Recent Posts

Monday, November 25, 2024
ಸುದ್ದಿ

ನರೇಂದ್ರ ಪ. ಪೂ. ಕಾಲೇಜಿನಲ್ಲಿ ರಥ ಸಪ್ತಮಿಯ ಮಹತ್ವ ವಿಶೇಷ ಉಪನ್ಯಾಸ ಕಾರ್ಯಕ್ರಮ – ಕಹಳೆ ನ್ಯೂಸ್

“ರಥಸಪ್ತಮಿಯು ಸಂವತ್ಸರ ಕಾಲ ಗಣನೆಯ ಒಂದು ಬಹುಮುಖ್ಯವಾದ ಆಚರಣೆ. ನಾವು ಹಿರಿಯರಿಂದ ಪಡೆದ ಜ್ಞಾನದ ಪ್ರಕಾರ ಇದು ಸೂರ್ಯನ ಜಯಂತಿಯ ಸಂಕೇತ. ಸೂರ್ಯನ ಬೆಳಕಿನಿಂದ ಸಸ್ಯಗಳು ಸಂವರ್ಧನೆಗೊAಡು ಗಿಡ ಮರಗಳು ಹೂ ಬಿಟ್ಟು, ಹಣ್ಣುಗಳನ್ನು ನೀಡುತ್ತದೆ. ಸೂರ್ಯ ಭೂಮಿಯ ಅಶುದ್ಧವಾದ ನೀರನ್ನು ಆಕರ್ಷಿಸಿ, ಮೋಡಗಳಲ್ಲಿ ಹಿಡಿದು , ಮುಂದೆ ಮಳೆಗಾಲದಲ್ಲಿ ನಮಗೆ ಶುದ್ಧೀಕರಿಸಿ ಮಳೆಯಾಗಿ ಕೊಡುತ್ತಾನೆ. ಸೂರ್ಯನ ಬೆಳಕು ಮತ್ತು ಮಳೆ ಇಲ್ಲದೆ ಸಸ್ಯ ಸಂಪತ್ತಿಲ.್ಲ ಸಸ್ಯ ಸಂಪತ್ತು ಇಲ್ಲದೆ ಸಮೃದ್ಧಿ ಇಲ್ಲ ಆದ್ದರಿಂದಲೇ ಸೂರ್ಯನು ಸಮೃದ್ಧಿಯನ್ನು ದಯಪಾಲಿಸುವ ಐಶ್ವರ್ಯ ದೇವತೆ ಧಾತಾ ಎಂದೆನಿಸಿದ್ದಾನೆ. ಸಕಲ ಜೀವರಾಶಿಗಳನ್ನು ಪೋಷಣೆ ಮಾಡುವ ಸೂರ್ಯನನ್ನು ನಮಗೆ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರಾಗಿ ರಥಸಪ್ತಮಿಯಂದು ಆರಾಧಿಸುವ ಪದ್ಧತಿ ವಿಶ್ವದಾದ್ಯಂತ ಬೆಳೆದು ಬಂದಿದೆ.”ಎAದು ಶ್ರೀ ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್ ಮಂಗಳೂರು ಸಂಸ್ಥೆಯ ಯೋಗ ಶಿಕ್ಷಕರಾದ ಹರಿಪ್ರಸಾದ್ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನರೇಂದ್ರ ಪ. ಪೂ. ಕಾಲೇಜಿನಲ್ಲಿ ನಡೆದ ರಥ ಸಪ್ತಮಿಯ ಮಹತ್ವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಥ ಸಪ್ತಮಿಯ ವಿಶೇಷ ದಿನದಂದು ಸರ‍್ಯನಾರಾಯಣನಿಗೆ ಸಮರ್ಪಿಸುವ ಸರ‍್ಯ ನಮಸ್ಕಾರಗಳಿಂದ ಸಿಗುವ ತೇಜಸ್ಸಿನ ಮಹತ್ವವನ್ನು ವಿವರಿಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ಕಾರ‍್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ರೇಣುಕಾ ಸ್ವಾಗತಿಸಿ, ವಂದಿಸಿದರು.