ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನೀಡಲಾಗುವ ಗಡಿನಾಡ ಚೇತನ ಪ್ರಶಸ್ತಿಗೆ ಈ ಬಾರಿ ಕಾಸರಗೋಡಿನ ಶ್ರೀ ಎಡನೀರು ಮಠ ಆಯ್ಕೆಯಾಗಿದೆ.
ಧಾರ್ಮಿಕ ಪೀಠವಾದರೂ ಕನ್ನಡ ಭಾಷೆ, ಸಂಸಕೃತಿ ಮತ್ತು ಕನ್ನಡ ಪರ ಹೋರಾಟಗಳಲ್ಲಿ ನಿರತವಾಗಿರುವ ಸಾಂಸ್ಕೃತಿಕ ಪೀಠವಾದ್ದರಿಂದ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಫೆ.2ರಂದು ಬೆಂಗಳೂರಿನ ಗಾಂಧಿಭವನದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿಯವರು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಇನ್ನು ಈ ಪ್ರಶಸ್ತಿ ಆಯ್ಕೆಗೆ ಸಮಿತಿಯೊಂದನ್ನ ಹಿರಿಯ ಸಾಹಿತಿಗಳಾದ ಪದ್ಮಶ್ರೀ ಡಾ ದೊಡ್ಡರಂಗೇ ಗೌಡ ಅಧ್ಯಕ್ಷತೆಯಲ್ಲಿ ರಚಿಸಲಾಗಿತ್ತು. ಭಾಲ್ಕಿಯ ಪೂಜ್ಯ ಡಾ ಶ್ರೀ ಚನ್ನಬಸವ ಪಟ್ಟದ ದೇವರು, ಕಯ್ಯಾರ ಕಿಞ್ಞಣ್ಣ ರೈ ಮತ್ತು ಜಯದೇವರಿ ತಾಯಿ ಲಿಗಾಡೆ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿ ಇದಾಗಿದೆ.