ಪತ್ನಿಯ ಸೌಂದರ್ಯವನ್ನ ಬಂಡವಾಳವಾಗಿಸಿಕೊಂಡು ವೇಶ್ಯವಾಟಿಕೆಗೆ ದೂಡಿದ ಪತಿ : ಸಿರಿವಂತನಾಗುತ್ತಿದ್ದಂತೆ ಪತ್ನಿಗೆ ಡಿವೋರ್ಸ್..! -ಕಹಳೆ ನ್ಯೂಸ್
ಪತ್ನಿಯನ್ನ ವೇಶ್ಯಾವಟಿಕೆಗೆ ಬಳಸಿಕೊಡು ಹಣ ಸಂಪಾದಿಸಿ ಇದೀಗ ಆಕೆಯಿಂದ ತನ್ನ ಮರ್ಯಾದೆ ಬೀದಿಪಾಲುಗುತ್ತದೆ ಎಂದು ಹೆಂಗಡಿಗೆ ಡಿವೋರ್ಸ್ ಕೊಟ್ಟ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ತಾಳಿಕಟ್ಟಿ ಸಪ್ತಪದಿ ತುಳಿದ ಪತಿಯೇ ಪತ್ನಿ ಸೌಂದರ್ಯವನ್ನ ಬಂಡವಾಳವಾಗಿಸಿಕೊಂಡು ಈಕೆಯನ್ನ ವೇಶ್ಯಾವಟಿಕೆಗೆ ದೂಡಿದ್ದಾನೆ. ಭಾಗ್ಯಶ್ರೀ ಎನ್ನುವ ಮಹಿಳೆಗೆ 2010 ರಲ್ಲಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗ್ರಾಮವೊಂದರ ಮಲ್ಲಿನಾಥ್ ಜೊತೆ ವಿವಾಹಯಾಗಿತ್ತು. ಮಲ್ಲಿನಾಥ್, ಗ್ರಾಮದಲ್ಲಿ ಪುಟ್ಟ ಕಿರಾಣಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ. ಸಿರಿತನ ಇಲ್ಲದಿದ್ದರು ಕೂಡಾ ತುತ್ತು ಅನ್ನಕ್ಕೆ ಕೊರತೆ ಇರಲಿಲ್ಲ. ಭಾಗ್ಯಶ್ರೀ ಕೂಡಾ ಸುಖದ ಜೀವನ ಬಯಸಿರಲಿಲ್ಲ. ದಂಪತಿಗಳಿಗೆ ಮದುವೆಯಾದ ಎರಡು ವರ್ಷದಲ್ಲಿ ಮಗಳು ಹುಟ್ಟಿದ್ದಳು. ಆದರೆ ಹುಟ್ಟಿದ್ದ ಮಗು, ಬುದ್ದಿಮಾಂದ್ಯವಾಗಿತ್ತು. ಯಾವಾಗ ಬುದ್ದಿಮಾಂದ್ಯ ಮಗಳು ಹುಟ್ಟಿದಳೋ, ಆಗ ಪತಿಯ ವರಸೆ ಕೂಡಾ ಬದಲಾಗಿತ್ತು.
ಹೌದು…. ಮಲ್ಲಿನಾಥನಿಗೆ ತನ್ನ ಪತ್ನಿಯ ಸಂದೌರ್ಯವನ್ನೇ ತನ್ನ ಬಂಡವಾಳ ಮಾಡಿಕೊಂಡಿದ್ದ. ಹೀಗಾಗಿ ನೀನು ನೋಡಲು ಚೆನ್ನಾಗಿದ್ದೀಯಾ. ಹುಟ್ಟಿದ ಮೇಲೆ ಎಲ್ಲರು ಸಾಯಲೇಬೇಕು. ಹೀಗಾಗಿ ನೀನು ವೇಶ್ಯಾವೃತ್ತಿ ದಂಧೆಯನ್ನು ಮಾಡು ಎಂದು ಹೇಳಿದ್ದ. ಇದಕ್ಕೆ ಪತ್ನಿ ತೀರ್ವವಾಗಿ ವಿರೋಧಿಸಿದ್ದಳು. ಆದರೆ ದುರುಳ ಪತಿ, ನೀನು ನಾನು ಹೇಳಿದಂತೆ ಕೇಳದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದನಂತೆ. ಬುದ್ದಿಮಾಂದ್ಯ ಮಗಳಿದ್ದಾಳೆ. ನಾವು ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಹಣ ಗಳಿಸಬೇಕು. ನಾವು ದುಡಿದರೆ ಹಣಗಳಿಸಲು ಆಗಲ್ಲ. ನೀನು ವೇಶ್ಯಾವೃತ್ತಿ ಮಾಡಿದರೆ ಸುಲಭವಾಗಿ ಹಣ ಗಳಿಸಬಹುದು ಎಂದು ಹೇಳಿದ್ದ. ದಿಕ್ಕು ತೋಚದಂತಾದ ಪತ್ನಿ, ಪತಿಯ ಮಾತಿಗೆ ಒಪ್ಪಿಗೆ ಸೂಚಿಸಿದ್ದಳು.
