ಗಣಾರಾಜ್ಯೋತ್ಸವದ ಪ್ರಯುಕ್ತ ಪ್ರತಿಷ್ಟಿತ ಚಿನ್ನಭರಣ ಮಳಿಗೆ ಪುತ್ತೂರಿನ ಮುಳಿಯ ಜ್ಯುವೆಲ್ಸ್ ವಿನೂತನ ಕಾರ್ಯಕ್ರಮವೊಂದನ್ನು ಆಯೋಜಿಸ್ತಾ ಇದೆ. ‘ಮುಳಿಯ ರಾಷ್ಟç ಸಿಂಚನ’ ಆನ್‌ಲೈನ್ ನೃತ್ಯ ಸ್ಪರ್ಧೆಯನ್ನು ಜ.28ರಂದು ಮಧ್ಯಾಹ್ನ 2ಗಂಟೆಗೆ ಮತ್ತು 29ರಂದು ಬೆಳಗ್ಗೆ 10.30ಕ್ಕೆ ಆಯೋಜಿಸಿದೆ.
ಇನ್ನು ಈ ಸ್ಪರ್ಧೆಯನ್ನು ಸೋಲೋ ಮತ್ತು ಗ್ರೂಪ್ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗುತ್ತಿದ್ದು, ಸೋಲೋ ವಿಭಾಗದಲ್ಲಿ ಮೊದಲ 100 ಸ್ಪರ್ಧಿಗಳಿಗೆ ಅವಕಾಶವಿದೆ. ಈ ವಿಭಾಗದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು 12ರಿಂದ 21ವರ್ಷ ವಯೋಮಿತಿಯೊಳಗಿರಬೇಕು. 21ವರ್ಷಕ್ಕೆ ಮೇಲ್ಪಟ್ಟವರು ಸಾರ್ವಜನಿಕ ವಿಭಾಗದಲ್ಲಿ ಸ್ಪರ್ಧಿಸಬಹುದಾಗಿದೆ. ಹೆಸರು ನೋಂದಾಯಿಸಿಕೊಳ್ಳಲು ಇಂದು ಕೊನೆಯ ದಿನಾಂಕವಾಗಿದ್ದು, ಗ್ರೂಪ್ ವಿಭಾಗದಲ್ಲಿ ಸ್ಪರ್ಧಿಸುವವರು ಮೊದಲ 35 ಗುಂಪುಗಳಿಗೆ ಮಾತ್ರ ಅವಕಾಶವಿರುತ್ತದೆ.
ನಿಯಮಗಳು ಇಂತಿವೆ:
ದೇಶಭಕ್ತಿ ಗೀತೆಗೆ ಅಥವಾ ಚಲನಚಿತ್ರದ ದೇಶಭಕ್ತಿ ಗೀತೆಗೆ ನೃತ್ಯ ಮಾಡಬಹುದು.
- ಒಬ್ಬ ಸ್ಪರ್ಧಿಗೆ 2-3 ನಿಮಿಷ ಮಾತ್ರ ಅವಕಾಶವಿರುತ್ತದೆ. ಗುಂಪಿಗೆ 4-5 ನಿಮಿಷದ ಕಾಲಾವಕಾಶ ನೀಡಲಾಗುವುದು.
- ಸ್ಪರ್ಧೆಯು ಝೂಮ್ ವೇದಿಕೆಯ ಮೂಲಕ ನಡೆಯುತ್ತದೆ.
- ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಹೆಸರು ನೋಂದಾಯಿಸಿಕೊಳ್ಳಲು ಮತ್ತು ಹೆಚ್ಚಿನ ಮಾಹಿತಿಗಾಗಿ 9353030916 ಸಂಪರ್ಕಿಸಲು ಕೋರಲಾಗಿದೆ.
ಸ್ಪರ್ಧೆಯ ಮೊದಲನೆಯ ದಿನ ಸಾಕಷ್ಟು ಮುಂಚಿತವಾಗಿಯೇ, ಕರೆಯ ಮೂಲಕ ಸ್ಪರ್ಧಿಗಳು ತಮ್ಮ ಮಾಹಿತಿಯನ್ನು ಮತ್ತು ನಿಯಮಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.