9 ಕೋಟಿ 6 ಲಕ್ಷ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಮಹಾನಗರ ಪಾಲಿಕೆ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿದ ಶಾಸಕ ಭರತ್ ಶೆಟ್ಟಿ – ಕಹಳೆ ನ್ಯೂಸ್
ಮಂಗಳೂರು : 9 ಕೋಟಿ 6 ಲಕ್ಷ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಪದವು ವಾರ್ಡ್ 22ರ ಮೇರಿಹಿಲ್, ಗುರುನಗರ, ಬಾಂದೊಟ್ಟು ಪರಿಸರದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯನ್ನು ಶಾಸಕರಾದ ಡಾ. ಭರತ್ ಶೆಟ್ಟಿಯವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಮಹಾಪೌರರಾದ ಜಯಾನಂದ ಅಂಚನ್, ಬೂತ್ ಅಧ್ಯಕ್ಷರಾದ ಕಾರ್ತಿಕ್ ನಾಯಕ್, ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಶಕ್ತಿ ಕೇಂದ್ರ ಪ್ರಮುಖ್ ಶೋಭಾ ಪ್ರವೀಣ್, ಕಾವೂರ್ 2 ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಜೀತ್ ಶೆಟ್ಟಿ, ಮಾಜಿ ಮೇಯರ್ ಮಹಾಬಲ ಮಾರ್ಲ, ಸ್ಥಳೀಯರಾದ ಹರೀಶ ಆಳ್ವ, ವೇಣುಗೋಪಾಲ ಸಾಮಂತ್, ಭರತ್, ಶಿವಾನಂದ್, ಹರ್ಶಿತ್, ವೆಂಕಪ್ಪ, ವೇಣುಗೋಪಾಲ ಮಾರ್ಲ, ಚರಣ್, ಉಪೇಂದ್ರ ನಾಯಕ್ , ವಿಜಯ ಪಕ್ಕಲ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.