ಇನ್ನು ಒತ್ತಾಯಪೂರ್ವಕವಾಗಿ ಪತ್ನಿಯನ್ನೇ ವೇಶ್ಯಾವೃತ್ತಿ ದಂಧೆಗೆ ದೂಡಿದ್ದ ಪತಿ, ಮುಂದೆ ತಾನೇ ಮನೆಗೆ ಗಿರಾಕಿಗಳನ್ನು ಕರೆದುಕೊಂಡು ಬರಲು ಆರಂಭಿಸಿದ್ದಾನೆ. ಅಧಿಕಾರಿಗಳು, ಗುತ್ತಿಗೆದಾರರು ಸೇರಿದಂತೆ ಅನೇಕರನ್ನು ತಾನೇ ಕರೆದುಕೊಂಡು ಬಂದು ಮನೆಯಲ್ಲಿ ಬಿಟ್ಟು, ತಾನು ಹೊರಗಡೆ ಇರ್ತಿದ್ದನಂತೆ. ಅನೇಕರ ಮನೆಗೆ ತಾನೇ ಪತ್ನಿಯನ್ನು ಕಾರ್ನಲ್ಲಿ ಕಳುಹಿಸುತ್ತಿದ್ದನಂತೆ. ಹೀಗೆ ಅನೇಕ ವರ್ಷಗಳ ಕಾಲ ಪತ್ನಿಯನ್ನು ವೇಶ್ಯಯನ್ನಾಗಿ ಮಾಡಿ ಪತಿ ಹಣ ಸಂಪಾದಿಸಿದ್ದ. ಇದರ ನಡುವೆ ಮತ್ತೆ ಮೂರು ಮಕ್ಕಳು ಕೂಡಾ ಹುಟ್ಟಿದ್ದವು.
ಪತ್ನಿಯನ್ನೇ ಮುಂದೆ ಬಿಟ್ಟು ದಂಧೆ ನಡೆಸಿದ್ದ ಪತಿ, ಸಾಕಷ್ಟು ಹಣ ಸಂಪಾದಿಸಿದ್ದನಂತೆ. ಹಣ ಹೆಚ್ಚಾಗುತ್ತಿದ್ದಂತೆ, ಮರಳು ಗಣಿಗಾರಿಕೆ, ಗುತ್ತಿಗೆದಾರ ಕೆಲಸ ಮಾಡಿ, ಕೋಟ್ಯಂತರ ರೂಪಾಯಿ ಹಣ ಸಂಪಾದಿಸಿದ್ದಾನಂತೆ. ಇತ್ತ ಹಣ ಹೆಚ್ಚಾಗುತ್ತಿದ್ದಂತೆ ಪತಿಯ ಸ್ಥಾನಮಾನ ಕೂಡಾ ಬದಲಾಗಿತ್ತು. ಹೀಗಾಗಿ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದು, ನಿನ್ನಿಂದ ನನ್ನ ಗೌರವ ಹಾಳಾಗುತ್ತಿದೆ. ನೀನು ವೇಶ್ಯಾವೃತ್ತಿ ದಂಧೆ ಮಾಡ್ತಿಯಾ, ಅನೇಕರ ಜೊತೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಹೇಳಿ ಮನೆಯಿಂದ ಹೊರಹಾಕಿದ್ದಾನಂತೆ.
ಒಂದು ಬುದ್ದಿಮಾಂದ್ಯ ಮಗಳು ಸೇರಿ ನಾಲ್ವರು ಮಕ್ಕಳನ್ನು ಕರೆದುಕೊಂಡು ಇದೀಗ ಭಾಗ್ಯಶ್ರೀ, ಜೀವನ ನಡೆಸಲು ಪರದಾಡುತ್ತಿದ್ದಾಳೆ. ಕೋಟಿ ಕೋಟಿ ಸಂಪಾದಿಸಿರುವ ಪತಿ, ಬಿಡಿಗಾಸು ನೀಡದೆ ಹೊರಗೆ ಹಾಕಿದ್ದರಿಂದ ಜೀವನ ನಡೆಸಲು ಕೂಡಾ ಪರಾಡುತ್ತಿದ್ದಾಳೆ. ಈ ಬಗ್ಗೆ ಕಲಬುರಗಿ ಮಹಿಳಾ ಪೆÇಲೀಸ್ ಠಾಣೆಯಲ್ಲಿ ಪತಿಯ ವಿರುದ್ದ ದೂರು ಕೂಡಾ ದಾಖಲಿಸಿದ್ದಾಳೆ. ಆದರೆ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದಾನೆ. ಆತ ಎಲ್ಲಿದ್ದಾನೆ ಅಂತ ಹುಡುಕುವ ಕೆಲಸವನ್ನು ಕೂಡಾ ಪೆÇಲೀಸರು ಸರಿಯಾಗಿ ಮಾಡ್ತಿಲ್ಲವಂತೆ. ಹೀಗಾಗಿ ಮಹಿಳೆ ನ್ಯಾಯಕ್ಕಾಗಿ ಅಂಗಲಾಚಿದ್ದಾಳೆ.