಪಸ್ಥಿತರಿದ್ದರು.