Recent Posts

Monday, January 20, 2025
ಬೆಂಗಳೂರುರಾಜ್ಯಸಿನಿಮಾಸುದ್ದಿ

ಅವಳಿ ಮಕ್ಕಳೊಂದಿಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ ಅಮೂಲ್ಯ ಜಗದೀಶ್ – ಕಹಳೆ ನ್ಯೂಸ್

ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಅವರು ಅವಳಿ ಮಕ್ಕಳೊಂದಿಗೆ ರಾಜ್ಯದ ಜನತೆಗೆ 74ನೇ ವರ್ಷದ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

  ಅಮೂಲ್ಯ ಮತ್ತು ಇಬ್ಬರು ಮಕ್ಕಳು ವೈಟ್ ಡ್ರೆಸ್ ಹಾಕಿಕೊಂಡಿದ್ದಾರೆ. ಇಬ್ಬರನ್ನು ಕಾಲ ಮೇಲೆ ಕೂರಿಸಿಕೊಂಡು ಅಮೂಲ್ಯ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ.


ನಟಿ ಅಮೂಲ್ಯ ಅವರು ಜಗದೀಶ್ ಅವರನ್ನು ಮದುವೆ ಆದ ನಂತರ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ಈಗ ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ.


ನಟಿ ಅಮೂಲ್ಯ ಮತ್ತು ಜಗದೀಶ್ ಅವರು ತಮ್ಮ ಅವಳಿ ಗಂಡು ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರು ಇಟ್ಟಿದ್ದಾರೆ. ಅ ಅಕ್ಷರದಿಂದಲೇ ಹೆಸರಿಟ್ಟಿದ್ದಾರೆ.


ಇತ್ತಿಚೇಗೆ ಇಬ್ಬರು ಮಕ್ಕಳೊಂದಿಗೆ ಚಿಕ್ಕಬಳ್ಳಾಪುರದ ಘಾಟಿ ಸುಬ್ರಮಣ್ಯ ಸ್ವಾಮಿಯ ಆಶೀರ್ವಾದ ಪಡೆದಿದ್ದಾರೆ. ಮಕ್ಕಳಿಗೆ ಒಳ್ಳೆಯದಾಗಲಿ, ಆರೋಗ್ಯ ಕರುಣಿಸು ಎಂದು ಬೇಡಿಕೊಂಡಿದ್ದಾರೆ.


ಅಮೂಲ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ಮುದ್ದು ಮಕ್ಕಳ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.

ಅಮೂಲ್ಯ ಅವರು ಬಾಲ ನಟಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಗಣೇಶ್ ಅವರ ಚೆಲುವಿನ ಚಿತ್ತಾರ ಸಿನಿಮಾದ ಮೂಲಕ ಐಶು ಆಗಿ ಕರುನಾಡ ಜನರ ಮನಸ್ಸು ಗೆದ್ದಿದ್ದರು.


ಅಮೂಲ್ಯ ಅವರು ಮತ್ತೆ ಸಿನಿಮಾದಲ್ಲಿ ನಟಿಸಲ್ವಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಅಮೂಲ್ಯ ಅವರನ್ನು ತೆರೆ ಮೇಲೆ ನೋಡಲು ಕಾಯ್ತಾ ಇದ್ದಾರೆ.