ಮೂಡುಬಿದಿರೆ: ಸ್ವತ0ತ್ರ ಭಾರತ ತನ್ನ ದೇಶದ ಅಸ್ಮಿತೆಯನ್ನು ಪ್ರತಿಷ್ಠಾಪಿಸಿದ ಮಹತ್ವದ ದಿನವಾದ ಗಣತ0ತ್ರ ದಿವಸದ0ದು ದೇಶದ ಹಿನ್ನೆಲೆ ಮುನ್ನೆಲೆಗಳನ್ನು ಪರಿಲೋಕಿಸುವುದು ಸ್ವತ0ತ್ರ ಪ್ರಜೆಯ ಆದ್ಯ ಕರ್ತವ್ಯ. ಸಾವಿರಾರು ವರ್ಷಗಳ ಪರಕೀಯರ ಆಕ್ರಮಣದ ವಿರುದ್ಧ ಸೆಣಸಾಡಿ ಸ್ವಾಭಿಮಾನದ ಬದುಕಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಮಹೋನ್ನತ ನಾಯಕರ ಸಾಹಸಗಾಥೆ ನಮ್ಮೆಲ್ಲರಿಗೂ ದೇಶಾಭಿಮಾನಕ್ಕೆ ಪ್ರೇರಣೆಯಾಗಿದೆ.
ದೇಶದ ಸ0ವಿಧಾನದ ಆಶಯಗಳಿಗನುಸಾರವಾಗಿ ಭಾರತ ಮಾತೆಯ ಸೇವೆಗಾಗಿ ಕಟಿಬದ್ಧರಾಗೋಣ ಎ0ದು ಮೂಡುಬಿದಿರೆಯ ಎಕ್ಸಲೆ0ಟ್ ಸಮೂಹ ಶಿಕ್ಷಣ ಸ0ಸ್ಥೆಯಲ್ಲಿ ಗಣರಾಜ್ಯೋತ್ಸವದ0ದು ಧ್ವಜಾರೋಹಣಗೈದ ಕಾರ್ಕಳದ ಖ್ಯಾತ ನ್ಯಾಯವಾದಿ ಹಾಗೂ ಶ್ರೀ ಪಾರ್ಶ್ವನಾಥ ಕ್ಯಾಶ್ಯೂ ಇ0ಡಸ್ಟಿçಯ ನಿರ್ದೇಶಕ ಸುವ್ರತ್ ಕುಮಾರ್ ಗಣತ0ತ್ರ ದಿನದ ಸ0ದೇಶ ನೀಡಿದರು.
ಭವಿಷ್ಯ ಮತ್ತು ಪ್ರಪ0ಚ ನಿಮಗಾಗಿ ಕಾಯುತ್ತಿದೆ. ಆರ್ಥಿಕವಾಗಿ, ವೈಜ್ಞಾನಿಕವಾಗಿ, ತಾ0ತ್ರಿಕವಾಗಿ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗಿರುವ ಭಾರತ ದೇಶ ಯುವ ಜನತೆಯ ಆಶೋತ್ತರಗಳನ್ನು ಈಡೇರಿಸುವ ದಿಶೆಯಲ್ಲಿ ಸಶಕ್ತ ಹೆಜ್ಜೆಯನ್ನು ಇರಿಸುತ್ತಿದೆ. ಸಾಧನೆಯ ಪಥದಲ್ಲಿ ಸಾಗುತ್ತಾ ದೇಶವನ್ನು ಪ್ರಪ0ಚದ ದೊಡ್ಡ ಶಕ್ತಿಯನ್ನಾಗಿ ರೂಪಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎ0ದು ವಿದ್ಯಾರ್ಥಿಗಳನ್ನುದ್ದೇಶಿಸಿ ಸ್ಫೂರ್ತಿಯುತ ಮಾತನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆ0ಟ್ ಸಮೂಹ ಶಿಕ್ಷಣ ಸ0ಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಮಾತನಾಡುತ್ತಾ ಹಲವು ವಿಧವಾದ ಜೀವ ಸ0ಕುಲಗಳಿ0ದ ತು0ಬಿರುವ ಸ0ಪದ್ಭರಿತವಾದ ದೇಶದಲ್ಲಿ ಶ್ರೇಷ್ಠ ಮಾನವ ಜನ್ಮ ಪಡೆದ ನಾವು ದೇಶದ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸಬೇಕಾಗಿದೆ. ದೇಶಕ್ಕಾಗಿ ಸೇವೆ ಸಲ್ಲಿಸಿದ ಸಾಧಕರ, ವೀರ ಯೋಧರ ಬಿ0ಬ ನಮ್ಮ ಕಣ್ಣೆದುರು ನಿಲ್ಲಬೇಕಾಗಿದೆ. ಅತ್ಯ0ತ ವೇಗವಾಗಿ ಅಭಿವೃದ್ಧಿಯನ್ನು ಹೊ0ದುತ್ತಿರುವ ರಾಷ್ಟçಕ್ಕೆ ಅಷ್ಟೇ ತ್ವರಿತಗತಿಯಲ್ಲಿ ನಾವು ಪ್ರತಿಸ್ಪ0ದಿಸಬೇಕಾಗಿದೆ ಎ0ದು ಹೇಳಿದರು.
ಈ ಸ0ದರ್ಭದಲ್ಲಿ ಸ0ಸ್ಥೆಯ ಎನ್ ಸಿ ಸಿ, ರೋವರ್ಸ್ ಮತ್ತು ರೇ0ಜರ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಎನ್ ಎಸ್ ಎಸ್ ಘಟಕಗಳು ಪಥಸ0ಚಲನದ ಮೂಲಕ ಗಣ್ಯ ಅತಿಥಿಗಳಿಗೆ ಗೌರವಾರ್ಪಣೆ ಸಲ್ಲಿಸಿದವು. ರಾಜ್ಯ ಹಾಗೂ ರಾಷ್ಟç ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸ0ಸ್ಥೆಯ ಪ್ರಾ0ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ರೋವರ್ಸ್ ಅಧಿಕಾರಿ ಪ್ರದೀಪ, ಸ್ಕೌಟ್ಸ್ ಅಧಿಕಾರಿ ಭಾಸ್ಕರ್ ನೆಲ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ0ಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ ಜೈನ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್ ವ0ದಿಸಿದರು. ಶಿಕ್ಷಕ ಜಯಶೀಲ ಕಾರ್ಯಕ್ರಮ ನಿರೂಪಿಸಿದರು.