Recent Posts

Saturday, September 21, 2024
ಸುದ್ದಿ

ಸಂಪಾಜೆ ಮಡಿಕೇರಿ ಮದ್ಯೆ ಭೀಕರ ದುರಂತ ; ಗುಡ್ಡ ಜರಿದು ಹಲವು ಮನೆಗಳಿಗೆ ಹಾನಿ – ಕಹಳೆ ನ್ಯೂಸ್

ಸುಳ್ಯ: ಸಂಪಾಜೆ – ಮಡಿಕೇರಿ ಮದ್ಯದ ಜೋಡುಪಾಲ ಎಂಬಲ್ಲಿ ಗುಡ್ದ ಕುಸಿಯುತ್ತಿರುವ ಪರಿಣಾಮವಾಗಿ ಹಲವು ಮನೆಗಳು ಮಣ್ಣಿನ ಅಡಿಯಲ್ಲಿ ಸಿಲುಕಿ ಕೊಂಡು ಮನೆಯಲ್ಲಿದ್ದವರು ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪೈಕಿ ಓರ್ವರ ಮೃತದೇಹ ಪತ್ತೆಯಾಗಿದೆ, ಓರ್ವ ಮಹಿಳೆ ಹಾಗು ನಾಲ್ವರು ಮಕ್ಕಳ ಪತ್ತೆ ಕಾರ್ಯ ಮುಂದುವರೆದಿದೆ, ನಿನ್ನೆಯಿಂದಲೆ ಜೋಡುಪಾಲದ ಜರಿಯುತ್ತಿದ್ದು ಅಲ್ಲಿರುವ ನಿವಾಸಿಗಳನ್ನು ಪಕ್ಕದಲ್ಲಿ ಇರುವ ಶಾಲೆಗೆ ಸ್ಥಳಾಂತರ ಮಾಡಲಾಯಿತು .ಇಂದು‌ ಮುಂಜಾನೆ ಗುಡ್ದ ಸಂಪೂರ್ಣ ಜರಿದು ಅಲ್ಲಿರುವ ೩ ಮನೆಗಳು ಸಂಪೂರ್ಣ ನಾಶವಾಯಿತು . ರಸ್ತೆಯಲ್ಲಿ ನೀರು ಹರಿದು ಬರುತ್ತಿದ್ದು ಸುಮಾರು ಕಿಲೊಮೀಟರ್ನಷ್ಟು ದೂರದಿಂದಲೆ ವಾಹನವಾಗಲಿ , ಜನರಾಗಲಿ ಹೋಗಲು ಸಾಧ್ಯವಿಲ್ಲದಂತಹ ವಾತಾವರಣ ನಿರ್ಮಾಣವಾಗಿತ್ತು . ಮಣ್ಣಿನ ಅಡಿಯಲ್ಲಿ ಸೀಲುಕಿದ್ದ ಬಸಪ್ಪ ಎಂಬವರ ಮೃತದೇಹ ಪತ್ತೆಯಾಗಿದ್ದು .ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಇನ್ನೂ ಪತ್ತೆಯಾಗಿಲ್ಲ .ಇಲ್ಲಿಯ ನೀವಸಿ ಹಮೀದ್ ಎಂಬವರ ಇಬ್ಬರು ಮಕ್ಕಳು ಕೂಡ ನಾಪತ್ತೆ ಅಗಿದ್ದು ಕಾರ್ಯಾಚರಣೆ ಮುಂದುವರೆದಿದೆ .ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ದಳ ಸ್ಥಳಕ್ಕೆ ಧಾವಿಸಿದ್ದು ಹಾಗೂ ಸುಳ್ಯ ಪೊಲಿಸ್ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು ಕಾರ್ಯಚರಣೆ ನಡೆಸುತ್ತಿದ್ದಾರೆ .

ಜಾಹೀರಾತು

ಈ ಮಧ್ಯೆ ಅಲ್ಲಿ ಶಾಲೆಯೊಳಗೆ ಸಿಲುಕಿಕೊಂಡಿದ್ದ ೬೦ ರಸ್ಟು ಜನರನ್ನು ಹಗ್ಗದ ಸಹಾಯದಿಂದ ಕರೆತಂದು ಅವರನ್ನು ಕಲ್ಲುಗುಂಡಿ ಶಾಲೆ ಹಾಗು ಅರಂತೋಡು ತೆಕ್ಕಿಲ್ ಶಾಲೆಗೆ ಸ್ಥಳಂತರಿಸಿರುವುದಾಗಿ ತಿಳಿದುಬಂದಿದೆ .ಇನ್ನೂ ನೂರಾರು ಮಂದಿ ಆ ಪ್ರದೇಶದಲ್ಲಿ ಸಿಲುಕಿಕೊಂಡಿದ್ದು ಅವರ ರಕ್ಷಣಾ ಕಾರ್ಯ ಮುಂದುವರೆದಿದೆ .ಈ ಪ್ರದೇಶದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು ಬೃಹತ್ ಬಂಡೆಗಳ ಸಹಿತ ನೀರು ಹರಿದು ಬರುತ್ತಿರುವ ಕಾರಣ ರಕ್ಷಣಾ ಕಾರ್ಯಕ್ಕೆ ಅಡ್ದಿಯಾಗಿದೆ.